ಸೊರಗುತ್ತಿದೆ ಉದ್ಯಾನವನ; ಮೂಲಸೌಲಭ್ಯ ಕಲ್ಪಿಸಲು ಆಗ್ರಹ
ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲನಿ ಮತ್ತು ಕೆಎಚ್‌ಬಿ ಕಾಲನಿ ಮಧ್ಯದಲ್ಲಿರುವ, ಅರಣ್ಯ ಇಲಾಖೆಯಿಂದ ನಿರ್ಮಿಸಿದ ಪ್ರಭಾತವನ ಎಂಬ ಉದ್ಯಾನ ವ್ಯವಸ್ಥಿತ ನಿರ್ವಹಣೆ ಕೊರತೆಯಿಂದ ಸೊರಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಹೊನ್ನಾವರ (ಅ.8) : ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲನಿ ಮತ್ತು ಕೆಎಚ್‌ಬಿ ಕಾಲನಿ ಮಧ್ಯದಲ್ಲಿರುವ, ಅರಣ್ಯ ಇಲಾಖೆಯಿಂದ ನಿರ್ಮಿಸಿದ ಪ್ರಭಾತವನ ಎಂಬ ಉದ್ಯಾನ ವ್ಯವಸ್ಥಿತ ನಿರ್ವಹಣೆ ಕೊರತೆಯಿಂದ ಸೊರಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು ಸ್ಥಳೀಯರು ಆಗ್ರಹಿಸಿದ್ದಾರೆ. ನಿರ್ವಹಣೆ ಕೊರತೆಯಿಂದ ಉತ್ತಮ ಜಾತಿಯ ಗಿಡಗಳು ನಾಶವಾಗುತ್ತ ಹೋಗುತ್ತಿದೆ. ಪ್ರತಿವರ್ಷ ಉದ್ಯಾನದ ಗಿಡ-ಗಂಟಿಗಳನ್ನು ತೆರವುಗೊಳಿಸುವುದೇ ಕಷ್ಟದ ಕೆಲಸ. ಆದರೂ ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿಯ ನಿವಾಸಿಗಳ ನೆರವು ಮತ್ತು ಪಟ್ಟಣ ಪಂಚಾಯಿತಿ ಸಹಕಾರದಿಂದ ಸ್ವಚ್ಛ ಮಾಡಲಾಗುತ್ತಿದೆ.
ಕಾರವಾರ: ನಿರ್ವಹಣೆ ಇಲ್ಲದೆ ಸೊರಗಿದ ರಾಕ್ ಗಾರ್ಡನ್..!
ಸುತ್ತಲಿನ ತಂತಿ ಬೇಲಿ ಜೀರ್ಣಾವಸ್ಥೆಯಲ್ಲಿದೆ. ಹೊಸದಾಗಿ ನೆಟ್ಟಗಿಡಗಳು ಕೂಡ ದನಕರುಗಳ ಪಾಲಾಗುತ್ತಿವೆ. ಮಳೆಗಾಲದಲ್ಲಿ ವಾಕಿಂಗ್ ಬರುವವರು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದ ನಿದರ್ಶನಗಳಿವೆ. ದೀಪದ ವ್ಯವಸ್ಥೆ, ಮಕ್ಕಳ ಆಟಿಕೆ, ಹಿರಿಯ ನಾಗರಿಕರಿಗೆ ವ್ಯಾಯಾಮದ ಪರಿಕರ ಆವಶ್ಯಕತೆ ಇದೆ. ಇಲ್ಲಿಯ ಹಿರಿಯ ನಾಗರಿಕರು ವಾಕಿಂಗ್ ಮಾಡಲು ಸೂಕ್ತ ಸ್ಥಳ ಇಲ್ಲದೇ ಹೆದ್ದಾರಿಯಲ್ಲಿ ತಿರುಗಾಡಿ ಅಲ್ಲಿಯ ಬದಿಯ ಕಟ್ಟೆಯಲ್ಲಿ ಕುಳಿತುಕೊಳ್ಳುವುದನ್ನು ಕಾಣಬಹುದು. ಇಲ್ಲಿ ನಿರ್ಮಿಸಿದ ಪ್ಯಾರಗೋಲದಲ್ಲಿ ಕಾಲೇಜು ವಿದ್ಯಾರ್ಥಿಗಳು ಬಂದು ಮೋಜು-ಮಸ್ತಿ ಮಾಡಿ, ತ್ಯಾಜ್ಯ ಅಲ್ಲೇ ಚೆಲ್ಲಿ ಹೋಗುತ್ತಿದ್ದಾರೆ. ಅದರ ಸ್ವಚ್ಛತೆಯೇ ಸವಾಲಿನ ಕೆಲಸವಾಗಿದೆ.
ನಿರ್ಲಕ್ಷ್ಯಕ್ಕೆ ಬೇಸರ: ಉದ್ಯಾನವನ್ನು ಅರಣ್ಯ ಇಲಾಖೆ ನಿರ್ಮಿಸಿರುವುದರಿಂದ ಪಪಂ ಕೂಡ ಅದರ ಅಭಿವೃದ್ಧಿಗೆ ಹಿಂದು ಮುಂದು ನೋಡುತ್ತಿದೆ. ಕಾಲಕಾಲಕ್ಕೆ ಉದ್ಯಾನ ಸ್ವಚ್ಛಗೊಳಿಸಿ ಸುಂದರವಾಗಿ ಇರಿಸುವುದು ಅರಣ್ಯ ಇಲಾಖೆ ಮತ್ತು ಪಪಂ ಜವಾಬ್ದಾರಿಯಾದರೂ ಅವರು ಮರೆತಂತಿದೆ ಎನ್ನುವುದು ಪ್ರಭಾತವನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಿ.ಡಿ. ಮಡಿವಾಳ ಅವರ ಆರೋಪವಾಗಿದೆ.
ಆರು ತಿಂಗಳ ಹಿಂದೆ ಹುಡುಗರ ಪುಂಡಾಟಕ್ಕೆ ಪಾರ್ಕ್ನ ಅಮೂಲ್ಯ ಗಿಡಗಳು ಬೆಂಕಿಗೆ ಅಹುತಿಯಾದ ಘಟನೆ ಕೂಡ ನಡೆದಿದೆ. ಶಾಸಕರಿಗೆ, ಅರಣ್ಯಾಧಿಕಾರಿಗಳಿಗೆ, ಪಪಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಇಲ್ಲ ಎಂದಿದ್ದಾರೆ.
ಬಿಸಿಲಿನಿಂದ ರಕ್ಷಣೆ ಪಡೆಯಲು ಚಾಲಕನ ಕೂಲ್ ಕೂಲ್ ಐಡಿಯಾ, ಆಟೋ ಮೇಲೆ ಗಾರ್ಡನ್!
ಪರಿಸರ ಪ್ರೇಮಿಗಳಿಂದ ಕೊಡುಗೆ: ಇಲ್ಲೊಂದು ಪರಿಸರಪ್ರೇಮಿ ಕುಟುಂಬ ಪ್ರಚಾರ ಬಯಸದೆ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಅರಣ್ಯ ಇಲಾಖೆಯ ನರ್ಸರಿಯಿಂದ ಹಣ ಕೊಟ್ಟು ನೂರಕ್ಕೂ ಅಧಿಕ ಗಿಡಗಳನ್ನು ಸ್ವತಃ ಹೊಂಡ ತೆಗೆದು ಅರಣ್ಯ ಪ್ರದೇಶ, ಹೆದ್ದಾರಿ ಪಕ್ಕ, ಶಾಲೆ, ಕಾಲೇಜಿನ ಮೈದಾನ, ಪಾರ್ಕ್ಗಳಲ್ಲಿ ಗಿಡ ನೆಟ್ಟು ಸಂತಸಪಡುತ್ತಿರುವ ತಾಯಿ ಸುಮನಾ ಹೆಗ್ಡೆ ಮತ್ತು ಮಗಳು ಡಾ. ವಿದ್ಯಾ ಅವರ ಪರಿಸರ ಸೇವೆ ಇತರರಿಗೂ ಮಾದರಿ. ಅವರು ಪ್ರಭಾತವನ ಉದ್ಯಾನವನದಲ್ಲಿ ಗಿಡ ನೆಟ್ಟು ತಮ್ಮ ಕೊಡುಗೆ ನೀಡಿದ್ದಾರೆ.