ಹೊಸನಗರ(ಸೆ.05): ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 125 ವರ್ಷದ, ಬ್ರಿಟಿಷ್‌ ಕಾಲದ ಸೇತುವೆ ಮೇಲೆ ಸುಮಾರು 2 ಅಡಿ ನೀರು ನಿಂತ ಪರಿಣಾಮ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ ಆಗಿದೆ.

ಲಿಂಗನಮಕ್ಕಿ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ತುಂಬಿದಾಗಲೆಲ್ಲ ಈ ಸಮಸ್ಯೆ ಇರುತ್ತದೆ. ಆರು ದಶಕಗಳಿಂದ ಪರ್ಯಾಯ ಸೇತುವೆ ಮಾಡಿ ಎಂಬ ಕೂಗು ಇನ್ನೂ ಅನುಷ್ಠಾನ ಆಗಿಲ್ಲದ ಕಾರಣ ಸುತ್ತಾ, ಮಳಲಿ, ಬಾಳೆಕೊಪ್ಪ, ಮಣಸಟ್ಟೆ, ಏರಗಿ, ಟೆಂಕಬೈಲು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ಕಡಿತವಾಗಿದೆ.

ಶಿವಮೊಗ್ಗ: ರಸ್ತೆ ಮೇಲೆ 2 ಅಡಿ ನೀರು, ಬಾಳೆಕೊಪ್ಪ ಸಂಪರ್ಕ ಸಂಪೂರ್ಣ ಕಡಿತ

ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆ ಮೇಲೆ ಮರಳು, ಕಲ್ಲು ತುಂಬಿದ ಲಾರಿಗಳ ಸಂಚಾರದಿಂದಾಗಿ ಸೇತುವೆ ಸಹ ಇಂದೋ ನಾಳೆ ಬೀಳುವ ಹಂತದಲ್ಲಿದೆ.

ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದ ವೇಳೆಯಲ್ಲಿ ಕರ್ನಾಟಕ ರಸ್ತೆ, ಸೇತುವೆ ಅಭಿವೃದ್ಧಿ ನಿಗಮದ ವತಿಯಿಂದ ರು.3 ಕೋಟಿ ವೆಚ್ಚದ ಸೇತುವೆ ಮಂಜೂರಾಗಿ 3 ವರ್ಷ ಕಳೆದರೂ ಜಾರಿಯಾಗಿಲ್ಲ. ಈ ವರ್ಷವಾದರೂ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಸಂತ್ರಸ್ತರ ಬವಣೆ ತೀರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

'ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ'