ಶಿವಮೊಗ್ಗ(ಸೆ.04): ಹೊಸನಗರ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇದ್ದು, ನಗರ ಹೋಬಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ಎರಡು ಅಡಿ ನೀರು ನಿಂತು ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿತ್ತು.

ಇದರಿಂದಾಗಿ ಈ ಭಾಗದ ಮಕ್ಕಳಿಗೆ ಮಂಗಳವಾರ ಶಾಲೆಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಈ ರಸ್ತೆಗೊಂದು ಮೋರಿ ಬೇಕೆಂಬುದು ಗ್ರಾಮಸ್ಥರ ಬಹಳ ಸಮಯದ ಬೇಡಿಕೆ. ಆದರೆ ಇದನ್ನು ಯಾರೂ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ. ಇದರ ಪರಿಣಾಮ ರಸ್ತೆಯ ಮೇಲೆಯೇ ನೀರು ಬಂದಿದೆ.

ನೀರು ನಿಂತು ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದ್ದಂತೆ ಹೊಸನಗರ ತಹಸೀಲ್ದಾರ್‌ ಶ್ರೀಧರಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.