Asianet Suvarna News Asianet Suvarna News

Dharwad News: 5 ತಿಂಗಳಿಂದ ಲಿಂಗನಕೊಪ್ಪ ರೈತರಿಗೆ ಸಿಗ್ತಿಲ್ಲ ಹಾಲಿನ ಹಣ!

  • ಐದು ತಿಂಗಳಿಂದ ಲಿಂಗನಕೊಪ್ಪ ರೈತರಿಗೆ ಸಿಗ್ತಿಲ್ಲ ಹಾಲಿನ ಹಣ!
  • ಹಾಲಿನ ಹಣ ನೀಡದೆ ಸತಾಯಿಸುತ್ತಿರುವ ಧಾರವಾಡ ಹಾಲು ಉತ್ಪಾದಕರ ಒಕ್ಕೂಟ
  •  ನ 25 ರ ಸಂಜೆಯೊಳಗೆ ಹಣ ಪಾವತಿಸದ್ದರೆ ಹೋರಾಟದ ಎಚ್ಚರಿಕೆ 
linganakoppa milk dairy have not been payed money to farmers since 5months
Author
First Published Nov 25, 2022, 1:23 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ನ.25) : ಜಿಲ್ಲೆಯ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ 40ಕ್ಕೂ ಹೆಚ್ಚು ರೈತರಿಗೆ ಕಳೆದ ಐದು ತಿಂಗಳಿಂದ ಸರಬರಾಜು ಮಾಡಿದ ಹಾಲಿನ ಹಣ ನೀಡದೆ ಧಾರವಾಡ ಹಾಲು ಉತ್ಪಾದಕರ ಒಕ್ಕೂಟ ಸತಾಯಿಸುತ್ತಿರುವುದು ಸರಿಯಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹಾಗೂ ಮುತ್ತಣ್ಣ ಶಿವಳ್ಳಿ ಹಾಗೂ ರೈತರ ನಿಯೋಗ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ.ಎಂ. ಲೋಹಿತೇಶ್ವರ ಅವರನ್ನು ಭೇಟಿಯಾಗಿ ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಯಾವ ರೈತರಿಗೆ ತೊಂದರೆ ನೀಡದೆ ಕೇವಲ ಲಿಂಗನಕೊಪ್ಪ ಹಾಲು ಉತ್ಪಾದಕರ ಸಂಘದ ಸದಸ್ಯರನ್ನಷ್ಟೇ ಟಾರ್ಗೆಟ್ ಮಾಡಿ ಅನಗತ್ಯ ಕಿರುಕುಳ ಏಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು

ಇದರಿಂದಾಗಿ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾದರು. ಅಲ್ಲದೆ, ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ತಡಕಾಡಿದರು. ಜೊತೆಗೆ ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು ಹಣ ಬಿಡುಗಡೆ ಮಾಡಲು ಕ್ರಮ ಜರುಗಿಸುವ ಭರವಸೆ ನೀಡಿದರು. ಆದರೆ ಇಷ್ಟಕ್ಕೆ ಸಮಾಧಾನಗೊಳ್ಳದ ರೈತರು ಒಂದು ವೇಳೆ ನ. 25 ರ ಸಂಜೆಯೊಳಗೆ  ಹಣ ಪಾವತಿಸದಿದ್ದರೆ ನ.26 ರಂದು ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಎದುರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗಡುವು ನೀಡಿದರು.

ಹಾಲಿನ ದರ 3 ರೂ. ಹೆಚ್ಚಳ ಬೇಡವೆಂದ ಸಿಎಂ ಬೊಮ್ಮಾಯಿ

ಅನೇಕ ರೈತರು ಪ್ರತಿನಿತ್ಯ 15 ಲೀಟರ್ ನಿಂದ 30 ಲೀಟರ್ ವರೆಗೆ ಹಾಲು ಪೂರೈಕೆ ಮಾಡಿದ್ದಾರೆ ರೈತರಿಗೆ ಸಕಾಲಕ್ಕೆ ಹಣ ಬಾರದ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಲದ ಹಣ ವಸೂಲಿಗೆ ಬಂದವರು ಎಮ್ಮೆ ಹಸುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

 ಕಳೆದ ಹಲವಾರು ತಿಂಗಳಿಂದ ಕಚೇರಿ ಅಲೆದಾಡುತ್ತಿರುವ ರೊಚ್ಚಿಗೆದ್ದ ರೈತರು ಹಣ ಕೇಳಲು ಬಂದವರಿಗೆ ಪೊಲೀಸರನ್ನು ಕರೆಯಿಸಿ ಹೆದರಿಸುತ್ತಿರುವುದು ಎಂದು ಹೇಳಲಾಗುತ್ತಿದೆ. ಇಲ್ಲಸಲ್ಲದ ನೆಪ ಹೇಳಿ ಕಾಲಹರಣ ಮಾಡುತ್ತಿರುವುದು ಯಾವ ಪುರುಶಾರ್ಥಕ್ಕೆ ಎಂದು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ: ರೈತರ ಮಗ್ಗಲು ಮುರಿಯುವ ಕಬ್ಬಿನ ಲಗಾನಿ..!

 ಈ ಸಂದರ್ಭದಲ್ಲಿ ರೈತರಾದ ಬಸವರಾಜ ಹಡಪದ, ಬಸವರಾಜ ಇಂಗನಹಳ್ಳಿ, ನಾಗರಾಜ ಅಡಕಿ, ರುದ್ರಪ್ಪ ಹದ್ದಣ್ಣವರ, ರಮೇಶ ಕಮ್ಮಾರ, ಬಸ್ಸು ಸಾವಂತನವರ ಉಪಸ್ಥಿತರಿದ್ದರು

Follow Us:
Download App:
  • android
  • ios