Asianet Suvarna News Asianet Suvarna News

Covid 19 Variant: ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

*  ಜನರು ಗುಂಪು ಸೇರದಂತೆ ಕಡಿವಾಣಕ್ಕೆ ಚಿಂತನೆ: ಮುಖ್ಯ ಆಯುಕ್ತ ಗೌರವ್‌ ಗುಪ್ತಾ
*  ಕೋವಿಡ್‌ ಸೋಂಕಿತ ಪ್ರಕರಣಗಳ ಮೇಲೆ ನಿಗಾ
*  ವಿದೇಶದಿಂದ ಬಂದವರು ನೆಗೆಟಿವ್‌ ವರದಿ ಇದ್ರೂ ಕ್ವಾರಂಟೈನ್‌ ಕಡ್ಡಾಯ 
 

Likely Break to Christmas and New Year Celebration Due to Omicron in Bengaluru grg
Author
Bengaluru, First Published Dec 18, 2021, 12:30 PM IST

ಬೆಂಗಳೂರು(ಡಿ.18): ಒಮಿಕ್ರೋನ್‌(Omicron) ಮತ್ತು ಕೋವಿಡ್‌(Covid19) ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌(Christmas) ಮತ್ತು ಹೊಸ ವರ್ಷಾಚರಣೆಯಲ್ಲಿ(New Year Celebration) ಜನರು ಗುಂಪು ಸೇರದಂತೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದರು.

ಶುಕ್ರವಾರ ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್‌ ಹರಡದಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ(Covid Technical Advisory Committee) ರಾಜ್ಯ ಸರ್ಕಾರಕ್ಕೆ(Government of Karnataka) ಸೂಕ್ತ ಸಲಹೆ, ಸೂಚನೆ ಕೊಡುತ್ತಾರೆ. ಉನ್ನತ ಮಟ್ಟದ ಸಮಿತಿಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ಬಿಬಿಎಂಪಿ ಜಾರಿಗೆ ತರಲಿದೆ. ಒಮಿಕ್ರೋನ್‌ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಕಾರ್ಯತತ್ಪರರಾಗಿದ್ದು, ಮುಂಜಾಗ್ರತೆ ವಹಿಸಿದ್ದೇವೆ ಎಂದರು.

Omicron Variant: ಸೋಂಕಿತರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ

ಬಿಬಿಎಂಪಿ ನಿಯಂತ್ರಣ ಕೊಠಡಿಗಳು(Control Rooms) ಕೋವಿಡ್‌ ಸೋಂಕಿತ ಪ್ರಕರಣಗಳ ಮೇಲೆ ನಿಗಾ ವಹಿಸಿವೆ. ಪ್ರತಿ ದಿನವೂ ಸುಮಾರು 40 ಸಾವಿರಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ(Covid Test) ನಡೆಯುತ್ತಿದೆ. ದೇಶಗಳಿಂದ ಬರುವವರಿಗೆ ಪ್ರತ್ಯೇಕ ಪರೀಕ್ಷೆ ಮಾಡುತ್ತಿದ್ದೇವೆ. ವಿಶೇಷವಾಗಿ ಹೈರಿಸ್ಕ್‌ ದೇಶಗಳಿಂದ ಆಗಮಿಸಿದವರಲ್ಲಿ ಪಾಸಿಟಿವ್‌ ದೃಢಪಟ್ಟರೆ ಮಾದರಿಯನ್ನು ಜಿನೊಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ವರದಿ ನೆಗೆಟಿವ್‌ ಬಂದವರಿಗೂ 7 ದಿನ ಸ್ವಯಂ ಕ್ವಾರಂಟೈನ್‌ ಮಾಡಲು ಕ್ರಮ ಕೈಗೊಂಡಿದ್ದು 8ನೇ ದಿನ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ(Karnataka) ಎರಡೂ ಡೋಸ್‌ ಲಸಿಕೆ(Vaccine) ಪಡೆದವರಿಗೆ ಎಲ್ಲಾ ಕಡೆಗಳಲ್ಲಿಯೂ ತಪಾಸಣೆಗೆ ಅನುಕೂಲವಾಗುವಂತೆ ‘ಯುನಿವರ್ಸಲ್‌ ಪಾಸ್‌’ಅನ್ನು(Universal Pass) ಮಹಾರಾಷ್ಟ್ರ(Maharashtra) ಮಾದರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೂ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೌರವ ಗುಪ್ತಾ ಅವರು, ಈ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಎರಡೂ ಡೋಸ್‌ ಲಸಿಕೆ ಪಡೆದ ಕುರಿತು ಮೊಬೈಲ್‌ಗೆ ಬರುವ ಸಂದೇಶವನ್ನೇ ತೋರಿಸಿ ಸದ್ಯಕೆ ಓಡಾಡಬಹುದು. ಇದು ಯುನಿವರ್ಸಲ್‌ ಪಾಸ್‌ಗೆ ಸಮಾನಂತರವಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.

ವಿದೇಶಗಳಿಂದ ಬಂದವರನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯೇ ಕ್ವಾರಂಟೈನ್‌(Quarantine) ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡರೆ ಅನುಷ್ಠಾನಕ್ಕೆ ತರುತ್ತೇವೆ. ವಿದೇಶದಿಂದ ಬಂದವರು ನೆಗೆಟಿವ್‌ ವರದಿ ಇದ್ದರೂ ಕ್ವಾರಂಟೈನ್‌ ಕಡ್ಡಾಯವಾಗಿದೆ. ಕೋವಿಡ್‌ ಪಾಸಿಟಿವ್‌ ದೃಢಪಟ್ಟರೆ ಅಂತವರ ಮಾದರಿಯನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಿಕೊಡುತ್ತೇವೆ. ಅವರ ಸಂಪರ್ಕಿತರನ್ನು ಪತ್ತೆ ಮಾಡಿ ಐಸೋಲೇಷನ್‌ ಮಾಡುವುದರ ಜೊತೆಗೆ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದು ಹೇಳಿದರು.

Covid In Karnataka: ಅರ್ಧ ಗಂಟೆಯಲ್ಲೆ ಕೊರೋನಾ ವರದಿ, ಬಂದಿದೆ ಹೊಸ ಟೆಸ್ಟ್!

ಕ್ರಿಸ್‌ಮಸ್‌, ಹೊಸವರ್ಷ ರಶ್‌ಗೆ ನಿರ್ಬಂಧ ಹೇರಿ

ಬೆಂಗಳೂರು(Bengaluru) ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನೈಟ್‌ ಕರ್ಫ್ಯೂ(Night Curfew), ಅಗತ್ಯವಿರುವ ಕಡೆ 144 ಸೆಕ್ಷನ್‌ ಜಾರಿಗೊಳಿಸಬೇಕು. ಚರ್ಚ್‌ ಧಾರ್ಮಿಕ ಸ್ಥಳಗಳಲ್ಲಿ ಜನ ಸೇರುವುದಕ್ಕೆ ನಿರ್ಬಂಧ ವಿಧಿಸಬೇಕು. ಹೊಸ ವರ್ಷಾಚರಣೆಗೆ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಬಾರದು.

ಒಮಿಕ್ರೋನ್‌ ಆತಂಕ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಜನ ಮಿತಿ ಮೀರಿ ಗುಂಪುಗೂಡುವುದನ್ನು ತಡೆಗಟ್ಟಲು ಕೊರೋನಾ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ನೀಡಿರುವ ಸಲಹೆಗಳಿವು.
ಹೊಸ ವರ್ಷಾಚರಣೆ ನಿಯಂತ್ರಣ ಮೀರಿ ಹೋಗುವುದನ್ನು ತಪ್ಪಿಸಲು ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಡಿ.30ರಿಂದ ಜನವರಿ 2ರ ಬೆಳಿಗ್ಗೆ 5 ಗಂಟೆವರೆಗೂ ನೈಟ್‌ ಕರ್ಫ್ಯೂ ಜಾರಿಗೊಳಿಸಬೇಕು. ಅಗತ್ಯವಿರುವ ಕಡೆಗಳಲ್ಲಿ 144 ಸೆಕ್ಷನ್‌ ಜಾರಿಗೊಳಿಸಬೇಕು. ಇನ್ನು ಕ್ರಿಸ್‌ಮಸ್‌ ಆಚರಣೆಗೂ ಕೆಲ ಮಿತಿಗಳನ್ನು ವಿಧಿಸಲು ಶಿಫಾರಸು ಮಾಡಲಾಗಿದ್ದು, ಡಿ.22ರಿಂದ ಜ.2ವರೆಗೂ ದೇವಸ್ಥಾನ, ಚರ್ಚ್‌(Church), ಮಸೀದಿಗಳಲ್ಲಿ(Masjid) ಶೇ.50 ರಷ್ಟು ಜನಮಿತಿ ಜಾರಿಗೊಳಿಸಲು ಸೂಚಿಸಲಾಗಿದೆ.
 

Follow Us:
Download App:
  • android
  • ios