Kudligi: ಕಾರ್ಯಕರ್ತೆಯರಿಗೆ 13 ಸಾವಿರ ವೇತನ ನಿಗದಿ ಮಾಡಲಿ: ಸಂತೋಷ ಲಾಡ್
* ದೇಶದಲ್ಲಿರುವ 11,58,405 ಅಂಗನವಾಡಿ ಕಾರ್ಯಕರ್ತೆಯರು
* ರಾಜ್ಯದಲ್ಲಿ 24 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 80 ಸಾವಿರ ಕಾರ್ಯಕರ್ತೆಯರಿದ್ದಾರೆ
* ಮೆಡಿಕಲ್ ಕಿಟ್ ಕೊಡುವುದು ಮಿಷನ್ ಸಂಜೀವಿನಿಯ ಉದ್ದೇಶ
ಕೂಡ್ಲಿಗಿ(ಡಿ.19): ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದಿನದ 24 ತಾಸು ಕರ್ತವ್ಯದಲ್ಲಿರುವ ಯಂತ್ರಗಳಂತೆ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್(Congress) ಮುಖಂಡ ಸಂತೋಷ್ ಲಾಡ್(Santosh Lad) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಸಂತೋಷ್ ಲಾಡ್ ಫೌಂಡೇಶನ್(Santosh Lad Foundation) ವತಿಯಿಂದ ತಾಲೂಕಿನ ಅಂಗನವಾಡಿ(Anganwadi) ಮತ್ತು ಆಶಾ ಕಾರ್ಯಕರ್ತೆಯರಿಗೆ(Asha Workers) ಆಯೋಜಿಸಿದ್ದ ಆಹಾರದ ಕಿಟ್ ವಿತರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ(India) 11,58,405 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ರಾಜ್ಯದಲ್ಲಿ(Karnataka) 24 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 80 ಸಾವಿರ ಕಾರ್ಯಕರ್ತೆಯರಿದ್ದಾರೆ. ನಿಮ್ಮೆಲ್ಲರಿಂದ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು(Nutritional Food) ವಿತರಿಸುವ ಕಾರ್ಯ ನಡೆದಿದೆ. 2005ರಲ್ಲಿ ಆರಂಭವಾದ ಆಶಾ ಕಾರ್ಯಕರ್ತೆಯರು ದೇಶದಲ್ಲಿ 9 ಲಕ್ಷ ಜನರಿದ್ದಾರೆ. ರಾಜ್ಯದಲ್ಲಿ 48 ಸಾವಿರದಷ್ಟಿದ್ದಾರೆ ಇವರೆಲ್ಲರೂ ಗರ್ಭಿಣಿಯರು, ಮಕ್ಕಳ ಸುರಕ್ಷತೆಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಮಕ್ಕಳ ಆರೋಗ್ಯ ಸುರಕ್ಷತಾ ಕಾರ್ಯಕ್ರಮಕ್ಕೆ ಕಡಿಮೆ ಅನುದಾನ ನೀಡುತ್ತಿರುವುದು ಕಳವಳದ ಸಂಗತಿ. ಶೇ. 75ರಷ್ಟು ಮಕ್ಕಳ ತೂಕ ಮತ್ತು ವಯಸ್ಸಿಗೆ ಮ್ಯಾಚ್ ಆಗದೆ ಇರುವ ಮಾಹಿತಿ ಬಿಜೆಪಿ ಸರ್ಕಾರದಲ್ಲಿದೆ(BJP Government) ಎಂದರು.
Karnataka Politics| ಸಂತೋಷ್ ಲಾಡ್ ಬಳ್ಳಾರಿಯಿಂದ ಸ್ಪರ್ಧೆ?
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇರಳ ಮಾದರಿಯಂತೆ ರಾಜ್ಯದಲ್ಲಿ 13 ಸಾವಿರ ವೇತನ ಸಿಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನಾನು ರಾಜ್ಯದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ(Siddaramaiah) ಸರ್ಕಾರವಿದ್ದಾಗ ರಾಜ್ಯದ ದಿನಗೂಲಿ ಪೌರಕಾರ್ಮಿಕರಿಗೆ ಮಾಸಿಕ 13 ಸಾವಿರ ವೇತನ(Salary) ನಿಗದಿ ಮಾಡಿದ್ದೇನೆ ಎಂದರು.
ಸಂಜೀವಿನಿ ಫೌಂಡೇಶನ್ ಅಧ್ಯಕ್ಷೆ ಕವಿತಾ ರೆಡ್ಡಿ ಮಾತನಾಡಿ, ಆಸ್ಪತ್ರೆಗೆ ಅಗತ್ಯ ಸಲಕರಣೆ ಹಾಗೂ 7500 ಆಶಾ ಕಾರ್ಯರ್ತೆಯರಿಗೆ ಮೆಡಿಕಲ್ ಕಿಟ್‌ಗಳನ್ನು ಕೊಡುವುದು ಮಿಷನ್ ಸಂಜೀವಿನಿಯ ಉದ್ದೇಶವಾಗಿದೆ. ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್ ಪ್ರತಿರೋಧಕ ವ್ಯಾಕ್ಸಿನೇಷನ್(Covid VAccination) ಆಗಿರುವುದಕ್ಕೆ ಆಶಾ ಕಾರ್ಯಕರ್ತೆಯರೇ ಕಾರಣ. ಅಂಗನವಾಡಿ ಕಾರ್ಯಕರ್ತೆಯರೂ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ವಿತರಿಸಿರುವುದು ಹೆಮ್ಮೆಯ ಕೆಲಸ ಎಂದು ತಿಳಿಸಿದರು.
ಕಾಂಗ್ರೆಸ್ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಮಣಿ ಜಿಂಕಾಲ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಮಹಾಂತಮ್ಮ, ಆಶಾ ಕಾರ್ಯಕರ್ತೆಯರ ಸಂಘದ ಮೆಂಟರ್ ಲತಾ, ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ರಘು, ಕೆಪಿಸಿಸಿ ಸದಸ್ಯ ಲೋಕೇಶ್ ವಿ. ನಾಯಕ, ಗುಳಿಗಿ ವೀರೇಂದ್ರ, ಕೆ.ಜಿ. ಕುಮಾರಗೌಡ್ರು, ನರಸಿಂಹನಗಿರಿ ವೆಂಕಟೇಶ್, ಸಂಜೀವಿನಿ ಫೌಂಡೇಶನ್ ಅಧ್ಯಕ್ಷೆ ಕವಿತಾರೆಡ್ಡಿ, ಮುಂಡ್ರಿಗಿ ನಾಗರಾಜ್, ಕುಮಾರಗೌಡ, ಕಾವಲ್ಲಿ ಶಿವಪ್ಪನಾಯಕ, ಜಿಲ್ಲಾ ಅಧ್ಯಕ್ಷ ಲಕ್ಷ್ಮಣ, ಗಫäರ್ ಸಾಬ, ಡಾಣಿ ಚೌಡಮ್ಮ ಶುಕೂರ್, ರಾಘವೇಂದ್ರ, ಜಿ.ಆರ್. ಸಿದ್ದೇಶ್, ರೋಷನ್ ಜಮೀರ್, ಮುನ್ನಾ, ಬಿ.ಎಂ. ಪಾಟೀಲ್, ರಾಕೇಶ್ ಬೆಳ್ಳಗಟ್ಟೆಇತರರಿದ್ದರು. ಇದೇ ಸಂದರ್ಭದಲ್ಲಿ ತಾಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರಿಗೆ ಕಿಟ್ ವಿತರಿಸಿ ಸನ್ಮಾನಿಸಲಾಯಿತು.
ತಮ್ಮ ಮುಂದಿನ ಚುನಾವಣಾ ಕ್ಷೇತ್ರ ಸ್ಪಷ್ಟಪಡಿಸಿದ ಕೈ ಮುಖಂಡ
ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಾರ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು(Narendra Modi) ಸುಳ್ಳು ಹೇಳುವ ಮನುಷ್ಯ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಟೀಕಿಸಿದ್ದರು. ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್, ಸಿಲಿಂಡರ್ ಬೆಲೆಗಳ ಏರಿಕೆಯೊಂದಿಗೆ ಅಗತ್ಯ ವಸ್ತುಗಳು ಗಗನಕ್ಕೇರಲು ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು.
ಕೋವಿಡ್‌ನಿಂದ(Covid19) ಸಾವಿಗೀಡಾದವರಿಗೆ ಲಕ್ಷ ರು. ಪರಿಹಾರ ಬಂತಾ? ಬೆಳೆ ನಷ್ಟವಾದ ರೈತರಿಗೆ ಪರಿಹಾರ ದೊರೆಯಿತಾ? ನಿರುದ್ಯೋಗಿಗಳಿಗೆ ಕೆಲಸ ಸಿಕ್ಕಿತೆ ಎಂಬೆಲ್ಲಾ ಪ್ರಶ್ನೆಗಳನ್ನು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರ ಮನೆ ಮನೆಗೆ ಹೋಗಿ ಪ್ರಶ್ನಿಸಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡುತ್ತೀರಿ. ಪಕ್ಷವನ್ನು ಸದೃಢವಾಗಿ ಕಟ್ಟುತೀರಿ ಎಂದು ಪಕ್ಷ ನಂಬಿದೆ. ಆ ನಂಬಿಕೆ ಉಳಿಯುವಂತ ಕೆಲಸ ಮಾಡಬೇಕಿದೆ ಎಂದರು.