ಇನ್ಮುಂದೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಮಾಡಿ..!

*  ಮುಂದಿನ ವರ್ಷ ಜನವರಿಯಲ್ಲಿ ಸಫಾರಿಗೆ ಲಭ್ಯ
*  2 ಕೋಟಿ ವೆಚ್ಚದಲ್ಲಿ 20 ಎಕರೆ ಪ್ರದೇಶದಲ್ಲಿ ಕಾಮಗಾರಿ
*  ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿರತೆ ಸಫಾರಿ ಪ್ರಾರಂಭ
 

Leopard Safari Will Be Start in Bannerghatta National Park on 2022 grg

ಬೆಂಗಳೂರು(ಸೆ.25): ಜಗತ್ತಿನಲ್ಲಿ ಅತಿ ವೇಗವಾಗಿ ಓಡುವ ಸಸ್ತನಿಯಾದ ಚಿರತೆಗಳ ಸಫಾರಿ ನಡೆಸಲು ರಾಜಧಾನಿ ಬೆಂಗಳೂರು(Bengaluru) ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನ(Bannerghatta National Park) ಸಜ್ಜುಗೊಂಡಿದ್ದು, 2022ರ ಜನವರಿ ತಿಂಗಳಲ್ಲಿ ಕಾರ್ಯರಂಭವಾಗಲಿದೆ.

ಉದ್ಯಾನದಲ್ಲಿ ಈವರೆಗೂ ಬೋನಿನಲ್ಲಿ ಮಾತ್ರ ಚಿರತೆಗಳನ್ನು(Leopard) ನೋಡುವುದಕ್ಕೆ ಅವಕಾಶವಿತ್ತು. ತೆರೆದ ಪ್ರದೇಶದಲ್ಲಿ ಓಡಾಡುವ ಚಿರತೆಗಳನ್ನು ಜನತೆ ಜೀಪು ಮತ್ತು ಅರಣ್ಯ ಇಲಾಖೆಯ(Forest Department) ವಾಹನಗಳಲ್ಲಿ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. ಬನ್ನೇರುಘಟ್ಟ ಉದ್ಯಾನದಲ್ಲಿ ಈವರೆಗೂ ಕೇವಲ ಕರಡಿ ಮತ್ತು ಸಿಂಹಗಳ ಸಫಾರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಚಿರತೆಗಳ ಸಫಾರಿ ಕೈಗೊಳ್ಳಲಾಗುತ್ತಿದೆ. ಈ ಬೆಳವಣಿಗೆ ಹೆಚ್ಚು ಪ್ರಾಣಿಪ್ರಿಯರು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ; ಆಹಾರ ತಿನ್ನಲು ಹೋದ ಜಿರಾಫೆ ಉಸಿರುಕಟ್ಟಿ ಸಾವು

ಚಿರತೆ ಸ್ವಭಾವಕ್ಕೆ ತಕ್ಕಂತೆ ಮೂಲಸೌಲಭ್ಯ:

ಚಿರತೆಗಳು ಅತ್ಯಂತ ವೇಗವಾಗಿ ಮತ್ತು ಎತ್ತರಕ್ಕೆ ಜಿಗಿಯುವ ಪ್ರಾಣಿಯಾಗಿದೆ. ಅವುಗಳ ರಕ್ಷಣೆಗೆ ಎತ್ತರದ ತಡೆಗೋಡೆ ಅಗತ್ಯವಿದ್ದು, ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಇನ್ನುಳಿದ ಕಾಮಗಾರಿಗಳು ನಡೆಯುತ್ತಿದ್ದು, ದೀಪಾವಳಿ ಅಂತ್ಯದ ವೇಳೆಗೆ ಪೂರ್ಣಗೊಳಲಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಿದೇರ್ಶಶಕ ವನಶ್ರಿ ವಿಪಿನ್‌ ಸಿಂಗ್‌ ಹೇಳಿದರು.

ಪ್ರಾರಂಭದಲ್ಲಿ 8 ಚಿರತೆಗಳ ಬಳಕೆ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿರತೆಗಳ ಸಫಾರಿ ಪ್ರಾರಂಭಿಸಲಾಗುತ್ತಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ 20 ಎಕರೆ ಪ್ರದೇಶದಲ್ಲಿ ಸಫಾರಿ(Safari) ಆರಂಭಿಸುವ ಕಾರ್ಯ ನಡೆದಿದೆ. ಆರಂಭದಲ್ಲಿ ಹಂತದಲ್ಲಿ 8 ಚಿರತೆಗಳನ್ನು ಪ್ರಾಯೋಗಿಕ ಸಫಾರಿಗೆ ಬಳಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ವಿಪಿನ್‌ ಸಿಂಗ್‌ ಹೇಳಿದರು.

ಸಫಾರಿ ಪ್ರಾರಂಭದಿಂದ ಪ್ರವಾಸೋದ್ಯಮಕ್ಕೆ(Tourism) ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಈ ನಿಟ್ಟಿನಲ್ಲಿ ಸಫಾರಿಗೆ ಬೇಕಾದ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ 80 ಲಕ್ಷ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಯನ್ನು ಕೋರಲಾಗಿದೆ ಎಂದು ಅವರು ವಿವರಿಸಿದರು.
 

Latest Videos
Follow Us:
Download App:
  • android
  • ios