ಬನ್ನೇರುಘಟ್ಟ; ಆಹಾರ ತಿನ್ನಲು ಹೋದ ಜಿರಾಫೆ ಉಸಿರುಕಟ್ಟಿ ಸಾವು

* ಕಬ್ಬಿಣದ ಮೆಸ್  ಗೆ ಕತ್ತು ಸಿಲುಕಿ ಜಿರಾಫೆ ಸಾವು
* ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ.
* ಆಹಾರ ತಿನ್ನಲು ಕತ್ತು ಹೊರಹಾಕಿದ್ದ ಜಿರಾಫೆ.
* ಕಳೆದ ವರ್ಷ ಮೈಸೂರಿನಿಂದ ತರಲಾಗಿದ್ದ ಜಿರಾಫೆ ಯದುನಂದನ್

Giraffe dies of asphyxiation at Bannerghatta Biological Park   Bengaluru mah

ಬೆಂಗಳೂರು/ಆನೇಕಲ್(ಸೆ. 19)  ಇದೊಂದು ಘೋರ ದುರಂತ. ಆಹಾರ ತಿನ್ನಲು ಕುತ್ತಿಗೆಯನ್ನು ಹೊರ  ಹಾಕಿದ್ದ ಜಿರಾಫೆ ಕಬ್ಬಿಣದ ಮೆಶ್‌ ಗೆ ಸಿಲುಕಿ ಮೃತಪಟ್ಟಿದೆ.  ಕಬ್ಬಿಣದ ಮೆಶ್ ಗೆ ಕತ್ತು ಸಿಲುಕಿ ಜಿರಾಫೆ ಸಾವು ಕಂಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದುರ್ಘಟನೆ ಸಂಭವಿಸಿದೆ.

ಆಹಾರ ತಿನ್ನಲು ಜಿರಾಫೆ ಕತ್ತು ಹೊರಹಾಕಿತ್ತು. ಕಳೆದ ವರ್ಷ ಮೈಸೂರಿನಿಂದ ತರಲಾಗಿದ್ದ ಜಿರಾಫೆ ಯದುನಂದನ್ ಸಾವು ಕಂಡಿದೆ. ಮೂರುವರೆ ವರ್ಷದ ಜಿರಾಫೆ  ಮೃತಪಟ್ಟಿದೆ.  ಕಬ್ಬಿಣದ ಮೆಸ್ನಲ್ಲಿ ಕತ್ತು ಸಿಲುಕಿ ಉಸಿರಾಟ ಸಾಧ್ಯವಾಗದೆ ಸಾವು ಕಂಡಿದೆ.

ಮೈಸೂರು ಮೃಗಾಲಯದಲ್ಲಿ ಮುದ್ದು ಜಿರಾಫೆ ಮರಿಗಳು

ಬನ್ನೇರುಘಟ್ಟದಲ್ಲಿ ಈ ಹಿಂದೆ ಜಿರಾಫೆ ಇರಲಿಲ್ಲ. ಸಾಕಷ್ಟು ಕಷ್ಟ ಪಟ್ಟು ಮೈಸೂರಿನಿಂದ ತರಲಾಗಿತ್ತು.  ಜಿರಾಫೆ ಲೇಲ್ವಿಚಾರಣೆ ಹೊಂದಿದ್ದ ವ್ಯಕ್ತಿ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕತ್ತು ಹೊರಹಾಕಿದ್ದ ಜಿರಾಫೆ ಆಹಾರ ತಿನ್ನಲು ಮುಂದಾಗಿದೆ. ಆಗ ಅವಘಡವಾಗಿದೆ.  ಎಲ್ಲರೂ ಬಂದು ನೋಡಿದಾಗ ಜಿರಾಫೆ ಮೃತಪಟ್ಟಿತ್ತು. 

 

Latest Videos
Follow Us:
Download App:
  • android
  • ios