Asianet Suvarna News Asianet Suvarna News

ಮೂ​ಢನಂಬಿಕೆ ಬಿಟ್ಟು ಮಕ್ಕಳಿಗೆ ಸಮ ಶಿಕ್ಷಣ ನೀಡಿ: ಸಚಿವ ಶ್ರೀರಾಮುಲು

ಮೂಡನಂಭಿಕೆಗಳನ್ನು ದೂರ ಸರಿಸಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

Leave superstition and give equal education to children says b sriramulu gvd
Author
Bangalore, First Published Aug 20, 2022, 1:31 AM IST

ಮೊಳಕಾಲ್ಮುರು (ಆ.20): ಮೂಡನಂಭಿಕೆಗಳನ್ನು ದೂರ ಸರಿಸಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು. ತಾಲೂಕಿನ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನಾಪುರ ಗ್ರಾಮದಲ್ಲಿ ಗುರುವಾರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಲಾಗಿದ್ದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಪ್ರತಿ ಮಕ್ಕಳ ಹಕ್ಕಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸಂಕಲ್ಪದಿಂದ ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ.

ಪರಿಣಾಮ ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೆ ಸಮ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳನ್ನಾಗಿಸಬೇಕು ಎಂದು ಸಲಹೆ ನೀಡಿದರು. ಬುಡಕಟ್ಟು ಸಮುದಾಯಗಳೇ ಹೆಚ್ಚಾಗಿ ವಾಸಿಸುವ ಈ ಭಾಗದ ಜನತೆ ಸಂಸ್ಕೃತಿ ಆಚರಣೆ ನೆಪದಲ್ಲಿ ಮೂಢನಂಬಿಕೆಗಳನ್ನು ದೂರ ಸರಿಸಬೇಕು. ಮಕ್ಕಳ ಕಲ್ಯಾಣಕ್ಕಾಗಿ ಜಾರಿ ಮಾಡಿರುವ ಯೋಜನೆಗಳು ಸದ್ವಿನಿಯೋಗ ಮಾಡಿಕೊಂಡು ಬಾಲ್ಯವಿವಾಹ, ಬಾಲಕಾರ್ಮಿಕತೆಯನ್ನು ಹೋಗಲಾಡಿಸಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯುಂಟು ಮಾಡಬೇಕು. 

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ವಿರುದ್ದ ಡಿಕೆಶಿ ಹಾಗೂ ಹೆಚ್‌ಡಿಕೆ ಗರಂ

ಕೋವಿಡ್‌ ಸಮಯದಲ್ಲಿ ತಾಲೂಕಿನ ಒಟ್ಟು 57 ಶಾಲೆಗಳಲ್ಲಿ ಐ ಟೆಕ್ನಾಲಜಿಯ ಸ್ಮಾರ್ಚ್‌ ಕ್ಲಾಸ್‌ಗಳ ಮೂಲಕ ಶಿಕ್ಷಣ ನೀಡಲಾಗಿತ್ತು. ಇದರಿಂದ ತಾಲೂಕಿಗೆ ಉತ್ತಮ ಫಲಿತಾಂಶ ಬರಲು ನೆರವಾಗಿದೆ. ಗ್ರಾಮಕ್ಕೆ ಪ್ರೌಢಶಾಲೆ ಬೇಕೆನ್ನುವುದು ಈ ಭಾಗದ ಜನರ ದಶಕದ ಕನಸಾಗಿತ್ತು. ಜನರ ಬೇಡಿಕೆಯಂತೆ ಪ್ರೌಢಶಾಲೆ ಮುಂಜೂರಾಗಿದ್ದು ಪ್ರತಿಯೊಬ್ಬರು ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸಬೇಕು ಎಂದರು. 

ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ ರೆಡ್ಡಿ, ಬಿಇಒ ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಮದುಕುಮಾರ್‌, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌, ಪಪಂ ಸದಸ್ಯ ಟಿ.ಟಿ.ರವಿಕುಮಾರ್‌, ತಿಮ್ಲಾಪುರ ಮೂರ್ತಿ, ದೇವ ಸಮುದ್ರ ಚಂದ್ರು, ಜೀರಳ್ಳಿ ತಿಪ್ಪೇಸ್ವಾಮಿ, ಸಚಿವರ ಆಪ್ತ ಸಹಾಯಕರಾದ ಮಂಜುಸ್ವಾಮಿ, ಪಾಪೇಶ ನಾಯಕ, ಗ್ರಾಪಂ ಅಧ್ಯಕ್ಷ ಗುರುಲಿಂಗಪ್ಪ, ಹನುಮಂತಪ್ಪ ಉಪ್ಪಾರ್‌, ಯುವ ಮೋರ್ಚ ಅಧ್ಯಕ್ಷ ಹರೀಶ್‌ ಕಡೆತೋಟ, ಕಾರ್ಯದರ್ಶಿ ಶಿವಪ್ಪ ಇದ್ದರು. ಇದೇ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮುಲು ಕೋನಾಪುರ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದರು.

ಧ್ವಜ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ಗೆ ಕೊಡಿ: ರಾಷ್ಟ್ರೀಯ ಧ್ವಜಗಳನ್ನು ಎಲ್ಲೆಂದರಲ್ಲಿ ಹಾಕದೆ ಹತ್ತಿರದ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ಗೆ ಹಸ್ತಾಂತರ ಮಾಡುವಂತೆ ಸಾರಿಗೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ. ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು, 

Chitradurga: ಈ ಬಾರಿ ನಮ್ಮ ಸಮಾಜಕ್ಕೆ ಪೆನ್ನು ಸಿಕ್ಕೇ ಸಿಗಲಿದೆ ಎಂದ ನಂಜಾವಧೂತ ಶ್ರೀಗಳು!

ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ರಾಷ್ಟ್ರಧ್ವಜವನ್ನು ಘನತೆಯಿಂದ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಈ ಸಂಬಂಧ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ. ಧ್ವಜಗಳನ್ನು ಯಾರೂ ಎಲ್ಲಿ ಬೇಕೆಂದರಲ್ಲಿ ಇಡಬಾರದು. ರಾಷ್ಟ್ರೀಯ ಧ್ವಜ ಕುರಿತು ನಿಯಮಗಳಿದ್ದು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನಗರದ ಅನೇಕರು ಅಭಿಯಾನದಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜವನ್ನು ಮಡಚಿ ಸಚಿವರ ಸಮ್ಮುಖದಲ್ಲಿ ಇಂಡಿಯನ್‌ ಆಯ್‌್ಲ ಪೆಟ್ರೋಲ್‌ ಬಂಕ್‌ನ ಮಾಲೀಕರಿಗೆ ಹಸ್ತಾಂತರಿಸಿದರು.

Follow Us:
Download App:
  • android
  • ios