Chitradurga: ಈ ಬಾರಿ ನಮ್ಮ ಸಮಾಜಕ್ಕೆ ಪೆನ್ನು ಸಿಕ್ಕೇ ಸಿಗಲಿದೆ ಎಂದ ನಂಜಾವಧೂತ ಶ್ರೀಗಳು!

ಹಿರಿಯೂರಿನಲ್ಲಿ ನಡೆದ ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ವೇದಿಕೆ ಮೇಲೆ ಡಿಕೆ ಶಿವಕುಮಾರ್‌ ಬಂದ ಕೂಡಲೇ ಎಲ್ಲಾ ಅಭಿಮಾನಿಗಳು ಡಿಕೆ ಡಿಕೆ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

Nanjavadutha Swamiji Talks About hdk and dkshi in hiriyuru vokkaliga convention gvd

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.19): ಹಿರಿಯೂರಿನಲ್ಲಿ ನಡೆದ ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ವೇದಿಕೆ ಮೇಲೆ ಡಿಕೆ ಶಿವಕುಮಾರ್‌ ಬಂದ ಕೂಡಲೇ ಎಲ್ಲಾ ಅಭಿಮಾನಿಗಳು ಡಿಕೆ ಡಿಕೆ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ನಂತರದಲ್ಲಿ ಸುಮಾರು ಹೊತ್ತು ಕಾರ್ಯಕ್ರಮ ಶುರುವಾಗಲೇ ಇಲ್ಲ. ಕಾರಣ ಇನ್ನೋರ್ವ ಒಕ್ಕಲಿಗ ಸಮುದಾಯದ ನಾಯಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮಾವೇಶಕ್ಕೆ ಬಾರದೇ ಇರುವುದು ಕಾರ್ಯಕ್ರಮ ಲೇಟ್ ಆಗಿ ಶುರುವಾಗಲು ಮುಖ್ಯ ಕಾರಣವಾಯಿತು. 

ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ HDK ಬಂದ ಕೂಡಲೇ ಎಲ್ಲಾ ಅಭಿಮಾನಿಗಳು ಹಾಗೂ ಒಕ್ಕಲಿಗ ಸಮುದಾಯದ ಜನರು HDK ಎಂದು ಜೈಕಾರ, ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮೈಕ್ ಬಳಿ ಕೆಲ ಹೆಚ್‌ಡಿಕೆ ಬೆಂಬಲಿಗರು ಕುಮಾರಣ್ಣ ಅವರಿಗೆ ಜೈ ಎಂದು ಕೂಗಿದಾಗ ಇತ್ತ ರೊಚ್ಚಿಗೆದ್ದ ಕೈ ನಾಯಕ ಡಿಕೆಶಿ ಬೆಂಬಲಿಗರು ವೇದಿಕೆ ಮೇಲೆ ಡಿಕೆ ಡಿಕೆ ಎಂದು ಘೋಷಣೆ ಕೂಗಿದರು. ಅತ್ತ ಕುಮಾರಸ್ವಾಮಿ ವೇದಿಕೆಗೆ ಬರುತ್ತಿದ್ದಂತೆ ಇಬ್ಬರು ನಾಯಕರ ಅಭಿಮಾನಿಗಳ ಮಧ್ಯೆ ವಾಕ್ಸಮರ ಶುರುವಾಯಿತು. ಅತ್ತ ಮೈಕ್ ಬಳಿ ಒಬ್ಬರಿಗೊಬ್ಬರು ತಮ್ಮ ತಮ್ಮ ನಾಯಕರಿಗೆ ಜೈಕಾರ ಕೂಗೋದಕ್ಕೆ ಫೈಟ್ ನಡೆಸಿದರು‌. 

ಸರ್ವರ ಪ್ರಯತ್ನ, ಸರ್ವರ ಅಭಿವೃದ್ಧಿಯ ಸಂದೇಶ ಸಾರಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಈ ವೇಳೆ ಕೆಲ ಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ತದನಂತರ ಎಲ್ಲಾ ತಿಳಿ ಆದ ಮೇಲೆ ತಮ್ಮ ಭಾಷಣವನ್ನು ಶುರು ಮಾಡಿದ ಶ್ರೀ ನಂಜಾವಧೂತ ಸ್ವಾಮೀಜಿಗಳು ಎಲ್ಲಾ ಜನತೆಗೆ ಬುದ್ದಿ ಮಾತು ಹೇಳಿದರು. ಎಲ್ಲರೂ ಇಲ್ಲಿ ಸೇರಿರೋದು ಯಾವುದೋ ರಾಜಕೀಯ ಪಕ್ಷದ ಸಮಾವೇಶಕ್ಕೆ ಅಲ್ಲ. ಮೇಲಾಗಿ ಇದ್ರಿಂದ ಒಕ್ಕಲಿಗರು ನಾವೆಲ್ಲಾ ಒಂದೇ ಎಂದು ತೋರಿಸಿಕೊಳ್ಳಲು ಸೇರಿರೋದನ್ನು ನಾವು ಮರೆಯ ಬಾರದು ಎಂದು ಜನರಿಗೆ ಕಿವಿಮಾತು ಹೇಳಿದರು. ನಂತರ ಮಾತನಾಡಿದ ಶ್ರೀಗಳು, ಒಕ್ಕಲಿಗ ನಾಯಕ ಸಿಎಂ ಆಗುವ ವಿಚಾರ ಕುರಿತು ಮಾತು ಶುರು ಮಾಡಿದರು. ಶಿವಕುಮಾರ್ ಹೇಳಿದ್ರು ನಮಗೆ ಪೆನ್ನು ಕೊಟ್ಟು ನೋಡಬೇಕು ಅಂತ. 

ಯಾವ ಕಡೆ ಏನು ಆಗ್ತಿದೆ, ಏನು ಮಾಡ್ತೀವಿ ಅಂತ ನೋಡಬೇಕು. ಅದ್ರಿಂದ ನಾನು ಹೇಳಿದೆ ಭಗವಂತನಿಗೆ ನಾವು ಪಾರ್ಥನೆ ಮಾಡಿದ್ದೀವಿ. ಏನಾದ್ರು ಮಾಡಿ ಪೆನ್ನು ನಮ್ಮವರಿಗೆ ಕೊಡಿ ಅಂತ ಎಂದು ಮಾರ್ಮಿಕವಾಗಿ ನುಡಿದರು. ಆದ್ರಿಂದ ಭಗವಂತ ತೀರ್ಮಾನ ಮಾಡುತ್ತಾನೆ. ಪೆನ್ನು ಬಲಗಡೆ ಹೋಗಬೇಕೋ ಎಡಗಡೆ ಹೋಗಬೇಕೋ ಎಂಬುದು ಭಗವಂತನ ತೀರ್ಮಾನ. ಬಲ ಭಾಗಕ್ಕೆ ಹೆಚ್‌ಡಿಕೆ, ಎಡಭಾಗಕ್ಕೆ ಡಿಕೆಶಿ ಕಡೆ ತೋರಿಸಿ ಮಾತನಾಡಿದ ಶ್ರೀಗಳು. ಆದ್ರೆ ನೀವು ಮಾತ್ರ ಕಿತ್ತಾಡಬೇಡಿ ಎಂದು ಹೇಳಿದ್ದೀನಿ. ನಾವ್ಯಾರು ಕೂಡ ಒಬ್ಬ ಮುಖ್ಯಮಂತ್ರಿ ತಯಾರು ಮಾಡಲಿಕ್ಕೆ ಆಗೋದಿಲ್ಲ. 

ಸಂವಿಧಾನ ತಿದ್ದುಪಡಿ ಬಗ್ಗೆ ಅಂಬೇಡ್ಕರ್‌ ಅಂದೇ ಪ್ರಸ್ತಾಪಿಸಿದ್ರು: ಕೇಂದ್ರ ಸಚಿವ ನಾರಾಯಣಸ್ವಾಮಿ

ಭಗವಂತನ ಪ್ರೀತಿ, ಕರುಣೆ ಇದ್ರೆ ಯಾರೂ ತಪ್ಪಿಸಲು ಆಗಲ್ಲ. ಪೆನ್ನು ಬಂದಾಗ ಈ ಸಮುದಾಯ ಮರೆಯಬೇಡಿ ಎಂದು ಹೇಳಿದ್ದೀನಿ. ನೀವು ಅರ್ಥ ಮಾಡ್ಕೊಳ್ಳಿ ನಮ್ಮ ಸಮುದಾಯಕ್ಕೆ ಪೆನ್ನು ಬರೋದು ಗ್ಯಾರಂಟಿ. ಒಕ್ಕಲಿಗ ಸಮುದಾಯದವರು ಸಿಎಂ ಆಗ್ತಾರೆ ಎಂದು ಪರೋಕ್ಷವಾಗಿ ಹೇಳಿದರು ಶ್ರೀಗಳು. ಆದ್ರೆ ಭಗವಂತ ಡಿಸೈಡ್ ಮಾಡ್ತಾನೆ, ಯಾವ ಕಡೆಗೆ ಕೊಡಬೇಕು ಅಂತ. ಯಾವ ಕಡೆ ಕೊಟ್ಟರೂ ನಾವು ಸ್ವಾಗತ ಮಾಡ್ತೀವಿ. ಪೆನ್ನು ಬರೋದಕ್ಕೆ ನೀವು ಪ್ರಯತ್ನ ಮಾಡಿ ಎಂದು ಜನರಿಗೆ ಕಿವಿಮಾತು ಹೇಳಿದ ಶ್ರೀಗಳು ಒಗ್ಗಟ್ಟಾಗಿ ಪೆನ್ನು ಬರೋದಕ್ಕೆ ನೀವೆಲ್ಲರೂ ಪ್ರಯತ್ನ ಮಾಡಿ ಎಂದರು.

Latest Videos
Follow Us:
Download App:
  • android
  • ios