Asianet Suvarna News Asianet Suvarna News

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ವಿರುದ್ದ ಡಿಕೆಶಿ ಹಾಗೂ ಹೆಚ್‌ಡಿಕೆ ಗರಂ

ಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಬಾರಿ ಅವಹೇಳನಕಾರಿ ಹಾಗೂ ಟೀಕೆ ಮಾಡುವುದನ್ನು ಖಂಡಿಸಿ ಇಂದು ಅನೇಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಬೀದಿಗಳಿದಿ ಪ್ರತಿಭಟನೆ ನಡೆಸಿದರು.

condemnation for throwing eggs on siddaramaiahs car hd kumaraswamy dk shivakumar oppose gvd
Author
Bangalore, First Published Aug 19, 2022, 4:30 AM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.19): ಸಾವರ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಬಾರಿ ಅವಹೇಳನಕಾರಿ ಹಾಗೂ ಟೀಕೆ ಮಾಡುವುದನ್ನು ಖಂಡಿಸಿ ಇಂದು ಅನೇಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಬೀದಿಗಳಿದಿ ಪ್ರತಿಭಟನೆ ನಡೆಸಿದರು. ಅದ್ರಲ್ಲಂತೂ ಮಡಿಕೇರಿಯಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣ ಇಡೀ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿತು. ಈ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ, ವಿಪಕ್ಷ ನಾಯಕ ಸಿದ್ಧರಾಮಯ್ಯ ಮೇಲೆ ಮೊಟ್ಟೆ ಎಸೆತಕ್ಕೆ ಖಂಡನೀಯ. 

ಪ್ರಜಾಪ್ರಭುತ್ವದಲ್ಲಿ ಸಿದ್ಧರಾಮಯ್ಯ ತಮ್ಮ ವಿಚಾರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅಶಾಂತಿ ಮೂಡಿಸುವ ಕೆಲಸ ಸರಿ ಅಲ್ಲ‌. ಮಾಜಿ ಸಿಎಂ ಸಿದ್ಧರಾಮಯ್ಯಗೆ ಅವಮಾನ ಅಲ್ಲ, ರಾಜ್ಯಕ್ಕೆ ಅವಮಾನ ಎಂದು ಕೆಂಡಕಾರಿದರು. ಅವಮಾನದ ಜವಬ್ದಾರಿಯನ್ನು ಸಿಎಂ ಹೊತ್ತುಕೊಳ್ಳಬೇಕು. ಪ್ರಕರಣದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಲಹೆ ನೀಡಿದ್ದೇನೆ, ಮನವಿ ಮಾಡಿದ್ದೇನೆ. ಕ್ಷುಲ್ಲಕ ವಿಚಾರ ದೂರವಟ್ಟು, ಸಮಸ್ಯೆಗಳ ಬಗ್ಗೆ ಚರ್ಚಿಸಿ. 

ಸಿದ್ದರಾಮಯ್ಯರಂಥ ರಾಷ್ಟ್ರದ್ರೋಹಿಯನ್ನು ಕಂಡಿಲ್ಲ: ಈಶ್ವರಪ್ಪ

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿಯುತವಾಗಿ ಬದುಕಲು ಬಿಡಿ. ಯಾವುದೇ ಸಂಘಟನೆಗಳಿರಲಿ, ಹಿಂದೂಪರ ಅಥವಾ ಯಾವುದೇ ಸಮಾಜದ ಪರ ಸಂಘಟನೆಯಿರಲಿ. ಜನರ ಬದುಕಿಗೆ ಕಾರ್ಯಕ್ರಮಗಳು ಬೇಕಿದೆ. ಸಿದ್ಧರಾಮಯ್ಯ ಮೇಲೆ ಕೋಳಿ ಮೊಟ್ಟೆ ಎಸೆದಿದ್ದಕ್ಕೆ ನಾನು ಖುಷಿ ಪಡಲ್ಲ. ಇಂಥ ಘಟನೆಗಳು ನಡೆಯಬಾರದು. ಜನರ ಸಮಸ್ಯೆ ಕೇಳಲು ಬಂದವರ ಮೇಲೆ ಮೊಟ್ಟೆ ಎಸೆತ ಸರಿಯಲ್ಲ. ಮೊಟ್ಟೆ ಎಸೆದ ಸಂಘಟನೆಯವರು ಮಡಿಕೇರಿಗೆ ಗೌರವ ತಂದಿದ್ದೀರಾ ಎಂದು ಪ್ರಶ್ನಿಸಿದರು. ಗಣೇಶ ಹಬ್ಬದ ಸಮಯದಲ್ಲಿಯೂ ಸಾವರ್ಕರ್ ಪೊಟೋ ಇಡ್ತೀವಿ ಎಂದ ಪ್ರಮೋದ್ ಮುತಾಲಿಕ್‌ಗೆ ಈ ದೇಶದ ಸಮಸ್ಯೆ, ಬಡತನದ ಬಗ್ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಅಂಥವರ ಬಗ್ಗೆ ಚರ್ಚೆ ಬೇಕಿಲ್ಲ, ಅಂಥವರಿಗೆ ಜನ ಪ್ರೋತ್ಸಾಹಿಸಬಾರದು ಎಂದು ಹೆಚ್‌ಡಿಕೆ ಟಾಂಗ್ ಕೊಟ್ಟರು. ಇನ್ನೂ ಒಕ್ಕಲಿಗರ ಸಮಾವೇಶದಲ್ಲಿ ಮುಂದಿನ ಚುನಾವಣೆ ಫಲಿತಾಂಶ ಬಂದ ಬಳಿಕ ಮೈತ್ರಿ ಆಗಬಹುದೇ ಎಂಬ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಂಪೂರ್ಣ ಬಹುಮತ ಬಂದಿದ್ದೇವೆಂದು ಡಿಕೆಶಿ ಭಾವಿಸಿದ್ದಾರೆ. ಸಿದ್ಧರಾಮಯ್ಯ ಸಿಎಂ ಖುರ್ಚಿಗೆ ಮೊದಲು ಟವೆಲ್ ಹಾಕಿದ್ದಾರೆ. ಡಿಕೆಶಿ ಓವರ್ ಟೇಕ್ ಮಾಡಿ ಬರುತ್ತಾರಾ? ಡಿಕೆಶಿಗೆ ಅವರೆಲ್ಲಾ ಸುಲಭವಾಗಿ ಬಿಡುತ್ತಾರೆಯೇ? ಅವೆಲ್ಲಾ ಭಗವಂತನ ಇಚ್ಛೆ, ಜನರ ಭಾವನೆಯ ತೀರ್ಮಾನಕ್ಕೆ ಬದ್ಧ. 

ಸಿದ್ದು ಬಿಜೆಪಿಗೆ ಬರಲಿ ಎಂಬರ್ಥದಲ್ಲಿ ಹೇಳಿದ್ದೆ: ರಾಮುಲು ಸ್ಪಷ್ಟನೆ

ನನ್ನ ಪಕ್ಷದ ಶ್ರಮ ನಾನು ಹಾಕುತ್ತೇನೆ, ನಿಮ್ಮ(ಡಿಕೆಶಿ) ಶ್ರಮ‌ ನೀವು ಹಾಕಿ. ಭಗವಂತ ಯಾರಿಗೆ ಅಧಿಕಾರ ಕೊಡುತ್ತಾನೆ ಗೊತ್ತಿಲ್ಲ. ಮುಂದಿನ ಚುನಾವಣೆ ಫಲಿತಾಂಶದ ಬಗ್ಗೆ ಗೊತ್ತಿಲ್ಲ. ಫಲಿತಾಂಶದ ಬಳಿಕ ಯಾವ ಬೆಳವಣಿಗೆ ಆಗಲಿದೆ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಜೆಪಿ ಬಿ ಟೀಮ್ ಅಂದಿದ್ದರು. ಚುನಾವಣೆ ಬಳಿಕ ಅದೇ ಕಾಂಗ್ರೆಸ್ ನಮ್ಮೊಟ್ಟಿಗೆ ಸರ್ಕಾರ ರಚನೆ ಮಾಡಿದ್ದರು. ಇದೀಗ ಚುನಾವಣಾ ಫಲಿತಾಂಶದ ಬಳಿಕ ಮುಂದಿನ ಚರ್ಚೆ ಮಾಡೋಣ ಎಂದು ನಗುತ್ತಲೇ ಹೊರ ನಡೆದರು.

Follow Us:
Download App:
  • android
  • ios