ಮಳೆಗಾಲದಲ್ಲಿ ಜೋಗ ಜಲಪಾತದ ಸೌಂದರ್ಯ ಸವಿಯಲು ಕೆಎಸ್‌ಆರ್‌ಟಿಸಿ 1000 ರೂ.ನಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಆಯೋಜಿಸಿದೆ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಿಂದ ವಾರಾಂತ್ಯ ಹಾಗೂ ಸರ್ಕಾರಿ ರಜಾದಿನಗಳಲ್ಲಿ ಈ ಬಸ್ಸುಗಳು ಸಂಚರಿಸಲಿವೆ. ಈ ಪ್ರವಾಸದಲ್ಲಿ ಜೋಗದ ಜೊತೆಗೆ ಇಕ್ಕೇರಿ, ಕೆಳದಿ, ಸಿಗಂದೂರಿನಂತಹ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡುವ ಅವಕಾಶವಿದೆ.
ಬೆಂಗಳೂರು (ಆ.12): ಮಳೆಗಾಲ ಶುರುವಾಯಿತೆಂದರೆ ಪ್ರಕೃತಿ ಪ್ರಿಯರ ಕಣ್ಣು ಮುಂಗಾರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿರುತ್ತದೆ. ಅದರಲ್ಲೂ ವಿಶ್ವಪ್ರಸಿದ್ಧ ಜೋಗ್ ಜಲಪಾತ (Jog Falls) ಮೈದುಂಬಿ ಹರಿಯುವ ದೃಶ್ಯವನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬ. ಪ್ರವಾಸಿಗರ ಈ ಆಸೆಯನ್ನು ಈಡೇರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸೂಪರ್ ಸುದ್ದಿ ನೀಡಿದೆ. ರಾಜ್ಯದ ವಿವಿಧ ನಗರಗಳಿಂದ ಜೋಗ್ ಫಾಲ್ಸ್‌ಗೆ ವಿಶೇಷ 'ಪ್ಯಾಕೇಜ್ ಟೂರ್' (Jog Falls Package Tour) ಸೇವೆಗಳನ್ನು ಆಯೋಜಿಸಲಾಗಿದೆ.
ಇದೇ ಆಗಸ್ಟ್ ತಿಂಗಳಿನಿಂದ ವಾರಾಂತ್ಯ (ಶನಿವಾರ, ಭಾನುವಾರ) ಹಾಗೂ ಸರ್ಕಾರಿ ರಜಾ ದಿನಗಳಂದು ಈ ವಿಶೇಷ ಪ್ಯಾಕೇಜ್ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಈ ಪ್ಯಾಕೇಜ್‌ನಲ್ಲಿ ಕೇವಲ ಜೋಗ್ ಫಾಲ್ಸ್ ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳಾದ ಇಕ್ಕೇರಿ, ಕೆಳದಿ, ಸಿಗಂದೂರು, ವರದಮೂಲ ಹಾಗೂ ವರದಹಳ್ಳಿಯನ್ನೂ ವೀಕ್ಷಿಸಬಹುದಾಗಿದೆ.
ವಿವಿಧ ನಗರಗಳಿಂದ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ವಿವರ ಹಾಗೂ ಟಿಕೆಟ್ ದರ:
ಬೆಂಗಳೂರು (Bengaluru):
ಬಸ್ ಮಾದರಿ: ನಾನ್ ಎಸಿ ಸ್ಲೀಪರ್ (Non-AC Sleeper)
ಹೊರಡುವ ಸಮಯ: ಶುಕ್ರವಾರ ಮತ್ತು ಶನಿವಾರ ರಾತ್ರಿ 22:30
ಟಿಕೆಟ್ ದರ: ರೂ. 3,300 (ವಸತಿ ಸೌಲಭ್ಯದೊಂದಿಗೆ)
ಪ್ರವಾಸಿ ತಾಣಗಳು: ವರದಹಳ್ಳಿ - ವರದಮೂಲ - ಇಕ್ಕೇರಿ - ಕೆಳದಿ - ಸಾಗರ - ಜೋಗ್‌ಫಾಲ್ಸ್.
ದಾವಣಗೆರೆ (Davanagere):
ಬಸ್ ಮಾದರಿ: ಅಶ್ವಮೇಧ (Ashwamedha)
ಹೊರಡುವ ಸಮಯ: ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 06:00
ಟಿಕೆಟ್ ದರ: ರೂ. 600
ಪ್ರವಾಸಿ ತಾಣಗಳು: ಸಿಗಂದೂರು - ಇಕ್ಕೇರಿ ಕೋಟೆ - ವರದಮೂಲ - ಜೋಗ್‌ಫಾಲ್ಸ್.
ಶಿವಮೊಗ್ಗ (Shivamogga):
ಬಸ್ ಮಾದರಿ: ಕರ್ನಾಟಕ ಸಾರಿಗೆ
ಹೊರಡುವ ಸಮಯ: ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 08:00
ಟಿಕೆಟ್ ದರ: ರೂ. 450
ಪ್ರವಾಸಿ ತಾಣಗಳು: ಸಿಗಂದೂರು - ವರದಮೂಲ - ಇಕ್ಕೇರಿ - ಕೆಳದಿ - ಜೋಗ್‌ಫಾಲ್ಸ್.
ತುಮಕೂರು (Tumakuru):
ಬಸ್ ಮಾದರಿ: ಕರ್ನಾಟಕ ಸಾರಿಗೆ
ಹೊರಡುವ ಸಮಯ: ಶುಕ್ರವಾರ ಮತ್ತು ಶನಿವಾರ ರಾತ್ರಿ 21:30
ಟಿಕೆಟ್ ದರ: ರೂ. 1,000
ಪ್ರವಾಸಿ ತಾಣಗಳು: ಇಕ್ಕೇರಿ - ವರದಮೂಲ - ಜೋಗ್‌ಫಾಲ್ಸ್.
ಹಾಸನ (Hassan):
ಬಸ್ ಮಾದರಿ: ಅಶ್ವಮೇಧ | ದರ: ರೂ. 700 (ಶನಿವಾರ/ಭಾನುವಾರ ಬೆಳಿಗ್ಗೆ 05:35)
ಚಿತ್ರದುರ್ಗ (Chitradurga):
ಬಸ್ ಮಾದರಿ: ಕರ್ನಾಟಕ ಸಾರಿಗೆ | ದರ: ರೂ. 500 (ಶನಿವಾರ/ಭಾನುವಾರ ಬೆಳಿಗ್ಗೆ 06:15)
ಚಳ್ಳಕೆರೆ (Challakere):
ಬಸ್ ಮಾದರಿ: ಕರ್ನಾಟಕ ಸಾರಿಗೆ | ದರ: ರೂ. 600 (ಶನಿವಾರ/ಭಾನುವಾರ ಬೆಳಿಗ್ಗೆ 05:15)
ಹೊಳಲ್ಕೆರೆ (Holalkere):
ಬಸ್ ಮಾದರಿ: ಕರ್ನಾಟಕ ಸಾರಿಗೆ | ದರ: ರೂ. 450 (ಶನಿವಾರ/ಭಾನುವಾರ ಬೆಳಿಗ್ಗೆ 07:15)
ಮುಂಗಡ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಸಾರ್ವಜನಿಕ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಪ್ರವಾಸದ ಸೌಲಭ್ಯವನ್ನು ಪಡೆದುಕೊಳ್ಳಲು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿ ಅಥವಾ ವಿಚಾರಣೆಗಾಗಿ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಹಾಯವಾಣಿ ಸಂಖ್ಯೆ 080-26252625 ಅನ್ನು ಸಂಪರ್ಕಿಸಬಹುದಾಗಿದೆ. ಮಳೆಗಾಲದ ಪ್ರವಾಸವನ್ನು ಸುರಕ್ಷಿತ ಹಾಗೂ ಶ್ರಮರಹಿತವಾಗಿ ಆನಂದಿಸಲು ಈ ಸಾರಿಗೆ ಸೌಲಭ್ಯ ಅತ್ಯುತ್ತಮ ಅವಕಾಶವಾಗಿದೆ.


