ಮಂಡ್ಯ(ನ.16): ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ನಾರಾಯಣ ಗೌಡ ಅವರು ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದಿದ್ದಾರೆ. ಕೃಷ್ಣ ಅವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದಿದ್ದಾರೆ.

ಕೆ.ಆರ್.ಪೇಟೆ ಉಪ‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅನರ್ಹ ಶಾಸಕ ನಾರಾಯಣ ಗೌಡ ಅವರನ್ನು ಕಣಕ್ಕಿಳಿಸಲಾಗಿದ್ದು, ಜೆಡಿಎಸ್‌ ಕೂಡಾ ತನ್ನ ಅಭ್ಯರ್ಥಿಯನ್ನು ಪಕ್ಕಾಗೊಳಿಸಿದೆ. ಈಗಾಗಲೇ ಕೆ. ಆರ್. ಪೇಟೆಯಲ್ಲಿ ಚುನಾವಣಾ ಹವಾ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಾರಾಯಣ ಗೌಡ ಅವರು ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.

ಕೆ.ಆರ್ ಪೇಟೆ : ಜೆಡಿಎಸ್ ಅಭ್ಯರ್ಥಿಯಿಂದ ಬಿಜೆಪಿ ಅಭ್ಯರ್ಥಿಗೆ ಬಹಿರಂತ ಸವಾಲು

ಕೃಷ್ಣ ಅವರನ್ನು ಮೈಸೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ, ಶಾಲು ಹೊದೆಸಿ ಸನ್ಮಾನಿಸಿ ನಂತರ ಮಾಜಿ ಸ್ಪೀಕರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಸಂದರ್ಭ ಕೃಷ್ಣರಿಗೆ ಶಾಲು ಹೊದಿಸಿ ಸನ್ಮಾನಿಸಿ ಕಾಲಿಗೆ ಬಿದ್ದು ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ನಾರಾಯಣಗೌಡರಿಗೆ ಶುಭಾಶಯ ಕೋರಿದ ಕೃಷ್ಣ ಅವರು ಚುನಾವಣೆಯಲ್ಲಿ ಒಳಿತಾಗಲಿ ಎಂದು ಆಶೀರ್ವದಿಸಿ ಕಳುಹಿಸಿಕೊಟ್ಟಿದ್ದಾರೆ.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!.

ಕೆ. ಆರ್‌. ಪೇಟೆಯಲ್ಲಿ ಹೇಗಾದರೂ ಕಮಲ ಅರಳಿಸಬೇಕೆಂದು ಪಣತೊಟ್ಟಿರುವ ಸಿಎಂ ನಾರಾಯಣ ಗೌಡ ಅವರಿಗೆ ಟಿಕೆಟ್ ನೀಡಿದೆ. ಮಾಸ್ಟರ್ ಪ್ಲಾನ್ ಮಾಡಿರುವ ಕಾಂಗ್ರೆಸ್ ನಾರಾಯಣ ಗೌಡ ಎದುರಾಳಿಯಾಗಿ ಬೈ ಎಲೆಕ್ಷನ್ ಸ್ಪೇಷಲಿಸ್ಟ್‌ನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಕೆಆರ್‌ಪೇಟೆ ಕ್ಷೇತ್ರದ ಇತಿಹಾಸದಲ್ಲಿಯೇ ಒಂದೇ ಒಂದು ಬಾರಿ ಬೈ ಎಲೆಕ್ಷನ್ ನಡೆದಿದೆ. 1996 ರಲ್ಲಿ ನಡೆದಿದ್ದ ಕೆಆರ್‌ಪೇಟೆ ಬೈ ಎಲೆಕ್ಷನ್ ನಡೆದಿದ್ದ ಸಂದರ್ಭ ಪಕ್ಷೇತರ ಅಭ್ಯರ್ಥಿ ಬಿ.ಪ್ರಕಾಶ್ ಜಯಗಳಿಸಿದ್ದರು. 1996 ರಲ್ಲಿ 29,524 ಮತ ಪಡೆದುಕೊಂಡು ವಿಜಯದ ನಗು ಬೀರಿದ್ದ ಬಿ. ಪ್ರಕಾಶ್ ಅವರು ನಾರಾಯಣ ಗೌಡ ಅವರಿಗೆ ಪ್ರಬಲ ಎದುರಾಳಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಕೆ. ಆರ್‌. ಪೇಟೆ: ಕಾಂಗ್ರೆಸ್‌ನಿಂದ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಕಣಕ್ಕೆ..!