Asianet Suvarna News Asianet Suvarna News

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!

ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಯುವಕನನ್ನು ಕೊಲೆ ಮಾಡಿ ನದಿಗೆಸೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕೊಲೆ ಮಾಡಿ, ದೇಹಕ್ಕೆ ಹಗ್ಗ ಕಟ್ಟಿ, ಶವ ತೇಲದಂತೆ ಕಲ್ಲನ್ನು ಕಟ್ಟಿ ನದಿಗೆದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

 

new married man murdered and thrown into hemavathi river
Author
Bangalore, First Published Nov 15, 2019, 1:14 PM IST
  • Facebook
  • Twitter
  • Whatsapp

ಮಂಡ್ಯ(ನ.15): ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಯುವಕನನ್ನು ಕೊಲೆ ಮಾಡಿ ನದಿಗೆಸೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕೊಲೆ ಮಾಡಿ, ದೇಹಕ್ಕೆ ಹಗ್ಗ ಕಟ್ಟಿ, ಶವ ತೇಲದಂತೆ ಕಲ್ಲನ್ನು ಕಟ್ಟಿ ನದಿಗೆದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ನಾಪತ್ತೆಯಾದ ನವವರ ಶವವಾಗಿ ಪತ್ತೆ

ಹಾಸನ ಜಿಲ್ಲೆ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ನವ ವರನ ಮೃತದೇಹ ಪತ್ತೆಯಾಗಿದೆ. ಮಂಜು (29) ಕೊಲೆಯಾದ ದುರ್ದೈವಿ. ಮಂಡ್ಯದ ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಮಂಜು ಸೆ.18ರಂದು ತನ್ನದೇ ಊರಿನ ಅರ್ಚನಾರಾಣಿ ಎಂಬುವರನ್ನು ಪ್ರೀತಿಸಿ ಮದ್ವೆಯಾಗಿದ್ದರು. ಅರ್ಚನಾ ಪೋಷಕರ ವಿರೋಧದ ನಡುವೆಯೇ ಶಿವಮೊಗ್ಗದ ಶಿಕಾರಿಪುರದಲ್ಲಿ ಮದುವೆ ನಡೆದಿತ್ತು.

ಕಿರಣ್ ಜೊತೆ ನಿಶ್ಚಿತಾರ್ಥ ಮಾಡಿದ ಪೋಷಕರು:

ಇಬ್ಬರ ಪ್ರೀತಿ ವಿರೋಧಿಸಿದ್ದ ಪೋಷಕರು ಅರ್ಚನಾಳಿಗೆ ಕಿರಣ್ ಎಂಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಕಿರಣ್ ಮದ್ದೂರಿನ ರುದ್ರಾಕ್ಷಿಪುರ ನಿವಾಸಿಯಾಗಿದ್ದು, ನಿಶ್ಚಿತಾರ್ಥ ಬಳಿಕ ಅದ್ದೂರಿ ಮದುವೆಗೆ ಸಿದ್ದತೆ ನಡೆದಿತ್ತು. ಅ.23-24 ರಂದು ಅರ್ಚನಾ-ಕಿರಣ್ ಪೋಷಕರು ಮದುವೆ ದಿನಾಂಕ ನಿಗದಿಮಾಡಿದ್ದರು.

ಮಂಜು-ಅರ್ಚನಾ ಅವರು ಸೆ.18ರಂದು ಶಿಕಾರಿಪುರದಲ್ಲಿ ಗುಟ್ಟಾಗಿ ಮದುವೆಯಾಗಿದ್ದರು. ಅರ್ಚನಾ ಪೋಷಕರು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗಳಿಂದ ಆಸ್ತಿಪತ್ರಕ್ಕೆ ಸಹಿಹಾಕಿಸಿಕೊಂಡು ಸಂಬಂಧ ಕಡಿದುಕೊಂಡಿದ್ದರು. ಬಳಿಕ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ನವದಂಪತಿಗಳು ವಾಸವಿದ್ದರು.

ಬೈಕ್‌ಗೆ ಬೆಂಕಿಹಚ್ಚಿ ಹಣ ಕೇಳಿದವ್ರಿಗೆ ಬಿತ್ತು ಗುಂಡೇಟು..!

ನ.9ನೇ ತಾರೀಕಿನಂದು ಸಂಜೆ ಹಾಲು ತರೋದಾಗಿ ಹೇಳಿ ಹೋದ ಮಂಜು ನಾಪತ್ತೆಯಾಗಿದ್ದಾರೆ. ಪತಿ ಕಾಣೆಯಾದ ಬಗ್ಗೆ ಅರ್ಚನ ದೂರು ನೀಡಿದ್ದರು. ಗುರುವಾರ ಹೊಳೆನರಸೀಪುರ ನದಿಯಲ್ಲಿ ಶವ ಪತ್ತೆಯಾದ ಬಗ್ಗೆ ಮಂಡ್ಯ ಪೋಲಿಸರಿಗೆ ಮಾಹಿತಿ ಲಭ್ಯವಾಗಿದೆ. ಎರಡು ಕೈಗಳಲ್ಲಿದ್ದ ಹಚ್ಚೆಯಿಂದ ಅರ್ಚನಾ ಮಂಜು ಶವ ಗುರುತಿಸಿದ್ದಾರೆ. ಕುತ್ತಿಗೆ ಕೊಯ್ದು ಕೊಲೆಮಾಡಿ ದೇಹಕ್ಕೆ ಹಗ್ಗ ಬಿಗಿದು ಮಂಜು ದೇಹ ತೇಲದಂತೆ ಕಲ್ಲು ಕಟ್ಟಿ ನದಿಗೆ ಎಸೆದಿರುವ ಸ್ಥಿತಿಯಲ್ಲಿ ಮಂಜು ದೇಹ ಪತ್ತೆಯಾಗಿದೆ.

ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನೇ ಕೊಂದ ಮಾವ

ಮೃತ ಮಂಜು ಪೋಷಕರು ಅರ್ಚನಾ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಅರ್ಚನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಿರಣ್ ಎಂಬವನೇ ಮಂಜು‌ ಕೊಲೆಮಾಡಿದ್ದಾನೆಂದು ಆರೋಪಿಸಿದ್ದಾರೆ. ಆರೋಪ ತಳ್ಳಿಹಾಕಿದ ಅರ್ಚನಾ ತಂದೆ-ತಾಯಿ ದೇವರಾಜು-ಯಶೋಧ ಪ್ರೀತಿಸಿ ಮದ್ವೆಯಾದ ಬಳಿಕ ಅವಳ ಪಾಡಿಗೆ ಅವಳನ್ನು ಬಿಟ್ಟಿದ್ದೆವು. ಮಂಜು ಕೊಲೆಗೂ ನಮ್ಮ‌ ಕುಟುಂಬಕ್ಕೂ ಸಂಬಂಧವಿಲ್ಲ. ಮಗಳಿಗೆ ನಿಶ್ಚಯಿಸಿದ್ದ ವರ ಕಿರಣ್ ಕೂಡ ಕೊಲೆಮಾಡುವ ಕೆಲಸಕ್ಕೆ ಕೈಹಾಕುವಂತವನಲ್ಲ ಎಂದಿದ್ದಾರೆ.

ಕೆಲಸ ಕಾಯಂ ಆಮಿಷ: ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ

Follow Us:
Download App:
  • android
  • ios