Asianet Suvarna News Asianet Suvarna News

ಕೆ.ಆರ್ ಪೇಟೆ : ಜೆಡಿಎಸ್ ಅಭ್ಯರ್ಥಿಯಿಂದ ಬಿಜೆಪಿ ಅಭ್ಯರ್ಥಿಗೆ ಬಹಿರಂಗ ಸವಾಲು

ಮಂಡ್ಯದ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿಎಲ್ ದೇವರಾಜು  ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡರಿಗೆ ಬಹಿರಂಗ ಸವಾಲು ಎಸೆದಿದ್ದಾರೆ.

JDS Candidate BL Devaraju Challenge to Narayana gowda
Author
Bengaluru, First Published Nov 15, 2019, 3:43 PM IST

ಮಂಡ್ಯ (ನ.15) : ರಾಜ್ಯದಲ್ಲಿ ಉಪಚುನಾವಣೆ ಸಮೀಪಿಸುತ್ತಿದೆ. ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಕಣಗಳು ರಂಗೇರಿದ್ದು, ಅಭ್ಯರ್ಥಿಗಳು ಭಾರೀ ಪ್ರಚಾರ ನಡೆಸುತ್ತಿದ್ದಾರೆ. 

ನಾರಾಯಣಗೌಡ ಅನರ್ಹತೆಯಿಂದ ತೆರವಾಗಿರುವ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿಯೂ ಉಪ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. 

ನಾರಾಯಣ ಗೌಡಗೆ ಬಿಜೆಪಿಯಿಂದ ಚುನಾವಣಾ ಟಿಕೆಟ್ ನೀಡಲಾಗಿದ್ದು, ಇವರಿಗೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಬಹಿರಂಗ ಸವಾಲು ಹಾಕಿದ್ದಾರೆ.   ಪ್ರಚಾರ ಆರಂಭಿಸಿದ ಮೊದಲ ದಿನವೇ ನಾರಾಯಣಗೌಡಗೆ ಸವಾಲೆಸೆದಿದ್ದಾರೆ.

ತಮ್ಮ ಸವಾಲಿನಲ್ಲಿ  ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ನಾವು ಹೇಳುವ ಕ್ಷೇತ್ರದ 10ಹಳ್ಳಿಗಳಿಗೆ ತಾನೇ ಕಾರ್ ಚಲಾಯಿಸಿಕೊಂಡು ಹೋಗಬೇಕು. 10 ಹಳ್ಳಿಗಳಲ್ಲಿ ಎರಡು ಹಳ್ಳಿಗಳ ಮುಖಂಡರ ಹೆಸರು ಹೇಳಬೇಕು ಎಂದು ದೇವರಾಜು ಹೇಳಿದ್ದಾರೆ. 

ಈ ಸವಾಲು ಸ್ವೀಕರಿಸಿ ಗೆದ್ದರೆ ನಾವೇ ಅವರಿಗೆ ಶರಣಾಗುತ್ತೇವೆ, ಶಬ್ಬಾಶ್‌ಗಿರಿ ಹೇಳುತ್ತೇವೆ. ನಾರಾಯಣಗೌಡಗೆ ಕೆಆರ್ ಪೇಟೆ ಬಗ್ಗೆ ಕಿಂಚಿಂತ್ತೂ ಗೊತ್ತಿಲ್ಲ.  ಕಳೆದ ಚುನಾವಣೆಗಳಲ್ಲಿ ನಾರಾಯಣಗೌಡಗೆ ಟಿಕೆಟ್ ಕೊಟ್ಟು ವರಿಷ್ಠರು ಪಶ್ಚಾತ್ತಾಪ ಅನುಭವಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನೂರು ಹಳ್ಳಿಗೆ ಹೋಗಿ ನಾರಾಯಣಗೌಡ ಪ್ರಚಾರ ಮಾಡಲಿಲ್ಲ. ನಾವೆಲ್ಲರೂ ಒಟ್ಟಾಗಿ ನಿಂತು ಅವರನ್ನ ಗೆಲ್ಲಿಸಿದ್ದೆವು. ಆದರೆ ಅವನು ಸಂತೆಗೆ ಬಂದವನು ಸಂತೆಯಲ್ಲಿ ವ್ಯಾಪಾರ ಮುಗಿಸಿ ಹೊರಟಿದ್ದಾನೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಭಿವೃದ್ಧಿ ಹೆಸರಲ್ಲಿ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ನಾರಾಯಣಗೌಡ. ಹಣದಿಂದ ಗೆಲ್ಲುವ ದುರಹಂಕಾರ ನಾರಾಯಣಗೌಡರಿಗೆ ಇದೆ.  ಆರೂವರೇ ವರ್ಷದಿಂದ ಹಾಕಿಸದ ಊಟವನ್ನ ಚುನಾವಣೆ ಟೈಮ್ ಎಂದು ಈಗ ಜನರಿಗೆ ಬಾಡೂಟ ಹಾಕಿಸಿದ್ದಾನೆ.  ದೀಪಾವಳಿಗೆ ಸ್ವೀಟು, ಪಟಾಕಿ, ಸೀರೆ ನೀಡಿದ್ದಾನೆ. ಚುನಾವಣೆ ಗೆದ್ದ ಬಳಿಕ ಒಂದೇ ಒಂದು ಹೋಬಳಿಗೆ ತೆರಳಿ ಮತದರಾರಿಗೆ ಧನ್ಯವಾದ ಹೇಳಲಿಲ್ಲ. ಈಗ ಉಪಚುನಾವಣೆ ಹೊಸ್ತಿನಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೇವರಾಜು ವಾಗ್ದಾಳಿ ನಡೆಸಿದರು. 

ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios