ಪುತ್ಯಿಗೆ ಮಠದಿಂದ ಕೋಟಿ ಗೀತಾ ಲೇಖನ ಯಜ್ಞ- ಐದು ತಂಡಗಳ ರಾಜ್ಯ ಪ್ರವಾಸ

2024 ರಿಂದ ಉಡುಪಿಯ ಶ್ರೀ ಪುತ್ತಿಗೆ ಮಠ ಪರ್ಯಾಯ ಮಹೋತ್ಸವ ನಡೆಸಲಿದೆ. ಪುತ್ತಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನಾಲ್ಕನೇ ಬಾರಿ ಶ್ರೀ ಕೃಷ್ಣ ಪೂಜಾ ಪರ್ಯಾಯ ನಡೆಸುತ್ತಿರುವ ಸಂದರ್ಭದಲ್ಲಿ ಮಹತ್ವದ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ ಪುತ್ಯಿಗೆ ಮಠದಿಂದ ಕೋಟಿ ಗೀತಾ ಲೇಖನ ಯಜ್ಞ- ಐದು ತಂಡಗಳ ರಾಜ್ಯ ಪ್ರವಾಸ.

Koti Geetha lekhan yagna from Putyige Mutt State tour of five teamsrav

ವರದಿ-ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜು.25) : 2024 ರಿಂದ ಉಡುಪಿಯ ಶ್ರೀ ಪುತ್ತಿಗೆ ಮಠ ಪರ್ಯಾಯ ಮಹೋತ್ಸವ ನಡೆಸಲಿದೆ. ಪುತ್ತಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನಾಲ್ಕನೇ ಬಾರಿ ಶ್ರೀ ಕೃಷ್ಣ ಪೂಜಾ ಪರ್ಯಾಯ ನಡೆಸುತ್ತಿರುವ ಸಂದರ್ಭದಲ್ಲಿ ಮಹತ್ವದ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ವಿಶ್ವಶಾಂತಿಯನ್ನು ಸಾರುವ ಭಗವದ್ಗೀತಾ ಗ್ರಂಥವನ್ನು ಪ್ರತಿಯೊಬ್ಬರ ಮೂಲಕ ಬರೆಯಿಸಿ ಅರ್ಪಿಸುವ ಯೋಜನೆ ಇದಾಗಿದೆ. ಈ ಮಹತ್ವದ ಯೋಜನೆಗೆ ಇಂದು ಪುತ್ತಿಗೆ ಸ್ವಾಮೀಜಿ ಚಾಲನೆ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌ ಸಭೇಲಿ ಪುತ್ತಿಗೆ ಶ್ರೀಗಳು ಭಾಗಿ

ಕೋಟಿ ಗೀತ ಲೇಖನ ಯಜ್ಞ ಎಂಬ ಈ ಬೃಹತ್ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ. ಕರ್ನಾಟಕ(Karnataka) ರಾಜ್ಯದಲ್ಲಿ ಒಟ್ಟು ಐದು ತಂಡಗಳು ಈ ಅಭಿಯಾನ ನಡೆಸಲಿದ್ದಾರೆ. ಕೋಟಿ ಗೀತಲೇಖನ ಯಜ್ಞದ ಮೂಲಕ ಭಕ್ತರನ್ನು ನೋಂದಣಿ ಮಾಡುವ ಕಾರ್ಯಕ್ರಮ ಆರಂಭವಾಗಿದೆ.

ಒಂದು ತಂಡ ಉಡುಪಿ(Udupi)ಯಿಂದ ಮಣಿಪಾಲ, ಹೆಬ್ರಿ,ತೀರ್ಥಹಳ್ಳಿ(Teerthahalli) ,ಸಾಗರ, ಹೊಸನಗರ(Hosangar) ಶಿವಮೊಗ್ಗ(Shivamogga), ದಾವಣಗೆರೆ(Davanagere) ಚಿತ್ರದುರ್ಗ(Chitradurga), ಹಾವೇರಿ ,ಬಳ್ಳಾರಿ ಹೊಸಪೇಟೆ, ಸಿಂಧನೂರು ಮಾರ್ಗವಾಗಿ ರಾಯಚೂರು ತಲುಪಲಿದೆ. ಎರಡನೇ ತಂಡ ಕಾರ್ಕಳ ,ಬಂಟ್ವಾಳ, ಉಪ್ಪಿನಂಗಡಿ, ಪುತ್ತೂರು, ಸುಳ್ಯ, ಮಡಿಕೇರಿ ,ಮೈಸೂರು ಚಾಮರಾಜನಗರ ನಂಜನಗೂಡು ಮೂಲಕ ಮಂಡ್ಯ ನಗರ ತಲುಪಲಿದೆ.

ಮೂರನೇ ತಂಡ ಬ್ರಹ್ಮಾವರ, ಕೋಟ, ಸಾಲಿಗ್ರಾಮ ,ಕುಂದಾಪುರ, ಹೊನ್ನಾವರ ,ಕುಮುಟಾ, ಕಾರವಾರ, ಶಿರಸಿ ,ಸಿದ್ದಾಪುರ ,ಹುಬ್ಬಳ್ಳಿ ಧಾರವಾಡ ,ಕೊಲ್ಲಾಪುರ, ಮಾರ್ಗವಾಗಿ ಬೆಳಗಾವಿ ತಲುಪಲಿದೆ. ನಾಲ್ಕನೇ ತಂಡ ಕಟಪಾಡಿ, ನಾರಾವಿ ಉಜಿರೆ , ಚಿಕ್ಕಮಗಳೂರು, ತುಮಕೂರು, ಶಿರಾ,  ಕಡೂರು ,ಭದ್ರಾವತಿ, ಕೊಪ್ಪಳ ಬಾಗಲಕೋಟೆ ಮಾರ್ಗವಾಗಿ ವಿಜಯಪುರ ತಲುಪಲಿದೆ. 

ಹಾಗೂ ಕೊನೆಯ ತಂಡ ಉದ್ಯಾವರ, ಕಾಪು,ಸುರತ್ಕಲ್ ಸಕಲೇಶಪುರ ,ಹಾಸನ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಮುಳಬಾಗಿಲು, ಬಂಗಾರಪೇಟೆ ಮಾರ್ಗವಾಗಿ ಕೆಜಿಎಫ್ ನಗರ ತಲುಪಲಿದೆ.

Udupi: ನರ್ಮ್ ಬಸ್ ಸಂಚಾರ ಯಾಕಿಲ್ಲ? ಸಾರ್ವಜನಿಕರು ಗರಂ

ಈ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಕಡೆಗಳಲ್ಲೂ ಅಯಾ ಊರಿನ ಭಕ್ತರನ್ನು ಸೇರಿಸಿ ಗೀತಲೇಖನ ಯಜ್ಞ ದೀಕ್ಷೆಯ ಮೂಲಕ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ಕಲ್ಪಿಸಲಾಗಿದೆ‌.

ಈ ಮಹತ್ವದ ಯೋಜನೆಗೆ ಚಾಲನೆ ನೀಡಿದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ,
ಭಗವಂತ ಶ್ರೀ ಕೃಷ್ಣ ವ್ಯಕ್ತಿಯ ಪರ ಅಲ್ಲ.  ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ ಹೀಗಾಗಿ ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ ಸನ್ಮತಿ ನೀಡುವ ಗ್ರಂಥ  ಪ್ರತಿಯೊಬ್ಬರೂ ಭಗವದ್ಗೀತೆಯ ಪರಿಜ್ಞಾನ ಹೊಂದುವುದು ಅಗತ್ಯ ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲ ಅಹಂಕಾರ ಮತ್ತು ಮಮಕಾರ.  ಎಲ್ಲವೂ ಭಗವಂತನ ಅಧೀನ ಎಂದು ತಿಳಿದರೆ ಮನುಷ್ಯನಿಗೆ ಅಹಂಕಾರ ಬರಲು ಸಾಧ್ಯವಿಲ್ಲ ಹೀಗಾಗಿ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ ಎಂದು ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಪುತ್ತಿ ಗೆ ಮಠದ  ಮುಂದಿನ ಪರ್ಯಾಯದ ಯೋಜನೆಯನ್ನು ಪುತ್ತಿಗೆ ಶ್ರೀಗಳು ಪ್ರಕಟಿಸಿದರು ಕೋಟಿ  ಜನರಿಂದ ಭಗವದ್ಗೀತೆ ಬರೆಸುವುದು ,ಅಂತಾರಾಷ್ಟ್ರೀಯ ಭಗವದ್ಗೀತೆ ಸಮ್ಮೇಳನ ,
ಭಗವದ್ಗೀತೆ ಯಾಗ , ಅಖಂಡ ಗೀತಾ ಪಾರಾಯಣ , ಕಲ್ಸ೦ಕ ದಿಂದ ಕೃಷ್ಣ ಮಠಕ್ಕೆ ಬರುವಲ್ಲಿ ಭವ್ಯ ಸ್ವಾಗತ ಗೋಪುರ ಹಾಗು ಮಧ್ವಾಚಾರ್ಯರ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದರು.

Latest Videos
Follow Us:
Download App:
  • android
  • ios