Asianet Suvarna News Asianet Suvarna News

ದರ್ಗಾಕ್ಕೆ ಭೇಟಿ ನೀಡಿ ಭಾವೈಕ್ಯತೆ ಮೆರೆದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ

ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ಮಧ್ಯೆ ಸಂಘರ್ಷ ಹೆಚ್ಚಾಗುತ್ತಿದೆ.‌ ಇಂಥ ಕಾಲಘಟ್ಟದಲ್ಲಿ ಕೊಪ್ಪಳ ಗವಿಮಠ ಶ್ರೀಗಳು  ದರ್ಗಾಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುವ ಮೂಲಕ ದೇವನೊಬ್ಬ ನಾಮ ಹಲವು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ

Koppala Gavisiddeswara Swamiji visited the Dargah today rav
Author
First Published Mar 18, 2023, 2:30 PM IST

ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮಾ.18) : ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ಮಧ್ಯೆ ಸಂಘರ್ಷ ಹೆಚ್ಚಾಗುತ್ತಿದೆ.‌ ಇಂಥ ಕಾಲಘಟ್ಟದಲ್ಲಿ ಕೊಪ್ಪಳ ಗವಿಮಠ ಶ್ರೀಗಳು  ದರ್ಗಾಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುವ ಮೂಲಕ ದೇವನೊಬ್ಬ ನಾಮ ಹಲವು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ

ಸಾಮರಸ್ಯ ಸಾರಿದ ಸ್ವಾಮೀಜಿ :

ಕೊಪ್ಪಳ‌ ಅಂದರೆ ತಕ್ಷಣವೇ ಎಲ್ಲರಿಗೂ ನೆನಪಿಗೆ ಬರುವುದು ಗವಿಸಿದ್ದೇಶ್ವರ ಮಠ(Gavisiddeshwar mutt).‌ಈ ಮಠದ ಜಾತ್ರೆಯ ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿದೆ. ಜೊತೆಗೆ ದಿನದಿಂದ‌ ದಿನಕ್ಕೆ ಮಠವು ಶೈಕ್ಷಣಿಕ,ಧಾರ್ಮಿಕ‌ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು, ಪ್ರತಿದಿನ ಸಾವಿರಾರು ಭಕ್ತರು ಗವಿಮಠಕ್ಕೆ ಆಗಮಿಸುತ್ತಿದ್ದಾರೆ. 

ಇದಕ್ಕೆಲ್ಲ ಕಾರಣಿಕರ್ತರೆಂದರೆ  ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ(abhinava gavisiddeshwar swamiji gavimutt. ಇವರೇ ಇದೀಗ ದರ್ಗಾವೊಂದಕ್ಕೆ ಭೇಟಿ‌ ನೀಡುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.  

ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: 5 ಲಕ್ಷ ಮಂದಿಗೆ ಪ್ರಸಾದ..!

ಯಾವ ದರ್ಗಾಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದ್ದು?

ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮ‌(Belagatti village) ಇದು ಕೊಪ್ಪಳ ಜಿಲ್ಲೆಯ ಕಟ್ಟಕಡೆಯ ಭಾವೈಕ್ಯತೆಯ ಪ್ರತೀಕವಾದ ಹಜರತ್ ಸಯ್ಯದ್ ಶಾಹ್ ಮುಸ್ತಫಾ ಖಾದ್ರಿ(Hazrat Syed Shah Mustafa Qadri) ಇವರ ದರ್ಗಾಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು  ಭೇಟಿ ನೀಡಿದ್ದಾರೆ.

ಉತ್ತರಾಧಿಕಾರಿ ನೇಮಕದ ಕಾರ್ಯಕ್ರಮಕ್ಕೆ  ಗೈರಾಗಿದ್ದ ಸ್ವಾಮೀಜಿ:

ಇನ್ನು ಮಾರ್ಚ್ ಮೊದಲ ವಾರ ಜರುಗಿದ ದರ್ಗಾಕ್ಕೆ ನೂತನ ಉತ್ತರಾಧಿಕಾರಿ ನೇಮಕ ಹಾಗೂ ಉರುಸ್ ಸಂದರ್ಭದಲ್ಲಿ  ಗವಿಸಿದ್ದೇಶ್ವರ ಮಹಾಸ್ವಾಮಿಜಿಯವರನ್ನು ದರ್ಗಾ ಕಮಿಟಿ ಹಾಗೂ ಗ್ರಾಮಸ್ಥರು ಆಹ್ವಾನಿಸಿದ್ದರು. ಪೂರ್ವ ನಿಗದಿತ ಕಾರ್ಯಕ್ರಮ ನಿಮಿತ್ತ ಆ ಸಂದರ್ಭದಲ್ಲಿ ಶ್ರೀಗಳಿಗೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾರ್ಯಕ್ರಮ ನಿಮಿತ್ತ ಮುಂಡರಗಿಯ ಕಲಕೇರಿಗೆ ಹೊರಟ ಸಂದರ್ಭದಲ್ಲಿ ಶ್ರೀಗಳು ದರ್ಗಾಕ್ಕೆ ಭೇಟಿ ನೀಡಿದರು.

ಭಾವೈಕ್ಯತೆ‌ ಸಾರಬೇಕೆಂದ ಗವಿಸಿದ್ದೇಶ್ವರ ಸ್ವಾಮೀಜಿ :

ಇನ್ನು ಗವಿಸಿದ್ದೇಶ್ವರ ಸ್ವಾಮೀಜಿಗಳು ಯಾವಾಗಲೂ ಭಾವೈಕ್ಯತೆಗೆ ಹೆಚ್ಚಿನ‌ ಒತ್ತು ನೀಡುತ್ತಾ ಬಂದಿದ್ದಾರೆ. ‌ಹೀಗಾಗಿ ಸ್ವಾಮೀಜಿಗಳ ದರ್ಗಾಕ್ಕೆ ಭೇಟಿ‌ ನೀಡಿದ ವೇಳೆ‌ ಮಾತನಾಡಿದರು.‌ ಭಾವೈಕ್ಯತೆ ಉಳಿದು ಬೆಳೆಯಬೇಕು. ಮುಂದಿನ ದಿನಗಳಲ್ಲಿ ಇಲ್ಲಿನ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ನುಡಿದ ಶ್ರೀಗಳು ಸರ್ವರಿಗೂ ಒಳ್ಳೆಯದಾಗಲಿ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ದರ್ಗಾದ ನೂತನ ಉತ್ತರಾಧಿಕಾರಿಗಳಾದ ಸ. ಮುಸ್ತಫಾ ಖಾದರಿ (ಅನ್ವರ್ ಸಾಹೇಬ್) ಹಾಗೂ ಗ್ರಾಮದ ಸರ್ವರೂ ಗಣ್ಯರು ಉಪಸ್ಥಿತರಿದ್ದು ಶ್ರೀಗಳಿಗೆ ಸ್ವಾಗತಿಸಿ ಭಕ್ತಿಗೌರವ ಸಲ್ಲಿಸಿದರು.

Koppal: ಅಜ್ಜನ ಜಾತ್ರೆಯಲ್ಲಿ 15 ಲಕ್ಷ ಜೋಳದ ರೊಟ್ಟಿ, 30 ಟನ್ ಹೋಳಿಗೆ!

ಒಟ್ಟಿನಲ್ಲಿ ಧರ್ಮ ಧರ್ಮಗಳ ಮಧ್ಯೆ ದಂಗಲ್ ನಡೆಯುತ್ತಿರುವ ಇಂಥ ಕಾಲದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗಳು ದರ್ಗಾಕ್ಕೆ 
ಭೇಟಿ ನೀಡುವ ಮೂಲಕ ತಾವು ಯಾವುದೇ ಧರ್ಮದ ಪರ ಇಲ್ಲ, ಸಾಮರಸ್ಯ ಪರ ಎಂಬುಂದನ್ನು ತೋರಿಸಿಕೊಟ್ಟಿದ್ದಾರೆ. ಸ್ಚಾಮೀಜಿಗಳ ಈ ಕಾರ್ಯಕ್ಕೆ ಹ್ಯಾಟ್ ಆಫ್ ಹೇಳಲೇಬೇಕು.

Follow Us:
Download App:
  • android
  • ios