ಕೊಪ್ಪಳ ಜಾತ್ರೆಯಲ್ಲೇ ಕಣ್ಣು ದಾನ ಘೋಷಣೆ ಮಾಡಿದ ಗವಿಸಿದ್ಧೇಶ್ವರ ಶ್ರೀ

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನೇತ್ರದಾನ ಘೋಷಣೆ ಮಾಡಿದ್ದಾರೆ. ಈ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ. 

Koppal Gavisiddeshwara Sri announces donation of his Eyes

ಕೊಪ್ಪಳ, [ಜ.22]: ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾತ್ರೆಗೆ ಹೊಸಮೆರುಗು ಕೊಟ್ಟಿದ್ದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈಗ ನೇತ್ರದಾನ ಘೋಷಣೆ ಮಾಡಿದ್ದಾರೆ.

ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ಕೈಲಾಸ ಮಂಟಪದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನೇತ್ರದಾನ ಮಾಡುತ್ತೇನೆ ಎಂದು ತಿಳಿಸಿದರು.

ಲೋಕ ಜಂಗಮನ ಅಂತಿಮ ಪಯಣ

ಜೀವನದಲ್ಲಿ ಎರಡು ಶ್ರೇಷ್ಠ ದಾನಗಳು. ಇರುವಾಗ ಅನ್ನದಾನ, ಸತ್ತ ಮೇಲೆ ನೇತ್ರದಾನ. ಇದಕ್ಕಿಂತ ಮಿಗಿಲಾದ ದಾನ ಮತ್ತೊಂದು ಇಲ್ಲ. ಇಂಥ ಮಹಾದಾನ ಜಾಗೃತಿಯನ್ನು ಈ ಬಾರಿಯ ಜಾತ್ರೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಮಾಡಿದೆ ಎಂದು ಕೊಂಡಾಡಿದರು.  ನೀವು ನಿಮ್ಮ ಕಣ್ಣು ದಾನ ಮಾಡಿ ಎಂದು ಮನವಿ ಮಾಡಿದ ಅವರು, ನಮ್ಮ ಕಣ್ಣುಗಳು ಕುರುಡರಿಗೆ ದೃಷ್ಠಿ ನೀಡುತ್ತವೆ ಎನ್ನುವುದಾದರೇ ಬದುಕಿನಲ್ಲಿ ಇದಕ್ಕಿಂತ ಸಾರ್ಥಕತೆ ಮತ್ತೊಂದಿಲ್ಲ ಎಂದರು.

ಇಹಲೋಕದ ಯಾತ್ರೆ ಮುಗಿಸಿದ ಶತಮಾನದ ಸಂತ

ಇಂದೇ ದಾನ ಮಾಡಿ ಎಂದಲ್ಲ, ನೀವು ದಾನ ಮಾಡುವ ಕುರಿತು ನೋಂದಣಿ ಮಾಡಿಸಿ,  ಅಂಧರ ಬಾಳಿಗೆ ನಾವೆಲ್ಲ ಬೆಳಕಾಗೋಣ. ಸ್ವಾಮೀಜಿಗಳಾದವರು ಸಾಮಾನ್ಯವಾಗಿ ಇಂಥ ದಾನ ಮಾಡುವುದಿಲ್ಲ, ದೇಹ ಮುಕ್ಕಾಗುತ್ತದೆ ಎನ್ನುವ ನಂಬಿಕೆ ಇದೆ ಎಂಬ ಮಾತಿದ್ದರೂ ಗವಿಸಿದ್ಧೇಶ್ವರ ಸ್ವಾಮೀಜಿ ಮಾದರಿ ಕ್ರಮಕ್ಕೆ ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios