Asianet Suvarna News Asianet Suvarna News

Illegal Resorts in Anjanadri: ರೆಸಾರ್ಟ್‌ಗಳ ತೆರವಿಗೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ

*   ಅಕ್ರಮ ರೆಸಾರ್ಟ್‌ಗಳ ತೆರವಿಗೆ 48 ಗಂಟೆಗಳ ಅವಕಾಶ ನೀಡಿದ್ದ ಜಿಲ್ಲಾಧಿಕಾರಿ 
*   ಯಾವುದೇ ಕ್ಷಣದಲ್ಲಾದರೂ ತೆರವು ಕಾರ್ಯಾಚರಣೆ
*   ಬೀಡು ಬಿಟ್ಟಿರುವ ಜಿಲ್ಲಾಡಳಿತ ತಂಡ

Koppal District Administration Prepare For Illegal Resorts Demolition in Anjanadri grg
Author
Bengaluru, First Published Dec 31, 2021, 7:36 AM IST | Last Updated Dec 31, 2021, 7:36 AM IST

ಗಂಗಾವತಿ(ಡಿ.31): ತಾಲೂಕಿನ ಅಂಜನಾದ್ರಿ(Anjanadri) ಪ್ರದೇಶದ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ್‌ಗಳ(Illegal Resorts) ತೆರವಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಯಾವಾಗ ಬೇಕಾದರೂ ಕಾರ್ಯಾಚರಣೆ ನಡೆಸಬಹದು.

ಅಕ್ರಮ ರೆಸಾರ್ಟ್‌ಗಳ ತೆರವಿಗೆ ಮಂಗಳವಾರ ಜಿಲ್ಲಾಧಿಕಾರಿ 48 ಗಂಟೆಗಳ ಅವಕಾಶ ನೀಡಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಬುಧವಾರ ಹಂಪಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಮತ್ತು ಕೊಪ್ಪಳ ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ಅವರ ನೇತೃತ್ವದಲ್ಲಿ 52ಕ್ಕೂ ಹೆಚ್ಚು ರೆಸಾರ್ಟ್‌ಗಳಿಗೆ ತೆರಳಿ ಬೀಗ ಮುದ್ರೆ ಹಾಕಿದ್ದಲ್ಲದೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಜತೆಗೆ 24 ಗಂಟೆಗಳ ಕಾಲಾವಕಾಶ ಸಹ ನೀಡಲಾಗಿತ್ತು. ಆದರೆ, ಮಾಲೀಕರು ತೆರವುಗೊಳಿಸಿಕೊಂಡಿಲ್ಲ. ಹೀಗಾಗಿ ಜಿಲ್ಲಾಡಳಿತ(District Administration) ಯಾವುದೇ ಕ್ಷಣದಲ್ಲಾದರೂ ತೆರವು ಕಾರ್ಯಾಚರಣೆಗೆ ಇಳಿಯಬಹುದು.

ಬೀಡು ಬಿಟ್ಟಿರುವ ಜಿಲ್ಲಾಡಳಿತ ತಂಡ

ಕಳೆದೆರಡು ದಿನಗಳ ಹಿಂದೆ ಅನಕೃಧಿತ ರೆಸಾರ್ಟ್‌ಗಳ ತೆರವುಗೊಳಿಸಲು ಜಿಲ್ಲಾಡಳಿತ ವಿವಿಧ ತಂಡಗಳನ್ನು ರಚಿಸಿದ್ದರಿಂದ 15 ಗ್ರಾಮಗಳಲ್ಲಿರುವ 52 ರೆಸಾರ್ಟ್‌ಗಳನ್ನು ಪರಿಶೀಲಿಸಲು ತಂಡ ಬೀಡು ಬಿಟ್ಟಿದೆ. ಜಿಲ್ಲಾಡಳಿತದ ಗಡುವು ಮುಗಿಯುವ ಹಂತದಲ್ಲಿದ್ದು ತೆರವಿಗೆ ಯಂತ್ರ, ಸಿಬ್ಬಂದಿ ಮತ್ತು ಪೊಲೀಸ್‌(Police) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Illegal Resorts Seal : ವರ್ಷಾಚರಣೆಗೂ ಮುನ್ನ ಕಾರ್ಯಾಚರಣೆ,  ಗಂಗಾವತಿ ಅಕ್ರಮ ರೆಸಾರ್ಟ್‌ಗಳಿಗೆ ಬೀಗ

ರೆಸಾರ್ಟ್‌ ತೆರವು ಕ್ರಮ ಸರಿ

ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಕಾನೂನು ಕ್ರಮಕೈಗೊಂಡಿರುವುದು ಸರಿಯಾದ ಕ್ರಮ ಎಂದು ಶಾಸಕ ಪರಣ್ಣ ಮುನವಳ್ಳಿ(Paranna Munavalli) ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ರೆಸಾರ್ಟ್‌ ಮಾಲೀಕರ ಮನವಿ ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಡಳಿತ ಕಳೆದ ಎರಡು ದಿನಗಳ ಹಿಂದೆ ರೆಸಾರ್ಟ್‌ಗಳಿಗೆ ಬೀಗ ಮುದ್ರೆ ಹಾಕಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ. ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು. ಗಂಗಾವತಿ ನಗರದಲ್ಲಿ ಬೀದಿ ವ್ಯಾಪಾರಿಗಳ ಅಂಗಡಿ-ತರಕಾರಿ ಮಾರುಕಟ್ಟೆಯನ್ನು ಗುಂಡಮ್ಮ ಕ್ಯಾಂಪಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಳೆದೆರಡು ದಿನಗಳಿಂದ ಅಕ್ರಮ ರೆಸಾರ್ಟ್‌ಗಳನ್ನು ಪರಿಶೀಲಿಸಲಾಗಿದ್ದು, ಬೀಗ ಮುದ್ರೆ ಹಾಕಲಾಗಿದೆ. ಇದಕ್ಕಾಗಿ ತಂಡಗಳನ್ನು ರಚಿಸಿದ್ದು ರೆಸಾರ್ಟ್‌ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದು, 24 ಗಂಟೆಗಳ ಗಡುವು ಮುಗಿಯುತ್ತಿದೆ. ಯಾವಾಗ ಬೇಕಾದರೂ ಕಾರ್ಯಾಚರಣೆ ನಡೆಸಲಾಗುವುದು ಅಂತ ಕೊಪ್ಪಳ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರೆಡ್ಡಿ ತಿಳಿಸಿದ್ದಾರೆ.

Bears Killed in Road Accidents: ಸರ್ಕಾರದ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಕರಡಿಗಳ ಬಲಿ ಬೇಕು?

ವಿರೂಪಾಪುರಗಡ್ಡೆಯಲ್ಲಿ​ನ ಅಕ್ರಮ ರೆಸಾರ್ಟ್‌ ತೆರವು  

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿ(Virupapur Gaddi) ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ರೆಸಾರ್ಟ್‌ ಅನ್ನು 2020 ರಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ತೆರವುಗೊಳಿಸಿತ್ತು. ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ 21 ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗಿತ್ತು. ಈಗ ಉಳಿದಿದ್ದ ಲಕ್ಷ್ಮೀ ಗೋಲ್ಡನ್‌ ಬೀಚ್‌ ರೆಸಾರ್ಟ್‌ ತೆರವುಗೊಳಿಸಲಾಯಿತು. ಈ ರೆಸಾರ್ಟ್‌ ಮಾಲೀಕರು ಸುಪ್ರೀಂಕೋರ್ಟ್‌(Supreme Court) ಆದೇಶ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದರು. ನ್ಯಾಯಾಲಯ ತಡೆಯಾಜ್ಞೆ ತೆರ​ವು​ಗೊ​ಳಿ​ಸಿದ ಹಿನ್ನೆಲೆಯಲ್ಲಿ ಹಂಪಿ ಪ್ರಾಧಿಕಾರ, ತಾಲೂಕು ಆಡಳಿತ ನೇತೃತ್ವದಲ್ಲಿ ತೆರವುಗೊಳಿಸಲಾ​ಗಿತ್ತು.

ಕಳೆದ ವರ್ಷ ಅನಧಿಕೃತವಾಗಿ ನಿರ್ಮಿಸಿದ್ದ 21 ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋ​ರ್ಟ್‌ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ 21 ರೆಸಾ​ರ್ಟ್‌ಗಳನ್ನು ತೆರುವುಗೊಳಿಸಿತ್ತು. ತೆರವು ಕಾರ್ಯಚರಣೆಗೆ ತಡೆಯಾಜ್ಞೆ ತಂದಿದ್ದ ಲಕ್ಷ್ಮೀ ಗೋಲ್ಡನ್‌ ಬೀಚ್‌ ರೆಸಾರ್ಟ್‌(Lakshmi Golden Beach Resort) ಮಾಲೀಕರು. ನಂತರ ಸೆ. 15ರಂದು ಹೈಕೋರ್ಟ್‌(High Court) ತಡೆಯಾಜ್ಞೆ ರದ್ದುಗೊಳಿಸಿ ತೆರವು ಕಾರ್ಯಚರಣೆಗೆ ಆದೇಶ ನೀಡಿತು. ಆದರೆ, ರೆಸಾರ್ಟ್‌ ಮಾಲೀಕರು ತಮಗೆ 15 ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಸಮಯ ನೀಡಿದ್ದರೂ ಸ್ವಯಂ ಪ್ರೇರಿತರಾಗಿ ತೆರವುಗೊಳಿಸದ ಕಾರಣ ತೆರವುಗೊಳಿಸಲಾ​ಯಿ​ತು. 
 

Latest Videos
Follow Us:
Download App:
  • android
  • ios