- Home
- News
- Crime
- Illegal Resorts Seal : ವರ್ಷಾಚರಣೆಗೂ ಮುನ್ನ ಕಾರ್ಯಾಚರಣೆ, ಗಂಗಾವತಿ ಅಕ್ರಮ ರೆಸಾರ್ಟ್‌ಗಳಿಗೆ ಬೀಗ
Illegal Resorts Seal : ವರ್ಷಾಚರಣೆಗೂ ಮುನ್ನ ಕಾರ್ಯಾಚರಣೆ, ಗಂಗಾವತಿ ಅಕ್ರಮ ರೆಸಾರ್ಟ್‌ಗಳಿಗೆ ಬೀಗ
ಗಂಗಾವತಿ(ಡಿ. 29) ಗಂಗಾವತಿ (Gangavathi) ಮತ್ತು ಹಂಪಿ ವ್ಯಾಪ್ತಿಯ ಅಕ್ರಮ ರೆಸಾರ್ಟ್ (Resort) ತೆರವಿಗೆ 24 ಗಂಟೆ ಗಡುವು ನೀಡಲಾಗಿದೆ ಡಿಸಿ ನೀಡಿದ 48 ಗಂಟೆಗಳ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ (Koppala) ಎಸಿ ಮತ್ತು ಹಂಪಿ (Hampi) ಪ್ರಾಧಿಕಾರ ಆಯುಕ್ತರು ಅಕ್ರಮ ರೆಸಾರ್ಟ್ ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

15 ಗ್ರಾಮಗಳಲ್ಲಿರುವ 52 ರೆಸಾರ್ಟಗಳಿಗೆ ಬೀಗ ಮುದ್ರೆ ಹಾಕಲಾಗಿದೆ 24 ಗಂಟೆಯೊಳಗೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿ ಕೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ವರ್ಷಾಚರಣೆಗೂ ಮುನ್ನ ಕಠಿಣ ನಿಯಮ ತಿಳಿದುಕೊಳ್ಳಿ
ರೆಸಾರ್ಟ ಗಳ ವಿದ್ಯುತ್ ಸಂಪರ್ಕವನ್ನು ಜೇಸ್ಕಾಂ ಸಿಬ್ಬಂದಿ ಕಟ್ ಮಾಡಿದ್ದಾರೆ. ರೆಸಾರ್ಟ ಬೋರ್ಡೂಗಳಿಗೆ ಬಟ್ಟೆ ಹೊದಿಕೆ ಮಾಡಲಾಗಿದ್ದು ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಹೊಸ ವರ್ಷಚಾರಣೆ ಸಂಭ್ರಮಕ್ಕೆ ಸಜ್ಜಾಗಿದ್ದ ರೆಸಾರ್ಟ ಮಾಲೀಕರಿಗೆ ಜಿಲ್ಲಾಡಳಿತ ಶಾಕ್ ನೀಡಿದ್ದು ಅಕ್ರಮವಾಗಿ ನಡೆಯುತ್ತಿದ್ದ ಎಲ್ಲ ಕಾರ್ಯ ಚಟುವಟಿಕೆಗೆ ಬ್ರೇಕ್ ಹಾಕಿದೆ.
ಹೊಸ ವರ್ಷಾಚರಣೆ ಬಹಿರಂಗ ಸಂಭ್ರಮ ಇಲ್ಲ ಎಂದು ಪೊಲೀಸ್ ಇಲಾಖೆ ಈಗಾಗಲೇ ಖಡಕ್ ಸೂಚನೆ ರವಾನಿಸಿದೆ. ಬೆಂಗಳೂರಿನಲ್ಲಿಯೂ ಭದ್ರತೆ ಆಯೋಜಿಸಲಾಗಿದೆ.
ಗಂಗಾವತಿ (Gangavathi) ಮತ್ತು ಹಂಪಿ ವ್ಯಾಪ್ತಿಯ ಅಕ್ರಮ ರೆಸಾರ್ಟ್ (Resort) ತೆರವಿಗೆ 24 ಗಂಟೆ ಗಡುವು ನೀಡಲಾಗಿದೆ ಡಿಸಿ ನೀಡಿದ 48 ಗಂಟೆಗಳ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ (Koppala) ಎಸಿ ಮತ್ತು ಹಂಪಿ (Hampi) ಪ್ರಾಧಿಕಾರ ಆಯುಕ್ತರು ಅಕ್ರಮ ರೆಸಾರ್ಟ್ ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ರೆಸಾರ್ಟ್ ಗಳಿಗೆ ನೋಟಿಸ್ ನೀಡಲಾಗಿದ್ದು ತಕ್ಷಣ ಎಲ್ಲ ಬುಕಿಂಗ್ ಸೇರಿದಂತೆ ಇನ್ನಿತರ ವ್ಯವಹಾರಗಳನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ತಿಳಿಸಲಾಗಿದೆ.
ಅಧಿಕಾರಿಗಳ ತಂಡ ಎಲ್ಲ ಕಡೆ ತೆರಳಿದ್ದು ಸ್ವಯಂ ಪ್ರೇರಿತವಾಗಿ ತೆರವು ಮಾಡಲು ತಿಳಿಸಿದ್ದಾರೆ. ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ