ಹುದ್ದೆಯ ಬೇಡಿಕೆ ಇಲ್ಲ ಎಂದು ಆಪ್ ಸೇರ್ಪಡೆಯಾದ ಮಾಜಿ ಸಂಸದ
- ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಆಮ್ ಆದ್ಮಿ ಪಾರ್ಟಿಗೆ
- ದೆಹಲಿ ಸರ್ಕಾರದ ಜನಪರ ಕೆಲಸವನ್ನು ಒಪ್ಪಿಕೊಂಡು ಆಪ್ ಸೇರುತ್ತಿರುವುದಾಗಿ ಪ್ರಕಟ
ಬೆಂಗಳೂರು (ನ.13): ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಾ.ವಿ. ವೆಂಕಟೇಶ್ Dr V venkatesh) ಆಮ್ ಆದ್ಮಿ ಪಾರ್ಟಿಗೆ (AAP) ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಎಪಿಯ (AAP) ಧ್ಜಜವನ್ನು ಸ್ವೀಕರಿಸಿದ ವೆಂಕಟೇಶ್ ತಾವು ಅರವಿಂದ ಕೇಜ್ರಿವಾಲ್ (Arvind Kejriwal) ಅವರ ದೆಹಲಿ ಸರ್ಕಾರದ (Delhi Govt) ಜನಪರ ಕೆಲಸವನ್ನು ಒಪ್ಪಿಕೊಂಡು ಆಪ್ ಸೇರುತ್ತಿರುವುದಾಗಿ ಪ್ರಕಟಿಸಿದರು.
1984ರಲ್ಲಿ ಜನತಾ ರಂಗದಿಂದ (Janatha Ranga) ಸ್ಪರ್ಧಿಸಿ ಕೋಲಾರದಿಂದ (Kolar) ಗೆದ್ದಿದ್ದೆ. ಆದರೆ ಕಾಂಗ್ರೆಸ್ (Congress) ಅನ್ನು ವಿರೋಧಿಸಿ ರಾಜಕಾರಣ ಮಾಡುತ್ತ ಬಂದ ಪಕ್ಷಗಳು ಆ ಬಳಿಕ ತೋಳ್ಬಲ, ಹಣದ ಬಲ ಮತ್ತು ಕುಟುಂಬ ರಾಜಕಾರಣಕ್ಕೆ (Family politics) ಬಲಿಯಾದವು. ಆದರೆ ಆಮ್ ಆದ್ಮಿ ಪಕ್ಷ ಮಾತ್ರ ಪರ್ಯಾಯ ರಾಜಕಾರಣ ಮಾಡುತ್ತಿದೆ ಎಂದು ವೆಂಕಟೇಶ್ (Venkatesh) ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಪ್ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ವೆಂಕಟೇಶ್ ಅವರು ಯಾವುದೇ ಹುದ್ದೆಯ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಸೇರಿಲ್ಲ. ಅವರ ರಾಜಕೀಯ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದೆ ಎಂದು ತಿಳಿಸಿದರು.
ದೆಹಲಿ ಸರ್ಕಾರದಿಂದ ಅಯೋಧ್ಯೆಗೆ ಉಚಿತ ಪ್ರವಾಸ : ಅಯೋಧ್ಯೆಯ ರಾಮ ಮಂದಿರ ಭೇಟಿಯ ನಂತರ ಅರವಿಂದ್ ಕೇಜ್ರಿವಾಲ್ (Aravind Kejriwal) ದೆಹಲಿ ಸರ್ಕಾರದ "ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ" ಯಲ್ಲಿ ಅಯೋಧ್ಯೆಯನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ ಜಗನ್ನಾಥ ಪುರಿ, ಉಜ್ಜಯಿನಿ, ಶಿರಡಿ, ಅಮೃತಸರ, ಜಮ್ಮು, ದ್ವಾರಕಾ, ತಿರುಪತಿ, ರಾಮೇಶ್ವರಂ, ಹರಿದ್ವಾರ, ಮಥುರಾ ಮತ್ತು ಬೋಧಗಯಾಗಳನ್ನು ಈ ಯೋಜನೆಗೆ ಸೇರಿಸಲಾಗಿತ್ತು. ದೆಹಲಿಯಿಂದ ವೃದ್ಧರು ಯಾವುದೇ ವೆಚ್ಚವಿಲ್ಲದೆ ರಾಮ್ ಲಲ್ಲಾನ ಆಶೀರ್ವಾದ ಪಡೆಯಲು ಈಗ ಅಯೋಧ್ಯೆಗೆ (Ayodhya) ಭೇಟಿ ನೀಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಿನ್ನು ಕೆಲವೇ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು (Uttar Pradesh Assembly Elections 2022) ನಡೆಯಲಿವೆ ಎಂಬುವುದು ಉಲ್ಲೇಖನೀಯ.
ಯುಪಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಸಜ್ಜು, ಕಮಲ ಪಾಳಯದ ಮಾಸ್ಟರ್ ಪ್ಲಾನ್!
ಅರವಿಂದ್ ಕೇಜ್ರಿವಾಲ್ ಅಯೋಧ್ಯೆ ಭೇಟಿಯ ಒಂದು ದಿನ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ. ಅಕ್ಟೋಬರ್ 26 ಮಂಗಳವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಯೋಧ್ಯೆಗೆ ಭೇಟಿ ನೀಡಿ ರಾಮನ ಲಲ್ಲಾನ ಆಶೀರ್ವಾದ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ದೆಹಲಿಯ ಉಪ-ಮುಖ್ಯಮಂತ್ರಿ ಮನಿಷ್ ಸಿಸೋದಿಯಾ (Manish Sisodia) ಹಾಗೂ ಆಮ್ ಆದ್ಮಿ ಪಕ್ಷದ ಕೇಂದ್ರ ಸಚಿವ ಹಾಗೂ ಉತ್ತರಪ್ರದೇಶ ಉಸ್ತುವಾರಿಯಾದ ಸಂಜಯ್ ಸಿಂಗ್ (Sanjay Singh) ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದರು.
ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ (Digital Press conference) ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ "ದೆಹಲಿ ಸಂಪುಟವು ಅಯೋಧ್ಯೆಯನ್ನು ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯಲ್ಲಿ ಸೇರಿಸಲು ಒಪ್ಪಿಗೆ ನೀಡಿದೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ. ಈ ಹಿಂದೆ ಜಗನ್ನಾಥ ಪುರಿ, ಉಜ್ಜಯಿನಿ, ಶಿರಡಿ ಸೇರಿದಂತೆ ಹಲವು ತೀರ್ಥಯಾತ್ರೆ ಸ್ಥಳಗಳನ್ನುಈ ಯೋಜನೆಗೆ ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.
ಅಯೋಧ್ಯೆಗೆ ಉಚಿತ ಪ್ರವಾಸ!
ಈ ಯೋಜನೆಯಡಿ ಹಿರಿಯ ನಾಗರಿಕರ ಸಂಪೂರ್ಣ ಪ್ರವಾಸದ ವೆಚ್ಚವನ್ನು ದೆಹಲಿ ಸರಕಾರ ಭರಿಸುತ್ತದೆ. ಈ ಯೋಜನೆಯಡಿ ಈಗಾಗಲೇ 35,000 ಜನ ಪ್ರಯಾಣ ಮಾಡಿದ್ದಾರೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ. ಎಲ್ಲರಿಗೂ ಅಯೊಧ್ಯೆ ಪ್ರವಾಸವನ್ನು ಆಯೋಜಿಸುವ ಮೂಲಕ ನಾನು 'ಶ್ರವಣ ಕುಮಾರನಾಗಲು' ಇಚ್ಛಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಈ ಯೋಜನೆ ಸ್ಥಗಿತಗೊಂಡಿತ್ತು. ಮುಂದಿನ ತಿಂಗಳ ಒಳಗಾಗಿ ಮತ್ತೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ರಂಗೇರಿದ ಉತ್ತರಪ್ರದೇಶ ಚುನಾವಣೆ!
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ 403 ವಿಧಾನಸಭೆ ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಕ್ಷ (Aam Aadmi Party) ಅಭ್ಯರ್ಥಿಗಳನ್ನು ಕಣಕ್ಕಿಳಸಲಿದೆ. ಈಗಾಗಲೇ ಉತ್ತರಪ್ರದೇಶ ಚುನಾವಣೆ ರಂಗೇರಿದ್ದು ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಆರಂಭಿಸಿವೆ. ಉತ್ತರ ಪ್ರದೇಶದಲ್ಲಿ ಪಾರ್ಟಿಯನ್ನು ಶತಾಯಗತಾಯ ಮೇಲೆತ್ತಲು ಜೂನಿಯರ್ ಇಂದಿರಾ ಅಲಿಯಾಸ್ ಪ್ರಿಯಾಂಕಾ ಗಾಂಧಿ ಈಗಾಗಲೇ ಹೋರಾಟ ಆರಂಭಿಸಿದ್ದಾರೆ.
ಇನ್ನೂ ಇತ್ತ ಬಿಜೆಪಿಯ(BJP) ಸೋಶಿಯಲ್ ಮೀಡಿಯಾ(Social media) ಟೀಂ ಹೊಸ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಮರಳಲು ಪ್ರಚಾರ ನಡೆಸುತ್ತಿದೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡ ತನ್ನ ಚಟುವಟಿಕೆಯನ್ನು ಹೆಚ್ಚಿಸಿದೆ ಮತ್ತು ಆನ್‌ಲೈನ್ ಅಭಿಯಾನವನ್ನು(Online campaign) ಪ್ರಾರಂಭಿಸಿದೆ. ಈ ತಂಡವು ವಿರೋಧವನ್ನು ಎದುರಿಸಲು ಉಭಯ ಕಾರ್ಯತಂತ್ರದೊಂದಿಗೆ ಚುನಾವಣಾ ಪ್ರಚಾರಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ, ಯೋಗಿ ಸರ್ಕಾರದ(Yogi Govt) ಸಾಧನೆಗಳನ್ನು ಎಣಿಸಲಾಗುತ್ತಿದೆ. ಈ ಮಧ್ಯೆ ಕೇಜ್ರಿವಾಲ್ ಈ ಹೊಸ ಯೋಜನೆ ಚುನಾವಣೆ ಹಿನ್ನೆಲೆಯಲ್ಲೇ ಜಾರಿ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.