Asianet Suvarna News Asianet Suvarna News

ಯುಪಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಸಜ್ಜು, ಕಮಲ ಪಾಳಯದ ಮಾಸ್ಟರ್‌ ಪ್ಲಾನ್!

* ಉತ್ತರ ಪ್ರದೇಶ ಚುನಾವಣೆಗೆ ಅಬ್ಬರದ ಪ್ರಚಾರ ಆರಂಭ

* ಜನರನ್ನು ತಲುಪಲು ಬಿಜೆಪಿಯೂ ಸಜ್ಜು

* ಮಾಸ್ಟರ್‌ ಪ್ಲಾನ್‌ ತಯಾರಿಸಿದೆ ಕಮಲ ಪಾಳಯ

UP BJP begins its social media campaign for 2022 polls pod
Author
Bangalore, First Published Oct 25, 2021, 9:41 AM IST
  • Facebook
  • Twitter
  • Whatsapp

ಲಕ್ನೋ(ಅ.25): ಯುಪಿ ಅಸೆಂಬ್ಲಿ ಚುನಾವಣೆ 2022(Uttar Pradesh Assembly Elections 2022) ಕ್ಕೆ ಕೆಲವೇ ತಿಂಗಳು ಉಳಿದಿವೆ. ಹೀಗಿರುವಾಗ ಎಲ್ಲ ರಾಜಕೀಯ ಪಕ್ಷಗಳು ಸಿದ್ಧತೆಯೊಂದಿಗೆ ರಣರಂಗಕ್ಕಿಳಿದಿವೆ. ಬಿಜೆಪಿಯ(BJP) ಸೋಶಿಯಲ್ ಮೀಡಿಯಾ(Social media) ಟೀಂ ಹೊಸ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಮರಳಲು ಪ್ರಚಾರ ನಡೆಸುತ್ತಿದೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡ ತನ್ನ ಚಟುವಟಿಕೆಯನ್ನು ಹೆಚ್ಚಿಸಿದೆ ಮತ್ತು ಆನ್‌ಲೈನ್ ಅಭಿಯಾನವನ್ನು(Online campaign) ಪ್ರಾರಂಭಿಸಿದೆ. ಈ ತಂಡವು ವಿರೋಧವನ್ನು ಎದುರಿಸಲು ಉಭಯ ಕಾರ್ಯತಂತ್ರದೊಂದಿಗೆ ಚುನಾವಣಾ ಪ್ರಚಾರಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ, ಯೋಗಿ ಸರ್ಕಾರದ(Yogi Govt) ಸಾಧನೆಗಳನ್ನು ಎಣಿಸಲಾಗುತ್ತಿದೆ.

ಯುಪಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅಂಕಿತ್ ಚಂಡೇಲ್(Ankit Chandel) ಬಿಜೆಪಿ ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಾಲ್ಕು ಘೋಷವಾಕ್ಯಗಳ ಅಡಿಯಲ್ಲಿ ನಾಲ್ಕು ಪ್ರಚಾರಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದರಲ್ಲಿ ಬಿಜೆಪಿಯ ಪ್ರಮುಖ ಘೋಷವಾಕ್ಯವೇನೆಂದರೆ ‘ಸೋಚ್ ಇಮಾನ್‌ದಾರ್, ಕಾಮ್‌ ದಮ್ದಾರ್, ಫಿರ್‌ ಏಕ್‌ ಬಾರ್ ಬಿಜೆಪಿ ಸರ್ಕಾರ್’(ಪ್ರಾಮಾಣಿಕ ಯೋಚನೆ, ಅತತ್ಯುತ್ತಮ ಕೆಲಸ, ಮತ್ತೊಮ್ಮೆ ಬಿಜೆಪಿ ಸರ್ಕಾರ). ಇದರೊಂದಿಗೆ ಯೋಗಿ ಸರ್ಕಾರದ ಪ್ರಮುಖ ಸಾಧನೆಗಳು ಮತ್ತು ಹಿಂದಿನ ಸರ್ಕಾರದ ವೈಫಲ್ಯಗಳನ್ನು ಪ್ರಚಾರಗಳಲ್ಲಿ ತೋರಿಸಲಾಗುತ್ತಿದೆ. 2017 ರ ಚುನಾವಣೆಯಲ್ಲಿ ನಮ್ಮ ಘೋಷಣೆ- 'ನಾ ಗುಂಡರಾಜ್, ನಾ ಭ್ರಷ್ಟಾಚಾರ, ಅಬ್ಕಿ ಬಾರ್ ಬಿಜೆಪಿ ಸರ್ಕಾರ್' ಎಂದು ಚಂಡೇಲ್ ಹೇಳುತ್ತಾರೆ. ಬಳಿಕ ನಮ್ಮ ಸರ್ಕಾರ ರಚನೆಯಾದಾಗ, ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. ಯೋಗಿ ಸರ್ಕಾರವು ಗೂಂಡಾಗಿರಿ ಮತ್ತು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ ಎಂದೂ ಹೇಳಿದ್ದಾರೆ.

ಪ್ರಚಾರದಲ್ಲಿ ಗಲಭೆಗಳ ಮೆಲುಕು

ಚಂಡೇಲ್ ಹೇಳುವಂತೆ, ಪ್ರಚಾರಗಳಲ್ಲಿ, ಪ್ರಸ್ತುತ ಮತ್ತು ಹಿಂದಿನ ಸರ್ಕಾರಗಳಲ್ಲಿ 'ಮರೆತುಹೋದ' ಘಟನೆಗಳು ನೆನಪಪಿಸಲಾಗುತ್ತಿದೆ. ಅಂದರೆ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಗಲಭೆಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ನಾವು ಯೋಗಿ ಸರ್ಕಾರ ಈಡೇರಿಸಿದ ಭರವಸೆಗಳ ಮೇಲೆಯೂ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು. ಅಲ್ಲದೇ ಪಕ್ಷಕ್ಕೆ ಇನ್ನಷ್ಟು ಅಗತ್ಯವಿದ್ದಾಗ ಮಮತ್ತೆ ಪ್ರಚಾರ ನಡೆಸುತ್ತೇವೆ ಎಂದಿದ್ದಾಋಎ. ಧಾರ್ಮಿಕ ಸ್ಥಳಗಳಲ್ಲಿ ಮಾಡಿದ ಕೆಲಸಗಳ ಬಗ್ಗೆಯೂ ಬಿಜೆಪಿ ಪ್ರಚಾರ ಮಾಡುತ್ತಿದೆ. ಇದರಲ್ಲಿ ರಾಮಮಂದಿರವಷ್ಟೇ ಅಲ್ಲ, ತೀರ್ಥಕ್ಷೇತ್ರಗಳೂ ಸಮಗ್ರ ಪ್ರಚಾರ ನಡೆಸುತ್ತಿವೆ. ಇವುಗಳಲ್ಲಿ ಅಯೋಧ್ಯೆ, ಕಾಶಿ, ಚಿತ್ರಕೂಟ, ಮಥುರಾಗಳ ಅಭಿವೃದ್ಧಿಯನ್ನು ಹೇಳಲಾಗುತ್ತಿದೆ.

ಲಖೀಂಪುರ ಖೇರಿಯ ಸತ್ಯವನ್ನೂ ಪ್ರಚಾರದಲ್ಲಿ ಹೆಳಲಾಗುತ್ತದೆ

ಇದೇ ವೇಳೆ ಲಖೀಂಪುರ್ ಖೇರಿ ಘಟನೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದವು. ಬಿಜೆಪಿ ವಿರುದ್ಧ ವದಂತಿ ಹಬ್ಬಿಸಲು ಯತ್ನಿಸಿದರು. ಎಲ್ಲಾ ವದಂತಿಗಳ ಹಿಂದಿನ ಸತ್ಯವನ್ನು ತಿಳಿಸಲಾಗುವುದು ಎಂದೂ ಚಂಡೇಲ್ ಹೆಳಿದ್ದಾರೆ. ಕೊರೋನಾ ವಿರುದ್ಧದ ವಿರೋಧವನ್ನು ಸಾರ್ವಜನಿಕರ ಮುಂದೆ ಮಂಡಿಸಲಾಗುವುದು ಎಂದಿದ್ದಾರೆ

ಜನರವರೆಗೆ ತಲುಪಲಿದೆ ಅಭಿಯಾನ

ಬಿಜೆಪಿ ಸಾಮಾಜಿಕ ಮಾಧ್ಯಮ ತಂಡವು ಉತ್ತರ ಪ್ರದೇಶವನ್ನು ಆರು ವಲಯಗಳಾಗಿ ವಿಂಗಡಿಸಿದೆ. ಪ್ರತಿ ವಲಯದಲ್ಲಿ ನಾಲ್ಕು ಕೆಲಸಗಾರರ ತಂಡವಿದೆ. ಜಿಲ್ಲಾ ಮಟ್ಟದಲ್ಲಿ 3 ಕೆಲಸಗಾರರ ತಂಡವಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷವು ರಾಜ್ಯ, ಪ್ರದೇಶ, ಜಿಲ್ಲೆ ಮತ್ತು ನಂತರ ಮಂಡಲ ಮಟ್ಟದಲ್ಲಿ ತಂಡಗಳನ್ನು ರಚಿಸಿದೆ. ರಾಜ್ಯದಲ್ಲಿ ಒಟ್ಟು 1,918 ಮಂಡಲಗಳನ್ನು ರಚಿಸಲಾಗಿದೆ. ಅಂದರೆ, ಪ್ರತಿ ಜಿಲ್ಲೆಯಲ್ಲಿ 15 ಕಾರ್ಮಿಕರ ತಂಡ ಮತ್ತು ವಿಭಾಗೀಯ ಮಟ್ಟದಲ್ಲಿ 20 ಕಾರ್ಮಿಕರ ತಂಡ ಸಕ್ರಿಯವಾಗಿರುತ್ತದೆ ಎಣದು ತಮ್ಮ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ ಚಂಡೇಲ್.

Follow Us:
Download App:
  • android
  • ios