ಮಳೆ ಅವಾಂತರಕ್ಕೆ ಸಾವಿರಾರು ಎಕ್ಟೇರ್‌ನಷ್ಟು ಮಾವು ನಾಶ: ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ನಾಪತ್ತೆ!

ಮೇ ತಿಂಗಳಲ್ಲಿ ಹಿಂದೆಂದು ಬೀಳದಿರುವ ಮಳೆ ಈ ವರ್ಷ ಬಿದಿದ್ದೆ. ವಾಡಿಕೆ ಮಳೆಗಿಂತ ಹೆಚ್ಚಿನ ಮಳೆ ಬಿದ್ದಿದ್ದು,ಕೋಲಾರ ಜಿಲ್ಲೆಯ ಮಾವು ಹಾಗೂ ಟೊಮೊಟೊ ಬೆಳೆಗಾರರ ನಿದ್ದೆ ಕೆಡಿಸಿದೆ.

Kolar district destroys various crops in charge minister munirathna missing gvd

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಮೇ.29): ಮೇ ತಿಂಗಳಲ್ಲಿ ಹಿಂದೆಂದು ಬೀಳದಿರುವ ಮಳೆ ಈ ವರ್ಷ ಬಿದಿದ್ದೆ. ವಾಡಿಕೆ ಮಳೆಗಿಂತ ಹೆಚ್ಚಿನ ಮಳೆ ಬಿದ್ದಿದ್ದು,ಕೋಲಾರ ಜಿಲ್ಲೆಯ ಮಾವು ಹಾಗೂ ಟೊಮೊಟೊ ಬೆಳೆಗಾರರ ನಿದ್ದೆ ಕೆಡಿಸಿದೆ. ಆದ್ರೆ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಜಿಲ್ಲೆಯ ಉಸ್ತುವಾರಿ ಹಾಗೂ ತೋಟಗಾರಿಕೆ ಸಚಿವರು ವರ್ತಿಸುತ್ತಿದ್ದು, ಕನಿಷ್ಠ ಪಕ್ಷ ಏನು ನಿಮ್ಮ ಕಷ್ಟ ಅಂತ ಕೇಳೋಕು ಜಿಲ್ಲೆಗೆ ಬಂದಿಲ್ಲ. ಇದು ರೈತರ ಕೆಂಗಣ್ಣಿಗೆ ಕಾರಣವಾಗಿದೆ. 

ಹೌದು! ಬರದ ನಾಡು ಅಂತಾನೆ ಪ್ರಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಬಿದ್ದ ಭಾರಿ ಗಾಳಿ ಸಹಿತ ಮಳೆಯಿಂದಾಗಿ 6340 ಹೆಕ್ಟೇರ್ ಪ್ರದೇಶದ 31 ಕೋಟಿ ರೂಪಾಯಿ ಬೆಲೆ ಬಾಳುವ ಬೆಳೆ ನಷ್ಟವಾಗಿದ್ರು ಸಹ ಇದುವರೆಗೂ ಜಿಲ್ಲೆಗೆ ಉಸ್ತುವಾರಿ ಸಚಿವರು ಹಾಗೂ ತೋಟಗಾರಿಕೆ ಸಚಿವರು ಆಗಿರುವ ಮುನಿರತ್ನಂ ನಾಯ್ಡು ತಲೆ ಹಾಕಿಯು ಕೂಡ ಮಲಗಿಲ್ಲ. ಏನಪ್ಪಾ ನಿಮ್ಮ ಕಷ್ಟ, ಏನಾದ್ರು ಸಹಾಯ ಬೇಕಾ ಅಂತ ಕನಿಷ್ಠ ಒಬ್ಬೇ ಒಬ್ಬ ರೈತನನ್ನು ಸಹ ಸಚಿವ ಮುನಿರತ್ನಂ ನಾಯ್ಡು ಇದುವರೆಗೂ ಕೇಳಿಲ್ಲ.ಬಿರುಗಾಳಿ ಸಹಿತ ಸುರಿದ ಸುರಿದ ಮಳೆಯಿಂದಾಗಿ ರೈತರ ಬದುಕು ಕೋಲಾರ ಜಿಲ್ಲೆಯಲ್ಲಿ ದುಸ್ತಾರವಾಗಿದ್ದು, ಕಷ್ಟಪಟ್ಟು ಬೆಳೆದಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ನೆಲಕಚ್ಚಿದೆ.

Kolar: ಕೆಜಿಎಫ್ ಚಿನ್ನದ ಗಣಿಯಲ್ಲಿ ಪಾಲಿಟಿಕ್ಸ್: ಚುನಾವಣೆ ಬಂದ್ರೆ ಸಾಕು ನೆನಪಾಗುತ್ತೆ ಚಿನ್ನದ ಗಣಿ!

ಸದ್ಯ ವಿಶ್ವ ವಿಖ್ಯಾತ ಮಾವಿನ ತವರು ಅಂತಾನೆ ಪ್ರಖ್ಯಾತಿ ಪಡೆದಿರುವ ಶ್ರೀನಿವಾಸಪುರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ 50 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಶೇ 75ರಷ್ಟು ಮಾವಿನ ಕಾಯಿಗಳು ಬಿರುಗಾಳಿಯ ರಭಸಕ್ಕೆ ನೆಲಕ್ಕುದುರಿ ಹೋಗಿದ್ದು, ಮಾವು ಬೆಳೆಗಾರರ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಅನ್ನುವಂತಿದೆ ಆದ್ರು ಸಹ ಕನಿಷ್ಠ ಸೌಜ್ಯನಕ್ಕಾದ್ರು ಸಚಿವ ಮುನಿರತ್ನ ಭೇಟಿ ನೀಡದೆ ಬೇಜವಾಬ್ದಾರಿ ತೋರಿಸಿದ್ದು, ಜಿಲ್ಲೆಯ ರೈತರು ಹಾಗೂ ರೈತ ಸಂಘದ ಮುಖಂಡರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಮಾತ್ರವಲ್ಲದೇ ಮಾವಿನ ಜೊತೆಗೆ ಜಿಲ್ಲೆಯಲ್ಲಿ ಟೊಮೊಟೊ ಬೆಳೆ ಸೇರಿದಂತೆ ಹಲವು ಬೆಳೆಗಳು ಬಿರುಗಾಳಿಗೆ ನೆಲಕಚ್ಚಿದೆ. ಇದರ ಜೊತೆಗೆ ವಿದ್ಯುತೆ ಕಂಬಗಳು, ಪಾಲಿ ಹೌಸ್ ಗಳು, ನೆಟ್ ಹೌಸ್ ಗಳು ಸಹ ಅಲ್ಲಲ್ಲಿ ನಾಶವಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಗೆ 6340 ಹೆಕ್ಟರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿದ್ದು,31 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತವೆ ಅಂದಾಜಿಸಿದೆ. ಪರಿಹಾರ ನೀಡುವಂತೆ ಸರ್ಕಾರಕ್ಕೂ ಕಳುಹಿಸಿಕೊಡಲಾಗಿದೆ. ಆದ್ರು ಸಹ ನಮಗೂ ಇದಕ್ಕೂ ಸಂಬಂಧವಿಲ್ಲ. ಅನ್ನೋ ರೀತಿ ಸಚಿವರ ವರ್ತನೆ ಕಾಣಿಸುತ್ತಿದ್ದು,ಪರಿಹಾರಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

Kolar: ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ: ಕ್ಷಣಾರ್ಧದಲ್ಲಿ ಪ್ರಾಣ ಉಳಿಸಿದ ಸ್ಥಳೀಯರು!

ಇನ್ನು ಎಷ್ಟೇ ಅಲೆದಾಡಿದ್ರು ಸಹ ಆ ದಾಖಲಿ ಬೇಕು,ಈ ದಾಖಲಾತಿ ಬೇಕು ಎಂದು ರೈತರನ್ನು ಅಧಿಕಾರಿಗಳು ಆಟಾಡಿಸುತ್ತಿದ್ರು ಸಹ ಯಾರು ಹೇಳೋರು ಕೇಳೋರು ಇಲ್ಲ ಅನ್ನೋ ರೀತಿ ಆಗಿದೆ. ಒಟ್ಟಿನಲ್ಲಿ ರಾಜಕಾರಣಿಗಳು ಕೇವಲ ಭರವಸೆಗೆ ಮಾತ್ರ ಸೀಮಿತ ಅನ್ನೋದು ಮತ್ತೆ ಸಾಬೀತಾಗಿದೆ. ಯಾವುದಾದ್ರು ರಾಜಕೀಯ ವಿಚಾರಗಳಿಗೆ ತೋರಿಸುವ ಆಸಕ್ತಿಯಲ್ಲಿ ಕನಿಷ್ಠ ಒಂದು ಪರ್ಸೆಂಟ್ ಆದ್ರು ತೋರಿಸುತ್ತಿವಲ್ಲ ಎಂದು ರೈತರು ಆಕ್ರೋಶ ಹೊರ ಹಾಕ್ತಿದ್ದಾರೆ. ಇನ್ನಾದ್ರೂ ಉಸ್ತುವಾರಿ ಸಚಿವರು ರೈತರ ಪರಿಹಾರ ಆಲಿಸಿ,ಪರಿಹಾರ ಕೊಡಿಸುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios