Kolar: ಕೆಜಿಎಫ್ ಚಿನ್ನದ ಗಣಿಯಲ್ಲಿ ಪಾಲಿಟಿಕ್ಸ್: ಚುನಾವಣೆ ಬಂದ್ರೆ ಸಾಕು ನೆನಪಾಗುತ್ತೆ ಚಿನ್ನದ ಗಣಿ!
ಅದು ಇಡೀ ದೇಶಕ್ಕೆ ಚಿನ್ನ ಕೊಟ್ಟ ದೊಡ್ಡ ಚಿನ್ನದ ಗಣಿ ಪ್ರದೇಶ. ಆದ್ರೇ ಕಳೆದ 20 ವರ್ಷಗಳಿಂದ ಕಾರಣಾಂತರಗಳಿಂದ ಚಿನ್ನದ ಗಣಿ ಬಂದ್ ಮಾಡಲಾಗಿದ್ದು,ಈಗಲೂ ಅಲ್ಲಿ ಭಾರಿ ಪ್ರಮಾಣದ ಚಿನ್ನ ಇದೇ ಅಂತ ತಜ್ಜರು ತಿಳಿಸಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಮೇ.28): ಅದು ಇಡೀ ದೇಶಕ್ಕೆ ಚಿನ್ನ ಕೊಟ್ಟ ದೊಡ್ಡ ಚಿನ್ನದ ಗಣಿ ಪ್ರದೇಶ. ಆದ್ರೇ ಕಳೆದ 20 ವರ್ಷಗಳಿಂದ ಕಾರಣಾಂತರಗಳಿಂದ ಚಿನ್ನದ ಗಣಿ ಬಂದ್ ಮಾಡಲಾಗಿದ್ದು,ಈಗಲೂ ಅಲ್ಲಿ ಭಾರಿ ಪ್ರಮಾಣದ ಚಿನ್ನ ಇದೇ ಅಂತ ತಜ್ಜರು ತಿಳಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಆ ಜಿಲ್ಲೆಯ ಪ್ರತಿನಿಧಿಗಳು ಚುನಾವಣೆ ಬಂದ್ರೆ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ತಿದ್ದಾರೆ.ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಎತ್ತ ನೋಡಿದರು ಬೃಹತ್ ಚಿನ್ನದ ಸೈನೇಡ್ ಗುಡ್ಡಗಳು.ತುಕ್ಕು ಹಿಡಿದು ಇದ್ದಲೇ ಇರುವ ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಮಿಷನರಿಗಳು.ಇದನ್ನೇ ಬಂಡವಾಳ ಮಾಡಿಕೊಂಡು ಉದ್ದುದ್ದ ಬಾಷಣ ಮಾಡ್ತಿರುವ ಜನಪ್ರತಿನಿಧಿಗಳು.
ಅಂದಹಾಗೆ ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು ಕೋಲಾರ ಜಿಲ್ಲೆಗೆ ಸೇರಿರುವ ಕೆಜಿಎಫ್ ಚಿನ್ನದ ಗಣಿಯಲ್ಲಿ,ಕೆಜಿಎಫ್ ಚಿನ್ನದ ಗಣಿಯಿಂದ ಚಿನ್ನ ಹೊರ ತೆಗೆಯುವ ಕಾಯ೯ವನ್ನು ನಿಲ್ಲಿಸಲಾಗಿದ್ದು, ಈಗಲೂ ಇಲ್ಲಿ ಭಾರಿ ಪ್ರಮಾಣದ ಚಿನ್ನ ಇದೇ ಅಂತ ತಜ್ಣರು ಕೇಂದ್ರ ಗಣಿ ಮತ್ತುಭೂ ವಿಜ್ಜಾನ ಇಲಾಖೆಗೆ ವರದಿ ಸಹ ಸಲ್ಲಿಸಿದ್ದಾರೆ. ಹೀಗಾಗಿ ಹೇಗಾದ್ರು ಮಾಡಿ ಇಲ್ಲಿ ಮತ್ತೆ ಚಿನ್ನದ ಗಣಿಯನ್ನು ಮರು ಚಾಲನೇ ಮಾಡಬೇಕು ಅಂತ ಕೆಜಿಎಫ್‌ನ ಜನಪ್ರತಿನಿಧಿಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ತಿದ್ದು, ಕೆಜಿಎಫ್‌ನ ಮತದಾರರಿಗೆ,ಯುವಕರಿಗೆ ಅಂಗೈಯಲ್ಲಿ ಆಕಾಶ ತೋರಿಸುತ್ತಿದ್ದಾರೆ.
Kolar: ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ: ಕ್ಷಣಾರ್ಧದಲ್ಲಿ ಪ್ರಾಣ ಉಳಿಸಿದ ಸ್ಥಳೀಯರು!
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದೂ ವಷ೯ ಬಾಕಿ ಇರೋದ್ರಿಂದ ಟಿಕೇಟ್ ಆಕಾಂಕ್ಷಿಗಳು ಚಿನ್ನದ ಗಣಿ ವಿಚಾರದಲ್ಲಿ ಒಂದಿಲ್ಲೊಂದು ಭರವಸೆ ನೀಡುವ ಮೂಲಕ ಮತ ಸೆಳೆಯಲು ಶುರು ಮಾಡಿಕೊಂಡಿದ್ದು,ಬೆಂಗಳೂರಿಗೆ ಹೋಗಿ ಬರುತ್ತಿರುವ ಯುವಕರಿಗೆ ನಾವು ಉದ್ಯೋಗ ಸೃಷ್ಟಿ ಮಾಡಿಕೊಡುತ್ತೇವೆ ಅಂತ ಸಿಕ್ಕ ಸಿಕ್ಕಲಿ ಭಾಷಣ ಮಾಡ್ತಿದ್ದಾರೆ. ಇನ್ನು ಕೆಜಿಎಫ್ ನಲ್ಲಿ ಬಹುತೇಕ ತಮಿಳುಗರೇ ವಾಸಿಸುತ್ತಿದ್ದಾರೆ. ಬಹುತೇಕರು ಇಲ್ಲೇ ಹುಟ್ಟಿ ಬೆಳೆದಿದ್ರು ಸಹ ಸರಿಯಾಗಿ ಕನ್ನಡ ಮಾತನಾಡೋದಕ್ಕೆ ಬರೋದಿಲ್ಲ, ಬಹುತೇಕ ಎಲ್ಲವೂ ತಮಿಳು ಭಾಷೆಯಲ್ಲೇ ವ್ಯವಹಾರ ಮಾಡ್ತಿದ್ದಾರೆ.
ಇದನ್ನೇ ಉದ್ದೇಶವಾಗಿಟ್ಟುಕೊಂಡು ಕೋಲಾರ ಸಂಸದ ಮುನಿಸ್ವಾಮಿ ತಮಿಳುಗರ ಮತಗಳನ್ನು ಸೆಳೆಯಲು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈರನ್ನು ಕೆಜಿಎಫ್‌ಗೆ ಕರೆಸಿ ತಮಿಳಿನಲ್ಲಿ ಭಾಷಣ ಮಾಡಿಸಿ,ಬಿಜೆಪಿ ಪಕ್ಷ ಮತ್ತೆ ಚಿನ್ನದ ಗಣಿಯನ್ನು ಮರು ಸ್ಥಾಪನೆ ಮಾಡಲು ಹೋರಾಡುತ್ತಿದೆ. ನೀವ್ಯಾರು ಉದ್ಯೋಗ ಹರಸಿ ಬೆಂಗಳೂರಿಗೆ ಹೋಗಿ ಬರುವ ಅವಶ್ಯಕತೆ ಇಲ್ಲ. ಸಾವಿರಾರು ಜನ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡ್ತೇವೆ ಅಂತ ಕೆ.ಅಣ್ಣಾಮಲೈ ಅವರಿಂದ ತಮಿಳಿನಲ್ಲಿ ಭಾಷಣ ಮಾಡಿಸುವ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದಾರೆ.
ಕೋಲಾರ: ಏಷ್ಯಾದ 2ನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ ಖಾಲಿ ಖಾಲಿ..!
ಇನ್ನು ಇತ್ತ ಕಾಂಗ್ರೆಸ್ ಪಕ್ಷದ ಕೆಜಿಎಫ್ ಶಾಸಕಿ ರೂಪ ಶಶಿಧರ್ ಸಹ ಚಿನ್ನದ ಗಣಿ ವಿಚಾರವನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯುತ್ತಿದ್ದು, ಉದ್ಯೋಗ ಸೃಷ್ಟಿಯ ಬಗ್ಗೆ ಭರವಸೆ ನೀಡ್ತಿದ್ದಾರೆ. ಇದನ್ನೆ ನಂಬಿಕೊಂಡಿರುವ ಸ್ಥಳೀಯರು ಚಿನ್ನದಗಣಿ ಓಪನ್ ಆಗುತ್ತೆ ಕನಸು ಕಾಣ್ತಿದ್ದಾರೆ. ಒಟ್ಟಾರೆ ಚಿನ್ನದ ಗಣಿ ವಿಚಾರವಾಗಿ ಜನಪ್ರತಿನಿಧಿಗಳು ಅಂಗೈಯಲ್ಲಿ ಆಕಾಶ ತೋರಿಸುತ್ತಿದ್ದಾರೆ. ಮತದಾರರು, ಯುವಕರು ಸಹ ಇವರನ್ನು ನಂಬಿಕೊಂಡು ಮತ ಹಾಕ್ತಿದ್ದು, ಈ ಬಾರಿ ಆದ್ರೂ ಕೊಟ್ಟ ಮಾತನ್ನು ಜನಪ್ರತಿನಿಧಿಗಳು ಉಳಿಸಿಕೊಳ್ತಾರ ಅನ್ನೋದನ್ನು ಕಾದು ನೋಡ್ಬೇಕಿದೆ.