Kolar: ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ: ಕ್ಷಣಾರ್ಧದಲ್ಲಿ ಪ್ರಾಣ ಉಳಿಸಿದ ಸ್ಥಳೀಯರು!

ಕಳೆದ ಆರು ತಿಂಗಳಿನಿಂದ ಜಮೀನಿನ ಪತ್ರ ಪಡೆಯಲು ರೈತನೊಬ್ಬ ಅಲೆದೂ ಅಲೆದೂ ಸಾಕಾಗಿ ಕೊನೆಗೆ ಕೋಲಾರ ತಾಲೂಕು ಕಛೇರಿಯಲ್ಲಿ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ.

Suicide Attempt At Tahshildar Office In Kolar gvd

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಮೇ.27): ಕಳೆದ ಆರು ತಿಂಗಳಿನಿಂದ ಜಮೀನಿನ ಪತ್ರ ಪಡೆಯಲು ರೈತನೊಬ್ಬ ಅಲೆದೂ ಅಲೆದೂ ಸಾಕಾಗಿ ಕೊನೆಗೆ ಕೋಲಾರ ತಾಲೂಕು ಕಛೇರಿಯಲ್ಲಿ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ. ಕೋಲಾರ ತಾಲೂಕಿನ ಪುರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ರೈತನಾಗಿದ್ದಾನೆ. ರೈತ ನಾರಾಯಣಸ್ವಾಮಿ ತಮ್ಮ ಜಮೀನಿನ ಹಳೆ ದಾಖಲೆ ಪಡೆಯಲು ಲಂಚ ಕೊಟ್ಟು ಕಳೆದ ಆರು ತಿಂಗಳಿಂದ ಕಛೇರಿಗೆ ಅಲೆದಾಡುತ್ತಿದ್ದನಂತೆ. ಆದರೆ, ಅಲೆದಾಟ ಸಾಕಾಗಿ ಇಂದು ಕಛೇರಿಗೆ ಬಂದು ಎಲ್ಲರ ಎದುರಿನಲ್ಲೇ 4 ಲೀಟರ್ ಡೀಸೆಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇನ್ನು ಡೀಸೆಲ್ ಖರೀದಿಸಿಕೊಂಡೇ ಬಂದಿದ್ದ ನಾರಾಯಣಸ್ವಾಮಿ ಎಲ್ಲರೆದುರೇ ಕಛೇರಿಗೆ ಬಂದು ಲಂಚ ಪಡೆದಿದ್ದವರ ಹೆಸರನ್ನು ಕೂಗಿ ಕೂಗಿ ಹೇಳುತ್ತಿದ್ದರೂ ಅತ್ತ ಕಡೆಯಿಂದ ಕನಿಷ್ಠ ಆತನ ಮಾತುಗಳನ್ನೂ ಕೇಳಿಸಿಕೊಳ್ಳುವ ಮಾನವೀಯತೆ ತೋರದ ಸಿಬ್ಬಂದಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಕ್ಷಣ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಬಂದ ಗಲ್ ಪೇಟೆ ಠಾಣೆಯ ಪೊಲೀಸರು ನಾರಾಯಣಸ್ವಾಮಿಯನ್ನು ಮನವೊಲಿಸಿ ಪ್ರಾಣಾಪಾಯದಿಂದ ಬಚಾವ್ ಮಾಡಿದ್ದಾರೆ. 

ಪ್ಲಾಸ್ಟಿಕ್ ಸೀಜ್ ಮಾಡಲು ಹೋದವರಿಗೆ ಶಾಕ್, ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ಅವಾಜ್

ಇದೇ ವೇಳೆ ರೈತ ನಾರಾಯಣಸ್ವಾಮಿ ಪರಿಸ್ಥಿತಿ ನೋಡಿ ಅಲ್ಲಿದ್ದ ಕೆಲವರು, ಇಂತಹ ನೊಂದವರು ಅದೆಷ್ಟು ಸಾರಿ ಅಲೆದರೂ ಯಾರೂ ಕೇರ್ ಮಾಡಲ್ಲ. ಇದು ಈ ಕಛೇರಿಯಲ್ಲಿ ಮಾಮೂಲಾಗಿದ್ದು ಇದಕ್ಕೆ ಕೊನೆಯೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಒಂದು ಕಡೆ ಕಂದಾಯ ಸಚಿವ ಆರ್.‌ಅಶೋಕ್‌ ಇನ್ನು ಮುಂದೆ ಮನೆ ಬಾಗಿಲಿಗೇ ಕಾಗದ ಪತ್ರಗಳನ್ನು ಕಳುಹಿಸುತ್ತೇವೆ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಲಂಚ ಕೊಟ್ಟರೂ ಕಾದಗ ಪತ್ರ ಕೊಡೋದಿರಲಿ, ಕ್ಯಾರೆ ಎನ್ನದ ಸ್ಥಿತಿ ತಾಲೂಕು ಕಛೇರಿಯಲ್ಲಿ ನಿರ್ಮಾಣವಾಗಿರೋದು ದುರಂತವೇ ಸರಿ.

ಇಂಗ್ಲಿಷ್‌ ಓದಲು ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ: ಇಂಗ್ಲಿಷ್‌ ಪಾಠ ಕಲಿಯಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ 7ನೇ ತರಗತಿಯ ವಿದ್ಯಾರ್ಥಿಯೋರ್ವ ವಿಷಸೇವಿಸಿ ಆತ್ಮಹತ್ಯೆ (Suicide) ಯತ್ನ ನಡೆಸಿದ ಘಟನೆ ತುಮಕೂರು ತಾಲ್ಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ನಡೆದಿದೆ. ತುಮಕೂರಿನ ಕೋತಿತೋಪು ನಿವಾಸಿಗಳಾದ ಸೋಮಶೇಖರ್‌, ಜಯಮ್ಮ ದಂಪತಿಯ ಮಗನೇ ಅಜಯ್‌ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ತುಮಕೂರು ನಗರದ ಕೋತಿತೋಪು ಸರ್ಕಾರಿ ಶಾಲೆಯಲ್ಲಿ  6ನೇ ತರಗತಿವರೆಗೂ ವ್ಯಾಸಂಗ ಮಾಡಿರುವ ಅಜಯ್‌, ಆದರೆ ಉದ್ಯೋಗದ ನಿಮಿತ ಅಜಯ್‌ ಪೋಷಕರು ಊರ್ಡಿಗೆರೆ ಶಿಫ್ಟ್‌ ಆಗಿದ್ದಾರೆ. ಅದರಂತೆ ಅಜಯ್‌ ಕೂಡ ಕೋತಿತೋಪು ಸರ್ಕಾರಿ ಶಾಲೆಯಿಂದ ಊರ್ಡಿಗೆರೆ ಶಾಲೆಗೆ ಸೇರ್ಪಡೆಗೊಂಡಿದ್ದಾನೆ. 

ಬಡವರ ಮನೆ ಹುಡುಗಿಗೆ ಮೋಡಿ, ಉಡುಪಿಯಲ್ಲಿ ಲವ್ ಜಿಹಾದ್‌ಗೆ ಯುವತಿ ಬಲಿ?

ಈ ತಿಂಗಳ 16ರಂದು  ಶಾಲೆ ಪ್ರಾರಂಭವಾಗಿದೆ, ಒಂದೇರಡು ದಿನ ಶಾಲೆಗೆ ಹೋದ ಅಜಯ್‌ ಮತ್ತೆ ತರಗತಿಗೆ ಹೋಗದಂತೆ ಹಿಂದೇಟು ಹಾಕಿದ್ದಾನೆ. ಪೋಷಕರು ಎಷ್ಟೇ ಹೇಳಿದರು ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಟ್ಟು ಹಿಡಿದ್ದಾನೆ. ಕೊನೆಗೆ ಪೋಷಕರು ಶಾಲೆಗೆ ಹೋಗುವಂತೆ ಒತ್ತಡ ಹೇರಿದ ಪರಿಣಾಮ, ನಿನ್ನೆ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಗಿಡಕ್ಕೆ ಹೊಡೆಯುವ ಕ್ರಿಮಿನಾಶಕವನ್ನು ಸೇವಿಸಿದ್ದಾನೆ.  ವಿಷ ಸೇವಿಸಿದ ಅಜಯ್‌ ಗೆ ವಾಂತ ಹಾಗೂ ತಲೆ ಸುತ್ತ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾನೆ. 

Latest Videos
Follow Us:
Download App:
  • android
  • ios