Mushroom: ಕೋಲಾರದ ಚಾಮರಹಳ್ಳಿ ಜಮೀನಿನಲ್ಲಿ ನಾರಾಯಣಸ್ವಾಮಿ ಎಂಬುವವರಿಗೆ 5 ಕೆಜಿ ತೂಕದ ಬೃಹತ್ ಆಳಿಂಬೆ ಪತ್ತೆಯಾಗಿದೆ. ಒಣ ಹವೆಯ ಪ್ರದೇಶದಲ್ಲಿ ಇಷ್ಟು ದೊಡ್ಡ ನೈಸರ್ಗಿಕ ಅಣಬೆ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಬೃಹದಾಕಾರದ ಆಳಿಂಬೆ (ಅಣಬೆ) ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ತಾಲೂಕಿನ ಚಾಮರಹಳ್ಳಿ ರೈತರ ಜಮೀನಿನಲ್ಲಿ ಬೋರ್‌ವೆಲ್ ರಿಪೇರಿಗೆ ತೆರಳಿದ್ದ ನಡುಪಳ್ಳಿ ಗ್ರಾಮದ ನಾರಾಯಣಸ್ವಾಮಿಗೆ ಸುಮಾರು 5 ಕೆಜಿ ತೂಕದ ಎರಡು ಬೃಹತ್ ಆಳಿಂಬೆಗಳು ಸಿಕ್ಕಿವೆ.

ತಿನ್ನಲು ಯೋಗ್ಯವಾದ ನೈಸರ್ಗಿಕ ಅಣಬೆ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹತ್ತಿರದಲ್ಲೇ ಬೆಳೆದಿದ್ದ ಬೃಹತ್ ಆಳಿಂಬೆಗಳು ಕಣ್ಣಿಗೆ ಬಿದ್ದಿವೆ. ಸಾಮಾನ್ಯವಾಗಿ ಅಣಬೆ ಚಿಕ್ಕದಾಗಿರುತ್ತದೆ, ಆದರೆ ಈ ಆಳಿಂಬೆಗಳ ಗಾತ್ರ, ತೂಕ ಕಂಡು ನಾರಾಯಣಸ್ವಾಮಿ ಅಚ್ಚರಿಗೊಂಡರು. ಪರಿಶೀಲಿಸಿದಾಗ ತಿನ್ನಲು ಯೋಗ್ಯವಾದ ನೈಸರ್ಗಿಕ ಅಣಬೆ ಎಂದು ಖಚಿತವಾಗಿದೆ.

ವಿಷಕಾರಿಯಲ್ಲ ಎಂದು ಖಾತರಿಪಡಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗಿ ಆಳಿಂಬೆ ಸಾಂಬಾರ್ ತಯಾರಿಸಿ ಕುಟುಂಬ ಸಮೇತ ಸವಿದಿದ್ದಾರೆ. ಸಾಮಾನ್ಯವಾಗಿ ಮಲೆನಾಡು, ಕರಾವಳಿ ದಟ್ಟ ಕಾಡುಗಳಲ್ಲಿ ಇಂತಹ ಬೃಹತ್ ಆಳಿಂಬೆ ಕಂಡುಬರುತ್ತದೆ. ಕೋಲಾರದಂತಹ ಒಣ ಹವೆಯ ಪ್ರದೇಶದಲ್ಲಿ ಸಿಕ್ಕಿರುವುದು ಸ್ಥಳೀಯರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.

ಕಳಪೆ ಆಲೂ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಯಾವಾಗ

ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ರೈತರ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂದರೆ ತಾಲೂಕಿನಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡುವಾಗ ರೈತರಿಗೆ ವರ್ತಕರು ಕಡ್ಡಾಯವಾಗಿ ರಶೀದಿ ನೀಡದೆ ಕಳಪೆ ಬಿತ್ತನೆ ಬೀಜ ನೀಡಿ ವಂಚಿಸುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.ಹಾಸನ ಜಿಲ್ಲೆ ಹೊರತುಪಡಿಸಿದರೆ ಅಲೂ ಅತೀ ಹೆಚ್ಚು ಬೆಳೆಯುವುದು ಕೋಲಾರ ಜಿಲ್ಲೆಯಲ್ಲೇ. ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂ ಕೃಷಿಗೆ ಬಿತ್ತನೆ ಬೀಜಕ್ಕೆ ದರ ನಿಗದಿಪಡಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ.

ಬಿತ್ತನೆ ಬೀಜ ದರ ನಿಗದಿ ವಿಷಯದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಮೀನಮೇಷ ಎಣಿಸುತ್ತಿದೆ. ಇದರಿಂದ ಜಿಲ್ಲೆಯ ರೈತರಿಗೆ ಅಂದಾಜು ವಾರ್ಷಿಕ 500 ಕೋಟಿ ರು.ಗಳು ನಷ್ಟವಾಗು ತ್ತಿದೆ ಎನ್ನುವುದು ಇಲ್ಲಿನ ಹೆಸರು ಹೇಳಲು ಇಚ್ಚೀಸದ ಎಪಿಎಂಸಿ ಅಧಿಕಾರಿ ನೀಡಿರುವ ಅಂಕಿಅಂಶಗಳಲ್ಲಿ ದೃಢಪಟ್ಟಿದೆ.

ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ

ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವರ್ತಕರು ತೋಟಗಾರಿಕೆ, ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯುವುದು ಮತ್ತು ಗುಣಮಟ್ಟ ಪರೀಕ್ಷಿಸುವುದು ಕಡ್ಡಾಯ. ಆದರೆ ನಗರದಲ್ಲಿ ಪರವಾನಗಿ ಪಡೆದು ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ ಪರವಾನಗಿ ಪಡೆಯದೇ ಮಾರಾಟ ಮಾಡುವ ವರ್ತಕರ ವಿರುದ್ಧ ಸಂಬಂಧಪಟ್ಟ ಇಲಾಖೆ ಯಾಗಲಿ ಅಥವಾ ಜಿಲ್ಲಾಡಳಿತವಾಗಳಿ ಕ್ರಮಕ್ಕೆ ಮುಂದಾಗುತ್ತಿ ಲ್ಲ.