Asianet Suvarna News Asianet Suvarna News

Kodihalli Chandrashekar: ಪ್ರಧಾನಿ ಬಳಿ ಮಾತನಾಡುವ ಧಮ್‌, ಸಿಎಂ ಬೊಮ್ಮಾಯಿಗೆ ಎಲ್ಲಿದೆ?

ಮೇಕೆದಾಟು ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಮಾತನಾಡುವ ಧಮ್‌ ಸಿಎಂ ಬಸವರಾಜ ಬೊಮ್ಮಾಯಿ ಅವರಿಗಿದೆಯಾ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಪ್ರಶ್ನಿಸಿದರು.

kodihalli chandrashekar slams cm basavaraj bommai over water projects in karnaraka gvd
Author
Bangalore, First Published Mar 30, 2022, 1:00 PM IST

ಹಿರಿಯೂರು (ಮಾ.30): ಮೇಕೆದಾಟು (Mekedatu Padayatre) ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಳಿ ಹೋಗಿ ಮಾತನಾಡುವ ಧಮ್‌ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗಿದೆಯಾ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ (Kodihalli Chandrashekar) ಪ್ರಶ್ನಿಸಿದರು. ವಿವಿ ಸಾಗರ ಜಲಾಶಯಕ್ಕೆ 10 ಟಿಎಂಸಿ ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.

ಮೇಕೆದಾಟು ಯೋಜನೆ ಜಾರಿಗೆ ತರಲು ಮೋದಿ ಬಳಿ ಮಾತನಾಡಲು ಕರ್ನಾಟಕಕ್ಕೆ ಆಗುತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ನ್ಯಾಯಬದ್ಧವಾದ ಹಕ್ಕು ಇಲ್ಲವೆಂದರು. ವಿವಿ ಸಾಗರಕ್ಕೆ ಹತ್ತು ಟಿಎಂಸಿ ನೀರು ತರಬೇಕು ಮತ್ತು ಸಕ್ಕರೆ ಕಾರ್ಖಾನೆ ಪುನಾರಂಭದ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ಇದೆ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ರೆಡ್ಡಿಹಳ್ಳಿ ವೀರಣ್ಣ, ಚಿಕ್ಕ ಕಬ್ಬಿಗೆರೆ ನಾಗರಾಜ್‌, ತಿಮ್ಮಾರೆಡ್ಡಿ, ಗಣೇಶ್‌, ಶಿವಣ್ಣ, ಮೈಲಾರಪ್ಪ, ರಾಜಪ್ಪ, ಭೂತೇಶ್‌ ಮುಂತಾದವರು ಹಾಜರಿದ್ದರು.

Karnataka Assembly Election : ಚುನಾವಣಾ ರಾಜಕೀಯಕ್ಕೆ ರೈತ ಸಂಘ

ವಿವಿ ಸಾಗರ ತುಂಬಿಸುವ ಹೊಣೆಗಾರಿಕೆ ರೈತರದ್ದು: ಜಿಲ್ಲೆಯ ಏಕೈಕ ಜೀವನಾಡಿ ಹಿರಿಯೂರಿನ ವಾಣಿ ವಿಲಾಸ ಜಲಾಶಯವನ್ನು ತುಂಬಿಸುವ ಎಲ್ಲ ಹೊಣೆಗಾರಿಕೆ ರೈತರ ಮೇಲಿದೆ ಎಂದು ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಹೇಳಿದರು. ಧರಣಿ ಸತ್ಯಾಗ್ರಹ 16ನೇ ದಿನಕ್ಕೆ ಕಾಲಿಟ್ಟಹಿನ್ನೆಲೆಯಲ್ಲಿ ಹೊಸದುರ್ಗ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಆಗಮಿಸಿ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಿಂದ ಹಿರಿಯೂರಿನ ವಿವಿ ಸಾಗರಕ್ಕೆ 10 ಟಿಎಂಸಿ ನೀರನ್ನು ಕೇಳುತ್ತಿರುವುದು ತಪ್ಪಲ್ಲ. ವಿವಿ ಸಾಗರ ಡ್ಯಾಂ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ವೇದಾವತಿ ನದಿಯನ್ನು ಪುನಶ್ಚೇತನ ಮಾಡುವುದಕ್ಕೆ ಸರ್ಕಾರ ಜಾಗೃತಿ ವಹಿಸಬೇಕು. 

ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡದೇ ಹೋದರೆ ವೇದಾವತಿ ನದಿ ನಶಿಸಿ ಹೋಗುತ್ತದೆ. ನಮ್ಮ ತೆರಿಗೆ ಹಣದಲ್ಲಿ ಬೇರೆ ಬೇರೆ ಕಡೆ ಡ್ಯಾಂ ನಿರ್ಮಾಣ ಮಾಡಿ ನೀರು ಹರಿಸಲಾಗಿದೆ. ಆದರೆ ನಮ್ಮ ಜಿಲ್ಲೆಗೆ ಯಾಕೆ ನಿಮ್ಮ ಈ ತಾರತಮ್ಯ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು. ನಗರದ ರಂಜಿತಾ ಹೋಟೆಲ್‌ನಿಂದ ತಾಲೂಕು ಕಚೇರಿ ಮುಂಭಾಗದ ಧರಣಿ ಸತ್ಯಾಗ್ರಹ ಸ್ಥಳದವರೆಗೂ ಬೈಕ್‌ ರಾರ‍ಯಲಿ ನಡೆಸಲಾಯಿತು. ಹೊಸದುರ್ಗ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ, ಬೋರೇಶ್‌, ರಮೇಶ್‌, ಚಿತ್ತಪ್ಪ, ರಘು, ನಿಂಗಪ್ಪ, ವೇದಮೂರ್ತಿ, ಸಂತೋಷ್‌, ಹರೀಶ್‌, ಶಿವಪ್ಪ, ಕುಮಾರ್‌, ಉಮೇಶ್‌, ಮಹಾಂತೇಶ್‌, ಕುಮಾರಸ್ವಾಮಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ಗುಂಡಪ್ಪ , ತಿಮ್ಮಾರೆಡ್ಡಿ ಉಪಸ್ಥಿತರಿದ್ದರು.

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ

ನಾನು ಸದನದಲ್ಲಿ ಇದ್ದಿದ್ರೆ ಮೆಟ್ಟು ತಗೊಂಡು ಹೊಡೀತಿದ್ದೆ: ಶಾಸ​ಕರು, ಸಚಿ​ವರು ಸದ​ನಕ್ಕೆ ಗೌರವ ಬರುವಂತೆ ನಡೆ​ದು​ಕೊ​ಳ್ಳು​ವುದು ಬಿಟ್ಟು, ಬಾಯಿಗೆ ಬಂದಂತೆ ಮಾತ​ನಾ​ಡು​ತ್ತಿ​ದ್ದಾರೆ. ಮಹಿ​ಳೆ​ಯರ ಬಗ್ಗೆ ಅಗೌ​ರ​ ತೋರು​ತ್ತಿ​ದ್ದಾ​ರೆ. ‘ಒಂದು ವೇಳೆ ನಾನು ಸದನದಲ್ಲಿ ಇದ್ದಿದ್ರೆ ಮೆಟ್ಟು ತಗೊಂಡು ಹೊಡೀತಿದ್ದೆ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುವವರ ವಿರುದ್ಧ ಕ್ರಮವಾಗಬೇಕು. ಪ್ರತಿಪಕ್ಷದ ಸದಸ್ಯರು ಮೌನದಿಂದ ಹೊರ ಬರಬೇಕು. ಇಂತಹ ಹೇಳಿಕೆಗಳಿಗೆ ಆಸ್ಪದವಾಗದಂತೆ ಪ್ರತಿಭಟಿಸಬೇಕು ಎಂದರು. ಶಾಸ​ಕ, ಸಚಿ​ವ​ರಾ​ದ​ವರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯೇ? ಅಂಥ ಸಂದರ್ಭದಲ್ಲಿ ನಾನೇನಾದರೂ ಸದನದಲ್ಲಿ ಇದ್ದಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದ​ರು.

Follow Us:
Download App:
  • android
  • ios