Karnataka Assembly Election : ಚುನಾವಣಾ ರಾಜಕೀಯಕ್ಕೆ ರೈತ ಸಂಘ
- ಚುನಾವಣಾ ರಾಜಕೀಯಕ್ಕೆ ರೈತ ಸಂಘ
- ವಿಧಾನಸಭಾ ಚುನಾವಣೆ ರೈತ ಸಂಘ ಸ್ಪರ್ಧೆ - ಕೋಡಿಹಳ್ಳಿ ಚಂದ್ರಶೇಖರ್
ಚಿಕ್ಕಬಳ್ಳಾಪುರ (ಜ.06): ಮುಂಬರುವ 2023 ವಿಧಾನಸಭೆಯ (Karnataka Assembly Election) ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ರೈತ ಸಂಘದ (Raitha sangh) ಹಲವು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದೆಯೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli chandrashekar) ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ (Chikkaballapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ಲಿ ರಾಜಕೀಯ (Politics) ಪಕ್ಷಗಳ ಮೇಲೆ ವಿಶ್ವಾಸ, ನಂಬಿಕೆ ಕಳೆದುಕೊಂಡಿವೆ. ಸಾರ್ವತ್ರಿಕ ಚುನಾವಣೆಯಲ್ಲಿ (Election) ಸ್ಪರ್ಧಿಸಲು ರೈತ ಸಂಘ ಗಂಭೀರ ಚಿಂತನೆ ನಡೆಸಿದೆಂದ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರ (Govt Of India) ಕೃಷಿ ಕಾಯ್ದೆಗಳನ್ನು ಶಾಸನ ಬದ್ದವಾಗಿ ವಾಪಸ್ಸು ತೆಗೆದುಕೊಂಡಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಇನ್ನೂ ವಾಪಸ್ಸು ಪಡೆದಿಲ್ಲ. ಬೆಳಗಾವಿ (belagavi) ಆಧಿವೇಶನ ನಡೆದಾಗ ಸಿಎಂ ಬೊಮ್ಮಾಯಿ ಭರವಸೆ ನೀಡಿ ರಾಜ್ಯದಲ್ಲಿ ಕಾಯ್ದೆಗಳ ವಾಪಸ್ಸು ಬಗ್ಗೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ನಿರ್ಧರಿಸುವುದಾಗಿ ಹೇಳಿದ್ದಾರೆ. ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ ದೆಹಲಿ ಹೋರಾಟದ ಮಾದರಿಯಲ್ಲಿ ರಾಜ್ಯಾದ್ಯಂತ ರೈತರ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಹಾಲಿಗೆ ಯೋಗ್ಯ ಬೆಲೆಗೆ ಆಗ್ರಹಿಸಿ 11ಕ್ಕೆ ಬೃಹತ್ ಪ್ರತಿಭಟನೆ
ಹಾಲಿಗೆ ಪ್ರತಿ ಲೀಟರ್‌ಗೆ ಯೋಗ್ಯ ಬೆಲೆ ಕೊಡಬೇಕೆಂದು ಆಗ್ರಹಿಸಿ ಜನವರಿ 11 ರಂದು ಮಂಗಳವಾರ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಹಾಲು ಉತ್ಪಾದಕರಿಗೆ ಕನಿಷ್ಠ ಪ್ರತಿ ಲೀ, ಹಾಲಿಗೆ (Milk) 30 ರಿಂದ 35 ರು, ದರ ನಿಗಧಪಡಿಸಬೇಕು. ಕೂಡಲೇ ಈ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ಹಾಲು ಒಕ್ಕೂಟಗಳ ದುರಾಡಳಿತದಿಂದ ಆಗುವ ಆರ್ಥಿಕ ನಷ್ಟವನ್ನು ಮುಂದಿಟ್ಟುಕೊಂಡು ರೈತರಿಗೆ ಹಾಲಿನ ದರ ಕಡಿತಗೊಳಿಸುವುದು ಯಾವ ನ್ಯಾಯ, ಒಕ್ಕೂಟಗಳ ಆರ್ಥಿಕ ನಷ್ಠಕ್ಕೆ ಹಾಲು ಉತ್ಪಾದಕರು ಹೇಗೆ ಹೊಣೆ ಆಗುತ್ತಾರೆಂದು ಪ್ರಶ್ನಿಸಿದ ಕೋಡಿಹಳ್ಳಿ ಚಂದ್ರಶೇಖರ್ , 34 ರು, ಇದ್ದ ಲೀ, ಹಾಲು ಇದೀಗ 29 ರು , ದರಕ್ಕೆ ಖರೀದಿ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಏಕರೂಪ ದರದಲ್ಲಿ ರೈತರಿಗೆ ಹಾಲಿನ ದರ ನಿಗಧಿಗೊಳಿಸಬೇಕು, ಒಕ್ಕೂಟದ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕೆಂದ ಅವರು, ಹಾಲು ಒಕ್ಕೂಟಗಳು ರೈತರ ಹಾಲಿಗೆ ಯೋಗ್ಯ ಬೆಲೆ ನಿಗಧಿಗೊಳಿಸಬೇಕು. ಇಲ್ಲದೇ ಹೋದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಕೋಲಾರದಲ್ಲಿ ನಡೆಯುವ ಪ್ರತಿಭಟನೆ ಕೇವಲ ಸಾಂಕೇತಿಕ ಮಾತ್ರ. ಹಾಲಿನ ಬೆಲೆ ಏರಿಕೆ ಮಾಡದಿದ್ದರೆ ಬೆಂಗಳೂರಿನ (Bengaluru) ಕೆಎಂಎಫ್ ಕಚೇರಿ ಮುಂದೆಯು ರೈತರ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರ ಹಳ್ಳಿ ಬೈರೇಗೌಡರು , ರಾಜ್ಯ ಮಹಿಳಾ ಸಂಚಾಲಕಿ ಸಿ. ಉಮಾ, ರಾಜ್ಯ ಹಸಿರು ಸೇನೆ ಸಂಚಾಲಕ ಎಸ್ . ಲಕ್ಷ್ಮಣರೆಡ್ಡಿ , ಜಿಲ್ಲಾಧ್ಯಕ್ಷ ಹೆಚ…. ಪಿ. ರಾಮನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ , ತಾಲ್ಲೂಕು ಅಧ್ಯಕ್ಷ ರಾಮಾಂಜಿನಪ್ಪ, ಮುರಳಿ , ಮಾಲಪ್ಪ, ತಾದೂರು ಮಂಜುನಾಥ, ರಮಣಾರೆಡ್ಡಿ, ಶಿಡ್ಲಘಟ್ಟನಗರ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀನಿವಾಸ, ಮುಖಂಡರಾದ ಬೀರಪ್ಪ, ಮುನಿನಂಜಪ್ಪ, ತಿಪ್ಪೇನಾಯಕ, ನಾರಾಯಣ ಸ್ವಾಮಿ , ಗಂಗಿರೆಡ್ಡಿ, ಕೃಷ್ಣಪ್ಪ, ಹಸಿರು ಸೇನೆಯ ಜಿಲ್ಲಾ ಸಂಚಾಲಕರಾದ ಸೋಮು, ರವಿ, ರಮೇಶ್ ಮತ್ತಿತರರು ಇದ್ದರು.
ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಏಕೆ ಅನುಷ್ಟಾನಗೊಳಿಸಲಿಲ್ಲ. ಸ್ವತಃ ಡಿ.ಕೆ.ಶಿವಕುಮಾರ್ ಜಲ ಸಂಪನ್ನೂಲ ಸಚಿವರಾಗಿದ್ದರು. ಅಧಿಕಾರ ಇದ್ದಾಗ ಮಾಡದವರ ಈಗ ಪಾದಯಾತ್ರೆ ಮಾಡಿದರೆ ಜನ ನಂಬುವುದಿಲ್ಲ. ಮೇಕೆದಾಟು ಯೋಜನೆ ಪರವಾಗಿ ಹೋರಾಟಲು ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಅಧಿಕಾರಕ್ಕೆ ಬರಲು ಬೇಕಾದ ಪವರ್ ಪಾಲಿಟಿಕ್ಸ್ ಮಾಡುವಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ.
- ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ರಾಜ್ಯಾಧ್ಯಕ್ಷ