ಆಮ್ಲಜನಕದ ಮಹತ್ವ ಅರಿತು ಗಿಡಮರ ಬೆಳೆಸಿ: ಸಂಸದ ಮುನಿಸ್ವಾಮಿ

ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್‌ ಮಹತ್ವವನ್ನು ನಮಗೆಲ್ಲ ತೋರಿಸಿ ಕೊಟ್ಟಿದೆ. ಅದರಿಂದಾಗಿ ಗಿಡ, ಮರಗಳ ಮಹತ್ವವನ್ನು ಅರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು. 

Know the importance of oxygen and grow trees Says MP S Muniswamy gvd

ಕೋಲಾರ (ಜು.03): ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್‌ ಮಹತ್ವವನ್ನು ನಮಗೆಲ್ಲ ತೋರಿಸಿ ಕೊಟ್ಟಿದೆ. ಅದರಿಂದಾಗಿ ಗಿಡ, ಮರಗಳ ಮಹತ್ವವನ್ನು ಅರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು. ತಾಲೂಕಿನ ವಕ್ಕಲೇರಿ ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಪೋಲಿಸ್‌ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ 2023ರ ವನಮಹೋತ್ಸವದಲ್ಲಿ ಮಾತನಾಡಿ, ಮನುಷ್ಯ ಜೀವಿಸಲು ಪ್ರಮುಖವಾಗಿ ಆಮ್ಲಜನಕ ಬೇಕು. ಮರಗಿಡಗಳನ್ನು ಬೆಳೆಸುವುದು ಕಷ್ಟ, ಆದರೆ ಅವುಗಳನ್ನು ನಾಶ ಮಾಡುವುದು ಸುಲಭ. ಯಾವುದೇ ಮರಗಳನ್ನು ನಾಶ ಮಾಡಬಾರದು ಎಂದರು.

ಶಾಲೆ, ಹಾಸ್ಟೆಲ್‌ ಆವರಣದಲ್ಲಿ ಕೈತೋಟ: ಪ್ರತಿಯೊಂದು ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಜೊತೆಯಾಗಿ ಕೈತೋಟಗಳನ್ನು ಮಾಡಬೇಕಾಗಿದೆ, ತರಕಾರಿಗಳನ್ನು ತಾವೇ ಬೆಳೆಯುವುದು ಹೇಗೆ ಅದರ ಮಹತ್ವ ಗೊತ್ತಾಗುತ್ತದೆ ಜೊತೆಗೆ ಆಸಕ್ತಿ ಬರುತ್ತದೆ. ನೀವು ಎಲ್ಲರೂ ಒಂದು ಗುರುತುಗಳನ್ನು ಬಿಟ್ಟು ಹೋಗುವ ರೀತಿಯಲ್ಲಿ ತಂದೆ ತಾಯಿಗಳಿಗೆ ಒಳ್ಳೆಯ ಪ್ರಜೆಗಳಾಗುವಂತೆ ನಡೆದುಕೊಳ್ಳಬೇಕು ಎಂದರು. ವಿಧಾನಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಕುಮಾರ್‌ ಮಾತನಾಡಿ, ನಮ್ಮ ಉಳಿವಿಗಾಗಿ ಮರಗಿಡಗಳನ್ನು ಬೆಳೆಸಿ ರಕ್ಷಿಸಬೇಕು. ಸರ್ಕಾರದ ಜನಪ್ರಿಯ ಯೋಜನೆಯನ್ನು ಜವಾಬ್ದಾರಿಯಿಂದ ನಾವು ಎಲ್ಲರೂ ಒಗ್ಗಟ್ಟಿನಿಂದ ನಿರ್ವಹಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಅವಶ್ಯಕತೆ ಇರುವ ಆಮ್ಲಜನಕವನ್ನು ಉತ್ಪಾದಿಸಲು ವರ್ಷಕ್ಕೆ ಐದು ಕೋಟಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕಾಗಿದೆ ಎಂದರು.

Kolar: ಕಲ್ಲುಕುಟುಗರಿಗೆ ಕೆಲಸ ಮಾಡಲು ಪರವಾನಗಿ ನೀಡಿ: ಸಂಸದ ಮುನಿಸ್ವಾಮಿ ಆಗ್ರಹ

ಮೀಸಲಾತಿ ಸದ್ಬಳಕೆ ಮಾಡಿಕೊಳ್ಳಿ: ಬಡವರ ಮಕ್ಕಳಿಗೆ ವಸತಿ ಶಾಲೆಗಳು ಶಿಕ್ಷಣದ ದಾರಿದೀಪವಾಗಿವೆ. ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಇಂತಹ ವಸತಿ ಶಾಲೆಗಳಿಂದ ಸಾಧ್ಯ, ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ, ಎಲ್ಲಾ ಕ್ಷೇತ್ರದಲ್ಲಿ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಿದ್ದಾರೆ, ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಇರುವ ಮೀಸಲಾತಿ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಶಾಸಕ ಕೊತ್ತೂರು ಮಂಜುನಾಥ್‌ ಮಾತನಾಡಿ, ಪರಿಸರ ಉಳಿದರೆ ಮಾತ್ರ ನಮ್ಮ ಆಯಸ್ಸು ಜಾಸ್ತಿಯಾಗುತ್ತದೆ,ಪರಿಸರ ನಾಶ ಮಾಡಿದಷ್ಟುನಮ್ಮ ಆಯಸ್ಸು ಕಡಿಮೆಯಾಗುತ್ತದೆ, ಅದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮರಗಿಡಗಳನ್ನು ಕಡಿದರೆ ತಮ್ಮ ಮಕ್ಕಳ ಕೈ ಕಡಿದಂತೆ. ಕಾಡನ್ನು ನಾಶ ಮಾಡುವುದರಿಂದ ಕಾಡು ಪ್ರಾಣಿ ಪಕ್ಷಿಗಳು ನಾಡಿಗೆ ಬರುತ್ತಾ ಇದ್ದು ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಹಾಕಿದರೆ ಅವುಗಳಿಗೂ ಅನುಕೂಲ ಜೊತೆಗೆ ಆಮ್ಲಜನಕ ಹೆಚ್ಚಾಗುತ್ತದೆ ಎಂದರು.

ಸಸಿ ಬೆಳೆಸಲು ಸಹಾಯಧನ: ಉಪ ಅರಣ್ಯ ಸಂರಕ್ಷಾಧಿಕಾರಿ ಏಡುಕೊಂಡಲು ಮಾತನಾಡಿ, ಸರ್ಕಾರ ಪ್ರತಿ ವರ್ಷ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದು ಪ್ರತಿ ಸರಕಾರಿ ಕಛೇರಿ ಶಾಲೆ ಕಾಲೇಜು ಸೇರಿದಂತೆ ಸಾರ್ವಜನಿಕರು ಕೂಡ ಸ್ವಂತ ಜಮೀನಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡಬಹುದಾಗಿದೆ. ಇದಕ್ಕೆ ಸರ್ಕಾರ ಸಹಾಯಧನ ನೀಡುತ್ತದೆ. ಗಿಡಗಳು ಭೂಮಿಯನ್ನು ರಕ್ಷಣೆ ಮಾಡುವ ಜೊತೆಗೆ ಉತ್ತಮ ಗಾಳಿಯನ್ನು ನೀಡುವಂತೆ ಮಾಡಬಹುದಾಗಿದೆ ಎಂದರು.

ಕಾಂಗ್ರೆಸ್‌ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ

ಜಿಲ್ಲಾಧಿಕಾರಿ ಅಕ್ರಂ ಪಾಷ, ಹೆಚ್ಚುವರಿ ಎಸ್ಪಿ ಭಾಸ್ಕರ್‌, ತಹಸೀಲ್ದಾರ್‌ ಹರ್ಷವರ್ಧನ್‌, ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಉಪಾಧ್ಯಕ್ಷೆ ಚಿನ್ನಮ್ಮ, ಸಹಾಯಕ ಅರಣ್ಯಾಧಿಕಾರಿ ಸಹನ್‌ ಕುಮಾರ್‌, ವಲಯ ಅರಣ್ಯಾಧಿಕಾರಿ ವಾಸುದೇವ್‌ ಮೂರ್ತಿ, ಸಾಮಾಜಿಕ ಉಪವಲಯ ಅರಣ್ಯಾಧಿಕಾರಿ ಬಿಂದು, ಮಂಜುನಾಥ್‌, ಮನೋಹರ್‌, ಅನಂದ್‌ ಕುಮಾರ್‌, ಶಾಲೆ ಪ್ರಾಂಶುಪಾಲ ಅನಂತಕುಮಾರ್‌, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಚಂಜಿಮಲೆ ರಮೇಶ್‌, ಪಿಡಿಒ ಮಂಜುನಾಥ್‌ ಪ್ರಸಾದ್‌ ಇದ್ದರು.

Latest Videos
Follow Us:
Download App:
  • android
  • ios