ಉಳ್ಳಾಲ(ಜು.08): ಮಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಿದ ಕಾರಣ ಪಾಸ್‌ ಹಿಡಿದು ದಿನನಿತ್ಯ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ಮಂಗ​ಳ​ವಾರ ಬೆಳಗ್ಗೆ ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಯಿತು. 100ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಜಮಾಯಿಸಿ ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಬಿಗು ವಾತಾವರಣ ಸೃಷ್ಟಿಯಾಯಿತು.

ಅಂತರ್‌ ಜಿಲ್ಲ ದೈನಂದಿನ ಸಂಚಾ​ರದ ಇಪಾಸ್‌ ಅವ​ಧಿ​ಯನ್ನು ದ.ಕ. ಜಿಲ್ಲಾಡಳಿತ ಜುಲೈ 11ರ ವರೆಗೆ ಪಾಸ್‌ ಅವಧಿ ವಿತರಿಸಿದೆ. ಅಷ್ಟುಸಮಯ ಬಿಡಬೇಕು ಎಂದು ಮಂಗಳೂರಿಗೆ ಬರುವ ಮಂದಿ ಕೇರಳ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಮಂಗಳೂರಿಗೆ ನಿತ್ಯಪಾಸ್‌ ರದ್ದು: ಕೇರಳ ಕರ್ನಾಟಕ ಸಂಚಾರವೇ ಬಂದ್

ಆದರೆ ಮಂಗಳೂರಿನಿಂದ ಕಾಸ​ರ​ಗೋ​ಡಿಗೆ ಮರ​ಳಿದ ಐದು ಮಂದಿಯಲ್ಲಿ ಕೊರೋನಾ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಕಠಿಣ ಆದೇಶ ಇರುವುದರಿಂದ ‘ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳಿ’ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಇದರಿಂದ ಪೊಲೀಸರ ಹಾಗೂ ಜನರ ನಡುವೆ ವಾಗ್ವಾದ ನಡೆದಿದೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಕನ್ನಡ ಕಲಿತ ಫ್ರೆಂಚ್‌ ಪ್ರಜೆ!

ಈ ಸಂದರ್ಭ, ತಲ​ಪಾ​ಡಿ​ಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಮುಖಂಡ ವಕೀಲ ನವೀನ್‌ ರಾಜ್‌, ಭಾರತೀಯ ರೈಲ್ವೇ ಮಜ್ದೂರ್‌ ಸಂಘ ಡಿವಿಸನಲ್‌ ಅಧ್ಯಕ್ಷ ತುಳಸೀದಾಸ್‌, ಮಂಜೇಶ್ವರ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಅವಿನಾಶ್‌, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದಶ್‌ರ್‍ ಬಿ.ಎಂ. ಇದ್ದರು.