Land Mafia: ನಕಲಿ ದಾಖಲೆ ಸೃಷ್ಟಿಸಿ ರೈತರ ಭೂಮಿ ಕಬಳಿಸಿದ ರಾಜಕೀಯ ಮುಖಂಡರು

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಜಾಲವೊಂದು ಆ್ಯಕ್ಟೀವ್ ಆಗಿದೆ.ಬೇರೆಯವರ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ದೋಖಾ ಮಾಡ್ತಿದ್ದಾರೆ.

Karnataka Political leaders created fake documents and grabbed Chamarajanagar farmers land sat

ವರದಿ - ಪುಟ್ಟರಾಜು. ಆರ್. ಸಿ. ಏಷ್ಯಾನೆಟ್  ಸುವರ್ಣ ನ್ಯೂಸ್ 

ಚಾಮರಾಜನಗರ (ಜು.06): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಜಾಲವೊಂದು ಆ್ಯಕ್ಟೀವ್ ಆಗಿದೆ.ಬೇರೆಯವರ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ದೋಖಾ ಮಾಡ್ತಿದ್ದಾರೆ.

ಕಳೆದ ಜನವರಿಯಲ್ಲೂ ಕೂಡ ಇಂತಹದ್ದೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ ಪ್ರಕರಣ ನಡೆದಿತ್ತು.ಇದೀಗ ಅಂತಹದ್ದೆ ಪ್ರಕರಣವೊಂದು ಮರುಕಳಿಸಿದ್ದು,ಅದೇ ಗ್ಯಾಂಗ್ ಮತ್ತೊಂದು ಜಮೀನನ್ನು ಪೋರ್ಜರಿ ಮಾಡಿ ಮಾರಾಟ ಮಾಡಿದೆ.ಇದರಲ್ಲಿ ಬಿಜೆಪಿಯ ಮಾಜಿ ಜಿ.ಪಂ.ಸದಸ್ಯ ಬಾಲರಾಜು ಹಾಗೂ ನಗರಸಭೆ ಸದಸ್ಯ ಶಿವರಾಜು ಹೆಸರು ಕೂಡ ತಗಲಾಕೊಂಡಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಕೇವಲ 12 ಗಂಟೆಯಲ್ಲಿ 21 ಏಕರೆ ಬಿತ್ತನೆ ಮಾಡಿದ ಯುವರೈತ: ಹಲಗೆ ಬಾರಿಸಿದ ಗ್ರಾಮಸ್ಥರು

ಭೂ ಕಬಳಿಕೆಯಲ್ಲಿ ರಾಜಕೀಯ ಗಣ್ಯರ ಹೆಸರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಆರೋಪದಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಪತ್ರ ಬರಹಗಾರ, ಬಿಜೆಪಿ ಮುಖಂಡ ಸಿ.ಎನ್.ಬಾಲರಾಜು, ನಗರಸಭಾ ಸದಸ್ಯ ಸಿ.ಎಂ.ಶಿವರಾಜು, ಗೋವಿಂದ ಶೆಟ್ಟಿ ಎಂಬುವವರ ಹೆಸರುಗಳಿದೆ. ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಸರ್ವೆ ನಂಬರ್ 108 ಹರದನಹಳ್ಳಿ ಗ್ರಾಮದ ಗೋವಿಂದ ಶೆಟ್ಟಿ ಎಂಬುವವರ ಹೆಸರಿನ  ಜಮೀನನ್ನು ಚಂದ್ರಶೇಖರ್ ಎನ್ನುವವರಿಗೆ  ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮಾಲೀಕನ ಹೆಸರೇ ಬದಲಿಸಿ ದಾಖಲೆ ಸೃಷ್ಟಿ:  ಗೋವಿಂದ ಶೆಟ್ಟಿ ಅನ್ನೋ ವ್ಯಕ್ತಿಯನ್ನು ಸೃಷ್ಟಿಸಿ ಜಮೀನು ಮಾಲೀಕರೆಂದು ತೋರಿಸಿ , ಕಳೆದ ವರ್ಷದ ಸೆಪ್ಟೆಂಬರ್ ಚಂದ್ರಶೇಖರ್ ಎನ್ನುವವರಿಗೆ ಮಾರಾಟ ಮಾಡಲಾಗಿದೆ.ಇದೀಗ ದೂರುದಾರ ಗೋವಿಂದಶೆಟ್ಟಿ ಅವರು ಕೆಇಬಿಯ ನಿವೃತ್ತ ನೌಕರರಾಗಿದ್ದಾರೆ. 1975 ರಲ್ಲಿ ಚನ್ನೀಪುರ ಮೊಳೆ ಗ್ರಾಮದ ಮಂಡೆ ಮಾದಶೆಟ್ಟಿ, ಮಕ್ಕಳಾದ ಸಿದ್ದಶೆಟ್ಟಿ, ಮಾದಶೆಟ್ಟಿ ಮತ್ತು ರಾಮಶೆಟ್ಟಿ ಅವರಿಂದ  ಗೋವಿಂದ ಶೆಟ್ಟಿ ಎಂಬುವವರು 3.38 ಗುಂಟೆ ಜಮೀನನ್ನು ಖರೀದಿ ಮಾಡಿದ್ದಾರೆ. ಆದ್ರೆ ಇದೀಗ ಗೋವಿಂದ ಶೆಟ್ಟಿ ಎಂಬ ಹೆಸರಿನ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದು ನೋಂದಣಿ ಮಾಡಿ ಮಾರಾಟ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ದೂರು ದಾಖಲಾಗುತ್ತಿದ್ದಂತೆ ಪರಾರಿ: ಇನ್ನೂ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದವರು ಎಫ್ಐಆರ್ ದಾಖಲಾಗ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಕಳೆದ ಜನವರಿಯಲ್ಲೂ ಕೂಡ ಇಂತಹದ್ದೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಆ ವೇಳೆಯೂ ಕೂಡ ಇದೇ ಗ್ಯಾಂಗ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ ಆರೋಪ ಕೇಳಿಬಂದಿತ್ತು. ಇದೀಗ ಮತ್ತೇ ಅಂತಹದ್ದೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ದಾಖಲೆಗಳ ಪರಿಶೀಲನೆ  ನಡೆಸ್ತಿದ್ದೇವೆ, ಸಂಬಂಧ ಪಟ್ಟ  ಇಲಾಖೆಗಳಿಂದ  ಈಗಾಗ್ಲೇ  ಮಾಹಿತಿ  ಕೇಳಿದ್ದೇವೆ. ದಾಖಲೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸ್ತೀವಿ ಅಂತಾರೆ ಎಸ್ಪಿ ಪದ್ಮಿನಿ ಸಾಹು..

ಒಟ್ನಲ್ಲಿ  ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಪ್ರಕರಣ ಚಾಮರಾಜನಗರದಲ್ಲಿ ತಲ್ಲಣ ಸೃಷ್ಟಿಸಿದೆ. ನಮ್ಮ ಜಮೀನು ಕೂಡ ಮಾರಾಟವಾಗಿದ್ಯಾ? ಅಥವಾ ನಮ್ಮ ಹೆಸ್ರಲ್ಲಿ ಇದ್ಯಾ? ಎಂಬ ಅನುಮಾನಕ್ಕೂ ಎಡೆಮಾಡಿಕೊಟ್ಟಿದ್ದು, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂಬುದೆ ಜಮೀನು ಮಾಲೀಕರ ಒತ್ತಾಯವಾಗಿದೆ..

Latest Videos
Follow Us:
Download App:
  • android
  • ios