Asianet Suvarna News Asianet Suvarna News

ಕನ್ನಡಪ್ರಭದ ಅನುರಾಗ್‌ ಛಾಯಾಚಿತ್ರಕ್ಕೆ 2 ಚಿನ್ನ, 1 ಬೆಳ್ಳಿ ಪದಕ

ವನ್ಯಜೀವಿ ವಿಭಾಗದಲ್ಲಿ ಅನುರಾಗ್‌ ಬಸವರಾಜ್‌ ಅವರು ನಾಗರಹೊಳೆ ಅರಣ್ಯದಲ್ಲಿ ತೆಗೆದಿರುವ ಹುಲಿಯೊಂದು ಕಾಡಂದಿಯನ್ನು ಬೇಟೆಯಾಡಲು ಅಟ್ಟಾಡಿಸುತ್ತಿರುವ ಚಿತ್ರಕ್ಕೆ ಕಂಚಿನ ಪದಕ ಲಭಿಸಿದೆ. ಅನುರಾಗ್‌ ಬಸವರಾಜ್‌ ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿನಂದಿಸಿದೆ.

Kannada Prabha Photographer Anurag Basavaraj's Photos Got 2 Gold 1 Silver Medal grg
Author
First Published Mar 14, 2023, 10:55 AM IST

ಮೈಸೂರು(ಮಾ.14):  ಕನ್ನಡಪ್ರಭ ಛಾಯಾಗ್ರಾಹಕ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಎಸ್‌.ಬಸವಣ್ಣ (ಅನುರಾಗ್‌ ಬಸವರಾಜ್‌) ಅವರು ತೆಗೆದಿರುವ ಚಿರತೆಯೊಂದು ಜನರನ್ನು ಅಟ್ಟಾಡಿಸುತ್ತಿರುವ ಚಿತ್ರಕ್ಕೆ ಪಶ್ಚಿಮ ಬಂಗಾಳದ ಹೆಲೀಸ್‌ ಸರ್ಕ್ಯೂಟ್‌ ಮತ್ತು ಫೋಟೋಗ್ರಫಿ ಸೊಸೈಟಿ ಆಫ್‌ ಅಮೇರಿಕ ಸಂಯುಕ್ತಾಶ್ರಯದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಲಭಿಸಿದೆ.

ಸ್ಪರ್ಧೆಯಲ್ಲಿ ಅಮೆರಿಕ, ಜರ್ಮನಿ, ಉಕ್ರೇನ್‌, ಹಾಂಕಾಂಗ್‌, ಕೆನಡಾ, ಕೊರಿಯಾ, ಜಪಾನ್‌, ಇಟಲಿ ಸೇರಿದಂತೆ 30 ರಾಷ್ಟ್ರಗಳ ಛಾಯಾಗ್ರಾಹಕರು 5 ವಿಭಾಗದಿಂದ 3500ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶಿಸಿದ್ದರು.

ಕನ್ನಡಿಗರಾಗಿ ಜೀವನದಲ್ಲಿ ನೀವು ನೋಡಲೇಬೇಕಾದ ಏಳು ಅದ್ಭುತಗಳಿವು, ಹೇಳಿದ್ದು ನಾವಲ್ಲ ನೀವು!

ವನ್ಯಜೀವಿ ವಿಭಾಗದಲ್ಲಿ ಅನುರಾಗ್‌ ಬಸವರಾಜ್‌ ಅವರು ನಾಗರಹೊಳೆ ಅರಣ್ಯದಲ್ಲಿ ತೆಗೆದಿರುವ ಹುಲಿಯೊಂದು ಕಾಡಂದಿಯನ್ನು ಬೇಟೆಯಾಡಲು ಅಟ್ಟಾಡಿಸುತ್ತಿರುವ ಚಿತ್ರಕ್ಕೆ ಕಂಚಿನ ಪದಕ ಲಭಿಸಿದೆ. ಅನುರಾಗ್‌ ಬಸವರಾಜ್‌ ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿನಂದಿಸಿದೆ.

Follow Us:
Download App:
  • android
  • ios