Asianet Suvarna News Asianet Suvarna News

Vijayapura : ಕನ್ನಡ ಬಹಳ ಶ್ರೀಮಂತ ಭಾಷೆ

ಕನ್ನಡ ಎನ್ನುವುದು ಬಹಳ ಶ್ರೀಮಂತ ಭಾಷೆ. ಅದನ್ನು ಕಟ್ಟುವಂತ ಕೆಲಸ ಸಾಹಿತ್ಯ ಸಮ್ಮೇಳನಗಳಲ್ಲಿ ಆಗದೇ ನಿತ್ಯ ಬಳಕೆ ಮಾಡುವುದರಲ್ಲಿ ಆಗಬೇಕು ಎಂದು ಆಲಮೇಲ ವೀರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ನುಡಿದರು.

Kannada Is Very Richest Language snr
Author
First Published Dec 8, 2022, 5:28 AM IST

 ಸಿಂದಗಿ (ಡಿ.08):  ಕನ್ನಡ ಎನ್ನುವುದು ಬಹಳ ಶ್ರೀಮಂತ ಭಾಷೆ. ಅದನ್ನು ಕಟ್ಟುವಂತ ಕೆಲಸ ಸಾಹಿತ್ಯ ಸಮ್ಮೇಳನಗಳಲ್ಲಿ ಆಗದೇ ನಿತ್ಯ ಬಳಕೆ ಮಾಡುವುದರಲ್ಲಿ ಆಗಬೇಕು ಎಂದು ಆಲಮೇಲ ವೀರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ನುಡಿದರು.

ಪಟ್ಟಣದ ಎಚ್‌.ಜಿ.ಕಾಲೇಜಿನ  (College)  ಸಭಾ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ (Karnataka)  ಕಾರ್ಯ ನಿರತ ಪತ್ರಕರ್ತರ ಧ್ವನಿ, ಅವ್ವ ¶ೌಂಡೇಶನ್‌, ರಾಗರಂಜಿನಿ ಸಂಗೀತ ಕೇಂದ್ರ, ಕರ್ನಾಟಕ ಕಾರ್ಯ ನಿರತ ಪತ್ರರ್ತರ ಸಂಘ, ಶರಣ ಸಾಹಿತ್ಯ ಪರಿಷತ್ತು, ಮಂದಾರ ಪ್ರತಿಷ್ಠಾನ, ಮಕ್ಕಳ ಸಾಹಿತ್ಯ ಪರಿಷತ್‌, ಮಕ್ಕಳ ಕಲ್ಯಾಣ ಪ್ರತಿಷ್ಠಾನ, ಚುಟುಕು ಸಾಹಿತ್ಯ ಪರಿಷತ್‌ ಎಬಿಸಿಡಿ ನೃತ್ಯ ಕೇಂದ್ರ, ಸ್ವರ ತರಂಗ ಪಾಠಶಾಲೆ, ಎ.ಕೆ.ನೃತ್ಯ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡಾಂಭೆ ರಥದ ಭವ್ಯ ಸ್ವಾಗತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜ್ಞಾನಕ್ಕಾಗಿ ಎಲ್ಲ ಭಾಷೆಗಳನ್ನು ಕಲಿಯಿರಿ. ಆದರೆ, ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಕೊಟ್ಟು ಎಲ್ಲ ಭಾಷೆಗಳಲ್ಲಿ ದ್ವಾರ ಬಾಗಿಲು ಕನ್ನಡವಾಗಿರಲಿ ಅನ್ಯ ಭಾಷೆಗಳು ಕಿಟಕಿಗಳಾಗಿ ಜ್ಞಾನದ ಬೆಳಕಿಗೆ ಸಹಾಯಕವಾಗಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮಾತನಾಡಿ, ಕನ್ನಡ ಭಾಷೆ ಅನ್ಯಭಾಷೆಗಳ ವ್ಯಾಮೋಹದಿಂದ ಬಳಕೆಯಲ್ಲಿ ಕಡಿಮೆಯಾಗುತ್ತಿದ್ದು. ಜ್ಞಾನದ ಭಾಷೆಯಾಗಿ ಆಡಳಿತ ಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳ ಮೂಲಕ ಕನ್ನಡದ ಜಾಗೃತಿ ಮೂಡಿಸುತ್ತಿದೆ. ಆದಾಗ್ಯೂ ಬಳಕೆಯಲ್ಲಿ ತಾಯಿ ಭಾಷೆಯನ್ನು ಮರೆಯುತ್ತಿದ್ದೇವೆ. ಅದರ ರಕ್ಷಣೆಗೆ ಇಂದಿನ ಮಕ್ಕಳೆ ಜೀವಂತ ದೇವರುಗಳು, ಶಕ್ತಿದೇವತೆಗಳು ಕಂಕಣಬದ್ಧವಾಗಿ ನಿಲ್ಲಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಅಶೋಕ ಶಾಬಾದಿ, ಕನ್ನಡ ರಥದ ಉಸ್ತುವರಿ ನಬೀಸಾಬ್‌ ಕುಷ್ಠಗಿ, ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಮಾತನಾಡಿದರು. ಪಿಎಸೈ ಸೋಮೇಶ ಗೆಜ್ಜಿ, ಅಶೋಕ ಗಾಯಕವಾಡ, ಮಹಾಂತೇಶ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಸದಸ್ಯ ಶಾಂತವೀರ ಬಿರಾದಾರ, ಅಶೋಕ ಅಲ್ಲಾಪುರ, ಅಭಿಷೇಕ ಚಕ್ರವರ್ತಿ, ಎಂ.ಎ.ಖತೀಬ, ಆನಂದ ಶಾಬಾದಿ, ಶಿಲ್ಪಾ ಕುದರಗೊಂಡ, ಶಾರದಾ ಮಂಗಳೂರ, ಎಸ್‌.ಬಿ.ಚಿಗರಿ, ಶೈಲಜಾ ಸ್ಥಾವರಮಠ, ಜಯಶ್ರೀ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.

ಎಚ್‌.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್‌.ಹೆಗ್ಗಣದೊಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮತನಾಡಿದರು. ಪ್ರೊ.ಸಿದ್ದಲಿಂಗ ಕಿಣಗಿ ನಿರೂಪಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ರಾಜಶೇಖರ ಕೂಚಬಾಳ ವಂದಿಸಿದರು.

ಭವ್ಯ ಮೆರವಣಿಗೆ ಸ್ವಾಗತಿಸಿದ ಡಾ.ಶಾಂತವೀರ, ಅಶೋಕ ಮನಗೂಳಿ

ಸಿಂದಗಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2020-23ರ ಜ.6,7 ಮತ್ತು 8 ರಂದು ಹಾವೇರಿಯಲ್ಲಿ ನಡೆಯಲಿರುವ ಸಮ್ಮೇಳನದ ಸಿಂದಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ಜಾಥಾಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಕನ್ನಡಾಂಭೆ ವೃತ್ತದಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಮಾಜಿ ಶಾಸಕ ಅಶೋಕ ಶಾಬಾದಿ ಮೆರವಣಿಗೆಗೆ ಭವ್ಯ ಸ್ವಾಗತಿಸಿ, ಚಾಲನೆ ನೀಡಿದರು. ನಂತರ ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ ಹೊರಟ ಕನ್ನಡ ರಥದ ಮೆರವಣಿಗೆಯು ವಿವಿಧ ಕಲಾ ತಂಡಗಳು, ಪಟ್ಟಣದ ವಿವಿದ ಶಾಲೆಗಳ ಮಕ್ಕಳು ಪಾಲ್ಗೊಂಡು ಎಚ್‌.ಜಿ.ಕಾಲೇಜವರೆಗೆ ಸಾಗಿಬಂತು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಅಶೋಕ ಮನಗೂಳಿ, ಕಸಾಪ ಪದಾಧಿಕಾರಿಗಳಾದ ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ರಮೇಶ ಪೂಜಾರಿ, ಶಾರದಾ ಮಂಗಳೂರ, ಪಂಡಿತ ಯಂಪೂರೆ, ಖಾದರ ವಾಲಿಕಾರ, ಶಿವು ಬಡಾನವರ, ಶೈಲಜಾ ಸ್ಥಾವರಮಠ, ಎನ್‌.ಎಂ.ಚಪ್ಪರಬಂದ, ಶಾಂತೂ ರಾಣಾಗೋಳ, ಭೀಮಣ್ಣ ಹೆರೂರ, ಅಶೋಕ ಸುಲ್ಪಿ ಸೇರಿದಂತೆ ಅನೇಕರು ಇದ್ದರು.

Follow Us:
Download App:
  • android
  • ios