ಕಲಬುರಗಿ ಪ್ರತಿಭಟನಾ ಸ್ಥಳದಲ್ಲಿಯೇ ಕುಸಿದುಬಿದ್ದ ಸಂಸದ ಉಮೇಶ್ ಜಾಧವ್; ಆಸ್ಪತ್ರೆಗೆ ಶಿಫ್ಟ್

ಕಲಬುರಗಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಸದ ಉಮೇಶ್ ಜಾಧವ್ ತೀವ್ರ ನೂಕಾಟ-ತಳ್ಳಾಟಕ್ಕೆ ಸಿಲುಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

Kalaburagi MP Umesh jadhav collapse in middle of protest and police shifted hospital sat

ಕಲಬುರಗಿ (ಮೇ 01): ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ  ಸಂಸದ ಉಮೇಶ್ ಜಾಧವ್ ತೀವ್ರ ನೂಕಾಟ-ತಳ್ಳಾಟಕ್ಕೆ ಸಿಲುಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಟನೆಯಲ್ಲಿ ಕುಸಿದ ಉಮೇಶ ಜಾಧವ್. ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಬಂದಾಗ ಅವರ ಮನೆ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು. ಇದನ್ನು ಖಂಡಿಸಿ ವೀರಶೈವ ಸಮಾಜದವರಿಂದ ಕಲಬುರಗಿ ನಗರದ ಕೋಟನೂರ್ ಏಕಾಏಕಿ ಬೃಹತ್‌ ಮಟ್ಟದಲ್ಲಿ ಜನ ಸೇರಿಕೊಂಡು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಈ ಪ್ರತಿಭಟನಾ ಸ್ಥಳಕ್ಕೆ ಸಂಸದ ಉಮೇಶ್ ಜಾಧವ್ ತೆರಳಿದ್ದರು.

ಬಡವರು ಹೆಚ್ಚು ಮಕ್ಕಳ ಹೆರುತ್ತಾರೆ, ಆದ್ರೆ ಮುಸ್ಲಿಮರನ್ನೇ ಗುರಿ ಮಾಡೋದು ಏಕೆ : ಖರ್ಗೆ

ಇನ್ನು ಸಂಸದ ಉಮೇಶ್ ಜಾಧವ್ ಆಗಮಿಸುತ್ತಿದ್ದಂತೆ ತೀವ್ರ ಆಕ್ರೋಶಭರಿತಗೊಂಡ ಪ್ರತಿಭಟನಾಕಾರರಿಂದ ನೂಕಾಟ ತಳ್ಳಾಟ ಶುರುವಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದರೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಇಕ್ಕಟ್ಟಿನ ಸ್ಥಳದಲ್ಲಿ ಸಿಲುಕಿದ ಸಂಸದ ಉಮೇಶ್ ಜಾಧವ್ ಅವರಿಗೆ ರಕ್ತದೊತ್ತಡ ಹೆಚ್ಚಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಸುಡು ಬಿಸಿಲಿನಲ್ಲಿಯೇ ಎಚ್ಚರತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಪೊಲೀಸರು ರಕ್ಷಣೆ ಮಾಡಿ ಹತ್ತಿರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಸಂಸದ ಉಮೇಶ್ ಜಾಧವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರವೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮುಂದುವರೆಸಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿರುವುದನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

ಎಲ್ಲ ಕಾಮುಕರು ಯಾಕೆ ನಿನ್ನ ಪಾರ್ಟಿಯಲ್ಲಿ ಸೇರುತ್ತಿದ್ದಾರೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ಏಕ ವಚನದಲ್ಲೇ ವಾಗ್ದಾಳಿ

ಪ್ರತಿಭಟನಾ ಸ್ಥಳಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಂಸದ ಡಾ.ಉಮೇಶ ಜಾಧವ್ ಅವರು, ದೇಶದಲ್ಲಿ ಮೋದಿ‌ ಸತ್ತರೆ ಬಿಜೆಪಿಯಲ್ಲಿ ಪ್ರಧಾನಿ ಆಗುವವರು ಯಾರಿದ್ದಾರೆ? ಎನ್ನುವ ರಾಜು ಕಾಗೆ‌ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲೋದಿಲ್ಲ. ನಮ್ಮಲ್ಲಿ ಬಹಳ ಜನ ಪ್ರಧಾನಮಂತ್ರಿ ಅಭ್ಯರ್ಥಿಗಳು ಇದ್ದಾರೆ. ನಮ್ಮಲ್ಲಿ ಆ ಟೈಮ್‌ ಬಂದಾಗ ಆಕ್ಷನ್ ತೆಗೆದುಕೊಳ್ಳುತ್ತಾರೆ. ಅವರಲ್ಲಿ ಪಿಎಂ ಅಭ್ಯರ್ಥಿ ಇದ್ದಾರಾ? ಇಲ್ವಾ? ನೋಡಿಕೊಳ್ಳಲಿ ಎಂದು ಕಿಡಿಕಾರಿದ್ದರು.

Latest Videos
Follow Us:
Download App:
  • android
  • ios