ಕೊರೋನಾಗೆ ಬಲಿಯಾದ ವೃದ್ಧನ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಬೆಚ್ಚಿ ಬೀಳ್ತೀರಾ!

ಕೊರೋನಾ ವೈರಸ್‌ಗೆ ಮೃತಪಟ್ಟ ವೃದ್ಧನ ಟ್ರಾವೆಲ್ ಹಿಸ್ಟರಿ ಬಿಡುಗಡೆಗೊಳಿಸಿದ ಆರೋಗ್ಯ ಇಲಾಖೆ| ವೃದ್ಧನ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ| 

Kalaburagi Covid 19 Death Health Dept Releases Travel History of the Dead

ಕಲಬುರಗಿ(ಮಾ.16): ಕೊರೋನಾ ವೈರಸ್‌ನಿಂದ 76 ವರ್ಷದ ವೃದ್ಧ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಅಧಿಕೃತ ಟ್ರಾವೆಲ್ ಹಿಸ್ಟರಿಯನ್ನ ಆರೋಗ್ಯ ಇಲಾಖೆ ಬಹಿರಂಗಗೊಳಿಸಿದೆ. 

ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು!

ಮೃತ ವೃದ್ಧ ಫೆಬ್ರವರಿ 29 ರಂದು 12:30 ಕ್ಕೆ ಸೌದಿಯಿಂದ ತೆಲಂಗಾಣ ರಾಜಧಾನಿ ಹೈದ್ರಾಬಾದ್‌ಗೆ ಬಂದಿಳಿದಿದ್ದ. ನಗರದ ಪಟೆಂಚರ್ ಬಳಿ‌ ಚಹಾ ಕುಡಿದಿದ್ದರು. ಬಳಿಕ‌ ಕಾರ್‌ನಲ್ಲಿ ಕಲಬುರಗಿ ಕಡೆಗೆ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯದಲ್ಲಿ ಮಧ್ಯಾಹ್ನ 3:30 ರಿಂದ 4:30 ರ ವರೆಗೂ ಕಾರ್ ನಿಲ್ಲಿಸಿ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡಾಭಾದಲ್ಲಿ ಊಟ ಮಾಡಿದ್ದರು. 

Kalaburagi Covid 19 Death Health Dept Releases Travel History of the Dead

ಡಾಭಾದಲ್ಲಿ ನಾನ್ ವೆಜ್ ಊಟ ಮಾಡಿ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳೆಸಿದ ವೃದ್ಧರು. ಬಳಿಕ ಸಂಜೆ ಐದು ಗಂಟೆಗೆ ಮನೆ ತಲುಪಿದ್ದರು. ಫೆಬ್ರವರಿ 29 ರಿಂದ ಮಾರ್ಚ್ 6 ವರೆಗೆ ಕಲಬಬುರಗಿಯ ನಿವಾಸದಲ್ಲೇ ವಾಸವಿದ್ದರು. ಮಾರ್ಚ್ 6 ರಂದು ಮೃತ ವೃದ್ಧನಿಗೆ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ವೃದ್ಧನ ಫ್ಯಾಮಿಲಿ ಡಾಕ್ಟರ್ ಮನೆಗೆ ಬಂದು ತಪಾಸಣೆ ಮಾಡಿ ಹೋಗಿದ್ದರು.

ಮಾರ್ಚ್ 9 ರ ವರೆಗೂ ವೃದ್ಧನಿಗೆ ಮನೆಯಲ್ಲೇ ಫ್ಯಾಮಿಲಿ ಡಾಕ್ಟರ್ ತಪಾಸಣೆ ಮಾಡಿದ್ದರು. ಜ್ವರ ಕೆಮ್ಮು ನೆಗಡಿ ಸ್ವಲ್ಪ ಕಡಿಮೆಯಾದ ಹಿನ್ನಲೆಯಲ್ಲಿ ಫ್ಯಾಮಿಲಿ‌ ಡಾಕ್ಟರ್ ಸೂಚನೆ ಮೇರೆಗೆ ಮಾರ್ಚ್ 9 ರಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಮಾರ್ಚ್ 9 ರಂದು ರಾತ್ರಿ 10 ಗಂಟೆಗೆ ವೃದ್ಧನನ್ನ ಡಿಸ್ ಚಾರ್ಜ್ ಮಾಡಿಸಿಕೊಂಡು ನೇರವಾಗಿ ಹೈದ್ರಾಬಾದ್‌ಗೆ ತೆರಳಿದ್ದರು. ಮಾರ್ಚ್ ‌10 ರಂದು ಹೈದ್ರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಕೇರ್ ಆಸ್ಪತ್ರೆಯಲ್ಲಿ‌ ದಾಖಲಿಸಲಾಗಿತ್ತು. 

Breaking: ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಕೇಸ್ ಪತ್ತೆ

ಹೈದ್ರಾಬಾದ್ ಕೇರ್ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೆ‌ ವೃದ್ಧನ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಪರಿಸ್ಥಿತಿ ತೀರಾ ಹದಗೆಟ್ಟ ಹಿನ್ನಲೆಯಲ್ಲಿ ವೃದ್ಧನನ್ನ ಕಲಬುರಗಿಗೆ ವಾಪಾಸ್ ಕರೆದುಕೊಂಡು ಬರಲು ನಿರ್ಧರಿಸಲಾಗಿತ್ತು. ಮಾರ್ಚ್ 10 ರಂದು ಸಂಜೆ ಹೈದ್ರಾಬಾದ್‌ನ‌ ಕೇರ್ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ವೃದ್ಧನನ್ನ ಕಲಬುರಗಿಗೆ ಕರೆದುಕೊಂಡು ಬರಲಾಗಿತ್ತು.

ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಬರುವಾಗಲೇ ವೃದ್ಧ ಸಾವನ್ನಪ್ಪಿದ್ದರು. ಬಳಿಕ‌ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಈ ವೇಳೆ ಪರೀಕ್ಷಿಸಿದ ಜಿಮ್ಸ್ ಆಸ್ಪತ್ರೆಯ ವೈದ್ಯರು ವೃದ್ಧ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಿದ್ದರು. 

ಕಲಬುರಗಿಯಲ್ಲಿ ಮತ್ತೊಬ್ಬರಿಗೆ ಕೊರೋನಾ ವೈರಸ್ ದೃಢ: 133 ಸೆಕ್ಷನ್‌ ಜಾರಿ

ಬಳಿಕ ಮಾರ್ಚ್ 11 ರಂದು ವೃದ್ಧನ ಅಂತ್ಯಕ್ರಿಯೆ ನಡೆಸಲಾಗಿತ್ತು. ಮಾರ್ಚ್ 12 ರಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೆಲಂಗಾಣ ಸರ್ಕಾರಕ್ಕೆ  ಕ್ರಾಸ್ ನೋಟಿಫಿಕೆಷನ್ ನೀಡಿತ್ತು. ವೃದ್ಧನ ಜೊತೆ ಸಂಪರ್ಕ ಹೊಂದಿದ್ದ 71 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ವೃದ್ಧನ ಕುಟುಂಬ, ವೃದ್ಧ ವಾಸಿಸುತ್ತಿದ್ದ ಪ್ರದೇಶ, ಅಂತ್ಯಕ್ರಿಯೆಯಲ್ಲಿ ಭಾಗಿಯಾದವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ. 

ಇಷ್ಟೆಲ್ಲಾ ವೃದ್ಧನ ಹಿಸ್ಟರಿ ಬಂದ ಮೇಲೂ ಆರೋಗ್ಯ ಇಲಾಖೆ ವೃದ್ಧ ಊಟ ಮಾಡಿದ್ದ ಡಾಬಾದ ಕೆಲಸಗಾರರ ಸಂಪರ್ಕವೇ ಮಾಡಲಿಲ್ವಾ ಎಂಬ ಪ್ರಶ್ನೆಯೊಂದು ಎದ್ದಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯಲ್ಲಿ ಡಾಭಾದ ಕೆಲಸ ಮಾಡಿರುವವರ ಬಗ್ಗೆ ತಪಾಸಣೆ ನಡೆಸಿರುವ ಬಗ್ಗೆ ಯಾವುದೇ ಉಲ್ಲೆಖವಿಲ್ಲ. ಹಾಗಾದ್ರೆ ಡಾಬಾದಲ್ಲಿ ವೃದ್ಧನಿಗೆ ಊಟ ಸಪ್ಲೈ ಮಾಡಿದ ವೇಟರ್, ಬಿಲ್‌ ಕೌಂಟರ್‌ನಲ್ಲಿ ಬಿಲ್ ‌ಪಡೆದವರನ್ನ ಸಂಪರ್ಕ ಮಾಡಲಿಲ್ಲವಾ? ಎಂಬ ಪ್ರಶ್ನೆಗಳು ಕಾಡುತ್ತಿವೆ. ವೃದ್ಧನ ಸಾವಿನ ಬಳಿಕ ಬೆಚ್ಚಿ ಬೀಳುವ ಒಂದೊಂದೆ ಅಂಶ ಬಯಲಿ ಬರುತ್ತಿವೆ. 
 

Latest Videos
Follow Us:
Download App:
  • android
  • ios