ಕಲಬುರಗಿ, (ಮಾ.15): ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ವೈರಸ್​ ಸೋಂಕು ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಕೊರೋನಾದಿಂದ ಬಳಲುತ್ತಿದ್ದ 76 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಇಂದು (ಭಾನುವಾರ) ಅವರ ಕುಟುಂಬದ ಮತ್ತೊಬ್ಬ ಸದಸ್ಯರಲ್ಲಿಯೇ ಕೊರೋನಾ ಕಾಣಿಸಿಕೊಂಡಿದೆ. 

ಕೊರೋನಾಗೆ ವೃದ್ಧ ಬಲಿ: ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ?

ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮೂಲಕ ಖಚಿತಪಡಿಸಿದ್ದಾರೆ. ಇನ್ನು ಮೃತಪಟ್ಟ ವೃದ್ಧನಿಗೆ ಕೊರೊನಾ ಸೋಂಕು ತಗುಲಿತ್ತು ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅವರ ಕುಟುಂಬಸ್ಥರನ್ನ ತಪಾಸಣೆಗೆ ಒಳಪಡಿಸಿದ್ದರು. 

ಮೃತ ವ್ಯಕ್ತಿಯ ಮನೆಯ ನಾಲ್ವರು ಸದಸ್ಯರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು.  ತಪಾಸಣೆಗೆ ಒಳಗಾಗಿದ್ದ ನಾಲ್ವರು ಸದಸ್ಯರ ಪೈಕಿಯಲ್ಲಿ ಮೂವರಿಗೆ ಕೊರೋನಾ ಇಲ್ಲ ಎಂದು ಶನಿವಾರ ಬಂದ ವರದಿಯಲ್ಲಿ ಸಾಬೀತಾಗಿತ್ತು. 

ಮಹಾಮಾರಿ ಕರೋನಾಗೆ ಕರ್ನಾಟಕದಲ್ಲೇ ಮೊದಲ ಬಲಿ..ಎಚ್ಚರ ಎಚ್ಚರ

ಅಲ್ಲದೇ ಒಂದು ರಿಪೋರ್ಟ್ ಬರೋದು ಬಾಕಿ ಇತ್ತು. ಅದು ಭಾನುವಾರ ರಿಪೋರ್ಟ್ ಬಂದಿದ್ದು, ಮೃತ ವೃದ್ಧನ ಮಗಳಿಗೆ ಕೊರೋನಾ ಪಾಜಿಟೀವ್ ಇರುವುದು ​ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7ಕ್ಕೆ ಏರಿಕೆಯಾದಂತಾಗಿದ್ದು, ಕಲಬುರಗಿ ಜನರಲ್ಲಿ ಇದು ದಿನದಿಂದ ದಿನಕ್ಕೆ ಆತಂಕಕ್ಕೆ ಕಾರಣವಾಗಿದೆ.