ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಾಧೀಶರಾದ ಬಿ.ಕೆ ಗಿರೀಶ್
ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಾಧೀಶರಾದ ಬಿ.ಕೆ ಗಿರೀಶ್. ಆಸ್ಪತ್ರೆಯ ಅವ್ಯವಸ್ಥೆ ಕಂಡ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ನ್ಯಾಯಧೀಶ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.19) ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಸಾಕು ಮೂಗು ಮುರಿಯುವವರೇ ಹೆಚ್ಚಾಗಿದೆ. ಯಾಕಪ್ಪ ಅಂದ್ರೆ ಅಲ್ಲಿಗೆ ಹೋದಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಜೊತೆಗೆ ಅಲ್ಲಿ ಇರುವ ಸಿಬ್ಬಂದಿ ಕೂಡ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸದೇ ಇರುವ ಕಾರಣ ಸರ್ಕಾರಿ ಆಸ್ಪತ್ರೆ ಅಂದ್ರೆ ಯಾರಿಗೂ ಬೇಡ. ಅದ್ರಲ್ಲಂತೂ ಅಧಿಕಾರಿಗಳು ಯಾರು ಬಂದ್ರೇನು, ಬಿಟ್ರೇನು ಎಂಬಂತೆ ಪರಿಸ್ಥಿತಿ ಇದೆ.
ನಿತ್ಯ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿ ಆಗ್ತಿದ್ದ ಸರ್ಕಾರಿ ಆಸ್ಪತ್ರೆ(Govt Hospital)ಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಚಿತ್ರದುರ್ಗದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ನ್ಯಾಯಾಧೀಶರಾದ ಬಿ.ಕೆ ಗಿರೀಶ್(B.K.Girish) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದ್ರಲ್ಲಿ ಇಂದು ಚಿತ್ರದುರ್ಗ(Chitradurga) ಜಿಲ್ಲೆ ಚಳ್ಳಕೆರೆ(Challakere) ಪಟ್ಟಣದಲ್ಲಿರುವ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡುವ ಮೂಲಕ ಅಲ್ಲಿನ ಸಿಬ್ಬಂದಿಗೆ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಬಡರೋಗಿಗಳ ರಕ್ತಹೀರುವ ಕೇಂದ್ರವಾದ ಚಿತ್ರದುರ್ಗ ಜಿಲ್ಲಾಸ್ಪತ್ರೆ!
ಎಂದಿನಂತೆ ನಿತ್ಯ ಅವ್ಯವಸ್ಥೆಯ ಆಗರವಾಗಿರುವ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯೇ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ಕಂಡು ಬಂದಿರೋದ್ರಲ್ಲಿ ಯಾವುದೇ ಅಚ್ಚರಿ ಇಲ್ಲ ಬಿಡಿ. ಇನ್ನೂ ಆಸ್ಪತ್ರೆಯಲ್ಲಿ ಅವ್ಯವಸ್ಥೆಯನ್ನು ಕಂಡ ನ್ಯಾಯಾಧೀಶರು ಸಿಬ್ಬಂದಿಗೆ ಸಿಕ್ಕಾಪಟ್ಟೆ ತರಾಟೆ ತೆಗೆದುಕೊಂಡಿದ್ದಾರೆ. "ನಿತ್ಯ ನೀವೆಲ್ಲಾ ಅಸ್ಪತ್ರೆಗೆ ಬಂದು ಏನು ಮಾಡ್ತೀರಿ? ಯಾಕೆ ಈ ರೀತಿ ಅವ್ಯವಸ್ಥೆ ಮಾಡಿಕೊಂಡಿದ್ದೀರಿ ಕಾರಣ ಕೊಡಿ" ಎಂದೆಲ್ಲಾ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಅಲ್ಲದೇ ಬೆಡ್ ಮೇಲೆ ಇದ್ದ ರೋಗಿಯ ಹೆಸರನ್ನು ಸಿಬ್ಬಂದಿಯೋರ್ವರಿಗೆ ಕೇಳಿದಾಗ ಅವರು ಉತ್ತರಿಸದೇ ಇದ್ದದನ್ನು ಕಂಡು ನ್ಯಾಯಾಧೀಶರು ಕೆಂಡಾಮಂಡಲರಾಗಿದ್ದಾರೆ. ವಾರ್ಡ್ ನಲ್ಲಿ ರೋಗಿಯ ಹೆಸರು ಸಹ ತಿಳಿದುಕೊಳ್ಳದೇ ನೀವು ಇನ್ನೇನು ಕೆಲಸ ಮಾಡ್ತೀರಿ. ಸರ್ಕಾರಿ ಕೊಟ್ಟ ಸಂಬಳಕ್ಕಾಗದ್ರು ಸರಿಯಾಗಿ ಕೆಲಸ ಮಾಡಿ, ಈ ರೀತಿ ನಿರ್ಲಕ್ಷ್ಯ ತೋರಿದರೆ ಮುಂದೆ ತೊಂದರೆ ಆಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ದ್ಯಾಮವ್ವನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಕರೆಂಟ್ ಬಿಲ್ ಶಾಕ್!
ಈ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿ ಆಗಬೇಕು. ಜೊತೆಗೆ ಎಲ್ಲಾ ರೋಗೊಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದಾರೆ. ಇದರೊಟ್ಟಿಗೆ ಮುಖ್ಯವಾಗಿ ಆಸ್ಪತ್ರೆಯ ಸ್ವಚ್ಚತೆ ಕಾಪಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ನಂತರ ಜನೌಷಧಿ ಕೇಂದ್ರೆಲ್ಲಿ ಬಿಲ್ ನೀಡದಿರುವುದರ ಬಗ್ಗೆ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ನೋಟೀಸ್ ನೀಡಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಇಷ್ಟೆಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಮಾತ್ರ ಬದಲಾಗಲ್ಲ. ಇನ್ನಾದ್ರು ಅಧಿಕಾರಿಗಳು ಹಾಗು ಸಿಬ್ಬಂದಿಗಳು ನ್ಯಾಯಾಧೀಶರ ಭೇಟಿ ನಂತರವಾದ್ರು ಆಸ್ಪತ್ರೆಯ ಸ್ವಚ್ಚತೆಯನ್ನು ಕಾಪಾಡಿಕೊಂಡು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಿ ಎಂಬುದು ಎಲ್ಲರ ಆಶಯ...