ಕೋಲಾರ(ಡಿ.14): ಸರ್ಕಾರ ಸುಭದ್ರವಾಗುತ್ತಿದಂತೆ ಅಲರ್ಟ್ ಆದ ಅಬಕಾರಿ ಸಚಿವ ಹೆಚ್.ನಾಗೇಶ್ ಅವರು ಮೂರು ತಿಂಗಳ‌ ನಂತರ ತಮ್ಮ ಕಚೇರಿಗೆ ಆಗಮಿಸಿದ್ದಾರೆ. ಉಪಚುನಾವಣೆ ಸಂದರ್ಭ ರಾಜಕೀಯ ಮುಖಂಡರು ಮತಬೇಟೆಯಲ್ಲಿ ತಲ್ಲೀನರಾಗಿದ್ದು, ಆಯಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದವು.

ಮೂರು ತಿಂಗಳ ನಂತರ ‌ಕೋಲಾರ ಜಿಲ್ಲಾ‌ ಉಸ್ತುವಾರಿ ಸಚಿವರ ಕಚೇರಿಗೆ ಎಚ್‌. ನಾಗೇಶ್ ಬಂದಿದ್ದಾರೆ. ಮೂರು ತಿಂಗಳ‌ ನಂತರ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಮ್ಮ ಕಚೇರಿಗೆ ಭೇಟಿ ನೀಡಿದ್ದಾರೆ.

ಬೈ ಎಲೆಕ್ಷನ್‌: 'ಪೊಲೀಸರಿಂದ ಹಣ ವಸೂಲಿ ಮಾಡಿ ಮತದಾರರಿಗೆ ಹಂಚಿದ್ರಾ ಸುಧಾಕರ್'..?

ಕಚೇರಿಯಲ್ಲಿ ಪೂಜೆ‌ ನಡೆಸಿ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ್ದಾರೆ. ಕಳೆದ‌ ಐದಾರು ವರ್ಷಗಳಿಂದ ಉಸ್ತುವಾರಿ ಸಚಿವರ ಕಚೇರಿ ಬೀಗ ಹಾಕಲಾಗಿತ್ತು. ಕೋಲಾರದ ಹಳೇ‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯೂ ಇದೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಚುನಾವಣೆ ಕಾವು