ಬೈ ಎಲೆಕ್ಷನ್: 'ಪೊಲೀಸರಿಂದ ಹಣ ವಸೂಲಿ ಮಾಡಿ ಮತದಾರರಿಗೆ ಹಂಚಿದ್ರಾ ಸುಧಾಕರ್'..?
ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಅವರು ಕೋಟಿ ಕೋಟಿ ಹಣ ಹಂಚಿದ್ದಾರೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ರಾಧಾಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ(ಡಿ.14): ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಅವರು ಕೋಟಿ ಕೋಟಿ ಹಣ ಹಂಚಿದ್ದಾರೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ರಾಧಾಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಾಜಿತ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ, ಶಾಸಕ ಡಾ. ಕೆ ಸುಧಾಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುಧಾಕರ್ ಒಂದು ಓಟಿಗೆ ಎರಡು ಮೂರು ಸಾವಿರ ಹಣ ಹಂಚಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 45-50 ಕೋಟಿ ಹಣ ಹಂಚಿಕೆ ಆಗಿದೆ ಎಂದು ರಾಧಾ ಕೃಷ್ಣ ಆರೋಪಿಸಿದ್ದಾರೆ.
ಹುಕ್ಕೇರಿ: ಗಲಾಟೆ ಮಾಡಿದ ವಿದ್ಯಾರ್ಥಿಗಳಿಗೆ ಯದ್ವಾತದ್ವಾ ಥಳಿಸಿದ ಶಿಕ್ಷಕಿ
ಗಣಿಗಾರಿಕೆ, ತಹಶಿಲ್ದಾರ್, ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿ ಮಾಡಿ ಸುಧಾಕರ್ ಚುನಾವಣೆಗೆ ಹಂಚಿದ್ದಾರೆ. ಒಬ್ಬರ ಹೊಟ್ಟೆ ಮೇಲೆ ಹೊಡೆದು ನಾವು ಚುನಾವಣೆ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರಿಗೆ 5-10 ಲಕ್ಷ ಹಣ ಕೊಡುತ್ತೇವೆಂದು ಆಮಿಷ ಒಡ್ಡಲಾಗಿದೆ ಎಂದಿದ್ದಾರೆ.
ಜೆಡಿಎಸ್ ಮುಖಂಡರೇ ನಮ್ಮ ಪರವಾಗಿ ಕೆಲಸ ಮಾಡಲಿಲ್ಲ. ಹಣದ ಆಮಿಷ ಒಡ್ಡಿ ಚುನಾವಣೆಯಿಂದ ದೂರ ಉಳಿಸಲಾಯಿತು. ಚಿಕ್ಕಬಳ್ಳಾಪುರದಲ್ಲಿ ಮನೆ ಮಾಡಿ, ತಳಮಟ್ಟದಿಂದ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಗೆದ್ದವರಿಗೆ ಅಭಿನಂದನೆ, ತಾಲೂಕಿನ ಅಭಿವೃದ್ಧಿ ಗಮನ ಹರಿಸಲಿ ಎಂದಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಚುನಾವಣೆ ಕಾವು