ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮೈತ್ರಿ ಮುಂದುರಿಯುತ್ತಾ..? ಯಾರಾಗ್ತಾರೆ ಮೇಯರ್..? ಈ ಬಗ್ಗೆ ಸಾರಾ ಮಹೇಶ್ ಮೈಸೂರಿನಲ್ಲಿ ಮಾತನಾಡಿದ್ದಾರೆ. ಮೈತ್ರಿ ಬಗ್ಗೆ ಏನು ಹೇಳಿದ್ದಾರೆ..? ಇಲ್ಲಿ ಓದಿ.

ಮೈಸೂರು(ಜ.15): ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜೆಡಿಎಸ್ ನಗರಾಧ್ಯಕ್ಷ ಚಲುವೇಗೌಡ, ಕೆ.ಟಿ.ಶ್ರೀಕಂಟೇಗೌಡ, ಪ್ರೊ.ರಂಗಪ್ಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮ್ಮದ್ ಭಾಗಿಯಾಗಿದ್ದಾರೆ.

ಕಳೆದ ಬಾರಿ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೆವು. ನಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾದ ಸಿದ್ದರಾಮಯ್ಯನವರ ಸಲಹೆ ಪಡೆದು ಮೈಸೂರು ಪಾಲಿಕೆಯಲ್ಲಿ ಒಟ್ಟಿಗೆ ಹೆಜ್ಜೆ ಇಟ್ಟಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ.

'ಅವರಷ್ಟು ಅನುಭವ ನನಗಿಲ್ಲ': ಜಿಟಿಡಿ ಬಗ್ಗೆ ಸಾರಾ ಸಾಫ್ಟ್‌ ಕಾರ್ನರ್..!

ಈಗಾಗಲೇ ಒಂದು ವರ್ಷದ ಅವಧಿ ಮುಗಿದಿದೆ. ಮೇಯರ್ ಪುಷ್ಪಲತಾ ಜಗನ್ನಾಥ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿಯೂ ಕೂಡಾ ನಾವು ಮೈತ್ರಿ ಮುಂದುವರೆಸುತ್ತಿದ್ದೇವೆ. ಜೆಡಿಎಸ್‌ಗೆ ಮೇಯರ್ ಹಾಗೂ ಕಾಂಗ್ರೆಸ್‌ಗೆ ಉಪಮೇಯರ್ ನೀಡುವ ಕುರಿತಾಗಿ ಮಾತುಕತೆ ನಡೆದಿದೆ. 
ಒಪ್ಪಂದದಂತೆ ಮೊದಲ ಅವಧಿ ಕಾಂಗ್ರೆಸ್‌ಗೆ ಹಾಗೂ ಎರಡನೇ ಅವಧಿ ಜೆಡಿಎಸ್‌ಗೆ, ಮೂರನೇ ಅವಧಿ ಮತ್ತೆ ಕಾಂಗ್ರೆಸ್ ಹಾಗೂ ಉಳಿದೆರಡು ಅವಧಿ ಜೆಡಿಎಸ್‌ಗೆ ಮೇಯರ್ ಸ್ಥಾನ ಸಿಗಲಿದೆ ಎಂದಿದ್ದಾರೆ.

'ಬೇಳೆ, ಅಕ್ಕಿ, ಕಾಳುಗಳಲ್ಲಿ ಹುಳ ಇದ್ದರೆ ವಾಪಸ್‌ ಕಳುಹಿಸಿ'..!

ಈಗ ಮೊದಲ ಅವಧಿ ಮುಕ್ತಾಯವಾಗಿದೆ. ಎರಡನೇ ಅವಧಿಗೆ ಜೆಡಿಎಸ್‌ಗೆ ಮೇಯರ್ ಸ್ಥಾನ ಸಿಗಲಿದೆ. ಇದಕ್ಕೆ ಎರಡೂ ಪಕ್ಷಗಳ ಸದಸ್ಯರು ಹಾಗೂ ಮುಖಂಡರು ಒಪ್ಪಿಗೆ ನೀಡಿದ್ದಾರೆ. ಸ್ಥಳೀಯ ಶಾಸಕರು, ಮುಖಂಡರು ಸಲಹೆ ಪಡೆದು ಮೇಯರ್ ಆಯ್ಕೆ ಮಾಡಲಾಗುತ್ತದೆ. ನಮ್ಮ ಪಕ್ಷದ ನಾಯಕರಾದ ಜಿ.ಟಿ.ದೇವೇಗೌಡರ ಸಲಹೆ ಕೂಡಾ ಪಡೆದಿದ್ದೇವೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

ಇನೋವಾ ಕಾರಲ್ಲಿ ಬಂದವ್ರು ATM ಮಷೀನ್ ಮುರಿದು ಹಣ ದೋಚಿದ್ರು..!