ಮೈಸೂರು(ಜ.15): ಒಂದು ಮನೆಯಲ್ಲಿರುವ ಅಣ್ಣ ತಮ್ಮಂದಿರ ಮಧ್ಯೆಯೇ‌ ಭಿನ್ನಾಭಿಪ್ರಾಯ ಇರುತ್ತದೆ. ಒಂದು ಪಕ್ಷ ಅಂದಮೇಲೆ ಭಿನ್ನಾಭಿಪ್ರಾಯ ಇರಲ್ವಾ..? ಎಂದು ಸಾ.ರಾ. ಮಹೇಶ್ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಟಿ ದೇವೇಗೌಡರಷ್ಟು ರಾಜಕೀಯ ಅನುಭವ ನನಗಿಲ್ಲ. ಅವರ ಅನುಭವವನ್ನು ಪಡೆದು, ಅವರು ನೀಡುವ ಆದೇಶವನ್ನು ಪಾಲಿಸುತ್ತೇವೆ. ಪ್ರತಿಯೊಂದು ಪಕ್ಷದಲ್ಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ನಮ್ಮಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಎಲ್ಲರೂ ಒಂದಾಗಿ ಮುಂದುವರಿಯುತ್ತೇವೆ ಎನ್ನುವ ಮೂಲಕ ಶಾಸಕ ಜಿಟಿ.ದೇವೇಗೌಡ ಪರ ಸಾಫ್ಟ್ ಕಾರ್ನರ್ ತೋರಿದ್ದಾರೆ.

'ಬೇಳೆ, ಅಕ್ಕಿ, ಕಾಳುಗಳಲ್ಲಿ ಹುಳ ಇದ್ದರೆ ವಾಪಸ್‌ ಕಳುಹಿಸಿ'..!

ಮಾಜಿ ಸಚಿವ ಜಿ.ಟಿ ದೇವೇಗೌಡ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ಜಿ.ಟಿ ದೇವೇಗೌಡರು ಸಿಕ್ಕಾಗ ಸುಮಾರು ಹದಿನೈದು ನಿಮಿಷ ಮಾತುಕತೆ ನಡೆಸಿದೆವು. ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಜಿ.ಟಿ ದೇವೇಗೌಡ ಸೂಚಿಸಿದ್ದಾರೆ ಎಂದಿದ್ದಾರೆ.

ಅವರು ಚುನಾವಣೆ ದಿನ ಬಂದು ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.

ಮಗುವಿಗೆ ಹೊಡೀಬೇಡ ಎಂದಿದ್ದಕ್ಕೆ ತಾಯಿ ಆತ್ಮಹತ್ಯೆ..!