ಕಾರ್ಮಿಕರಿಗೆ ಗುರುತಿನ ಕಾರ್ಡ್ ವಿತರಣೆ

ಯಾವುದೇ ಸುರಕ್ಷಿತ ವಿಧಾನಗಳನ್ನು ಅನುಸರಿಸದೇ ಬರಿಗೈನಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಅವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಸಫಾಯಿ ಕರ್ಮಾಚಾರಿ ವಿಚಕ್ಷಣ ಸಮಿತಿ ಸದಸ್ಯ ಬಸವನಗುಡಿ ಕೆ. ನಂಜಪ್ಪ ಹೇಳಿದರು.

Issue of identity card to workers snr

  ಟಿ.ನರಸೀಪುರ :  ಯಾವುದೇ ಸುರಕ್ಷಿತ ವಿಧಾನಗಳನ್ನು ಅನುಸರಿಸದೇ ಬರಿಗೈನಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಅವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಸಫಾಯಿ ಕರ್ಮಾಚಾರಿ ವಿಚಕ್ಷಣ ಸಮಿತಿ ಸದಸ್ಯ ಬಸವನಗುಡಿ ಕೆ. ನಂಜಪ್ಪ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಈ ಹಿಂದೆ ಬರಿಗೈನಲ್ಲಿಮಲದ ಗುಂಡಿ ಸ್ವಚ್ಚ ಗೊಳಿಸುತ್ತಿದ್ದ (ನಿಷೇಧದ ಆಜ್ಞೆ ಜಾರಿಗೆ ಮೊದಲು) ಕಾರ್ಮಿಕರಿಗೆ ಗುರುತಿನ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

ಈ ಹಿಂದೆ ಜೀತಪದ್ದತಿ ಹಾಗೂ ಆದಿ ವಾಸಿಗಳಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿಕೊಟ್ಟಿತ್ತೋ ಅದೇ ಮಾದರಿಯಲ್ಲಿ ಬರಿಗೈನಲ್ಲಿಮಲದ ಗುಂಡಿ ಸ್ವಚ್ಛ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಐಡಿ ಕಾರ್ಡ್ ನೀಡಲಾಗುತ್ತಿದ್ದು, ಈ ಕಾರ್ಡಿನಿಂದ ಸರ್ಕಾರದಿಂದ ದೊರಕುವ ವಿಶೇಷ ಸೌಲಭ್ಯ ಗಳನ್ನುಪಡೆದುಕೊಳ್ಳಬಹುದಾಗಿದೆ. ಪುನರ್ವಸತಿ ಸೇರಿದಂತೆ ಶಿಕ್ಷಣ, ಆರೋಗ್ಯ, ಮನೆ ಮುಂತಾದ ಯಾವುದೇ ಸರ್ಕಾರದ ಯೋಜನೆಗಳಲ್ಲಿ ಇವರಿಗೆ ಮೊದಲ ಆಧ್ಯತೆಯೊಂದಿಗೆ ಮೀಸಲಾತಿ ನೀಡಲಾಗುತ್ತದೆ. ಮೊದಲು ಬರಿಗೈನಲ್ಲಿ ಮಲ ಹೊರುವ ಪದ್ದತಿ ಜಾರಿಯಲ್ಲಿತ್ತು. ಆದರೀಗ ಅದನ್ನು ನಿಷೇಧಿಸಿದೆ ಆದರೂ ಸಹ ಮಲ ಹೊರುವ ಪದ್ದತಿ ಸಂಪೂರ್ಣವಾಗಿ ನಿಷೇಧವಾಗಿಲ್ಲದಿರುವುದು ಬೇಸರದ ಸಂಗತಿ ಎಂದರು.

ಮೊದಲು ಮಲ ಹೊರುವ ಪದ್ಧತಿಯಲ್ಲಿ ಕಾಯಕ ಮಾಡುತ್ತಿದ್ದವರನ್ನು ಗುರುತಿಸುವ ಸರ್ಕಾರ ಅವರಿಗೆ ವಿಶೇಷ ಯೋಜನೆ ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಶೇ.70 ರಷ್ಟು ಸಬ್ಸಿಡಿ ರೂಪದಲ್ಲಿ ಸಾಲ ಸೌಲಭ್ಯ ದೊರಕಿಸಿಕೊಡುತ್ತಿದೆ. ಅಲ್ಲದೇ ಮೊದಲು ಪೌರ ಕಾರ್ಮಿಕರು ಮೃತಪಟ್ಟಲ್ಲಿ ನೀಡುತ್ತಿದ್ದ 10 ಲಕ್ಷ ಪರಿಹಾರ ಹಣವನ್ನು 30 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಅರ್ಹ ಫಲಾನುಭವಿಗಳು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಮುಖ್ಯಾಧಿಕಾರಿ ವಸಂತಕುಮಾರಿ, ಆರೋಗ್ಯಾಧಿಕಾರಿ ಮಧು, ಪರಿಸರ ಎಂಜಿನಿಯರ್ರೀತು, ವ್ಯವಸ್ಥಾಪಕ ಮಹೇಂದ್ರ, ಸಮುದಾಯ ಸಂಘಟಕ ಮಹದೇವು, ಪುಷ್ಪಲತಾ, ನಂಜುಂಡಸ್ವಾಮಿ, ಪೌರ ಕಾರ್ಮಿಕ ಮುರುಗ, ಸೋಮ ಇದ್ದರು.

Latest Videos
Follow Us:
Download App:
  • android
  • ios