shaming humanity : ಟೊಯಿಂಗ್‌ ವಾಹನಕ್ಕೆ ಹಸುಗಳನ್ನು ಕಟ್ಟಿ ಎಳೆದ ಐಆರ್‌ಬಿ ಸಿಬ್ಬಂದಿ

  • ಟೊಯಿಂಗ್‌ ವಾಹನಕ್ಕೆ ಹಸುಗಳನ್ನು ಕಟ್ಟಿ ಎಳೆದ ಐಆರ್‌ಬಿ ಸಿಬ್ಬಂದಿ
  • ಹಗ್ಗ ಕಟ್ಟೆರಸ್ತೆಯಲ್ಲಿ ಎಳೆದೊಯ್ದಿರುವುದಕ್ಕೆ ತೀವ್ರ ಆಕ್ರೋಶ
     
IRB employees pulls dead cow bodies After tying into towing vehicle snr

 ಭಟ್ಕಳ (ಡಿ.06):   ಹೆದ್ದಾರಿಯಲ್ಲಿ ಮೃತ ಪಟ್ಟಿದ್ದ ಎರಡು ಜಾನುವಾರುಗಳನ್ನು (Cow) ಐಆರ್‌ಬಿಯ (IRB) ಟೋಯಿಂಗ್‌ ವಾಹನಕ್ಕೆ (vehicle) ಹಗ್ಗ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್‌ ಆಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ಐಆರ್‌ಬಿ ಟೋಯಿಂಗ್‌ (1033) ವಾಹನದಲ್ಲಿ ಭಟ್ಕಳದ ಬೆಳಕೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಅಪಘಾತದಿಂದ ಮೃತಪಟ್ಟಿವೆ ಎನ್ನಲಾದ ಎರಡು ಜಾನುವಾರುಗಳನ್ನು ಎಳೆದೊಯ್ಯುತ್ತಿರುವ ವಿಡಿಯೋವನ್ನು ಹಿಂಬದಿಯಿಂದ ಪ್ರವಾಸಿಗ ವಾಹನದವರು (Vehicle) ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಟೋಯಿಂಗ್‌ ವಾಹನದಲ್ಲಿ ಕಟ್ಟಿರಸ್ತೆಯಲ್ಲಿ ಮೃತ ಜಾನುವಾರುಗಳನ್ನು ಎಳೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಮೃತಪಟ್ಟ ಜಾನುವಾರುಗಳನ್ನು ಅಮಾನವೀಯವಾಗಿ ಎಳೆದುಕೊಂಡು ಹೋಗುತ್ತಿರುವುದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸೋಮವಾರ ಈ ಕುರಿತು ಶಿರೂರು ಟೋಲ್‌ ಗೇಟ್‌ (Tollgate) ಬಳಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಸಹ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಘಟನೆಯ ಕುರಿತು ಭಟ್ಕಳದಲ್ಲೂ (Bhatkal) ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಈ ಕುರಿತು ಪ್ರತಿಕ್ರಿಯಿ​ಸಿದ ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಅಪಘಾತದಿಂದ ಮೃತಪಟ್ಟಿದ್ದ ಗೋವುಗಳನ್ನು ಐಆರ್‌ಬಿಯವರು ಟೋಯಿಂಗ್‌ ವಾಹನದಲ್ಲಿ ಹಗ್ಗ ಕಟ್ಟಿ ಕೊಂಡು ಅಮಾನವೀಯವಾಗಿ ರಸ್ತೆಯಲ್ಲಿ (Road) ಎಳೆದುಕೊಂಡು ಹೋಗಿದ್ದು, ತೀರಾ ಖಂಡನೀಯ. ತಪ್ಪಿ ತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊ​ಳ್ಳ​ಬೇಕು. ಈ ಕುರಿತು ಸೋಮವಾರ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಭಟ್ಕಳ ಸಹಾಯಕ ಆಯಕ್ತರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ಹಸುಗಳ ರಕ್ಷಣೆ :  ಜೆಜೆ ನಗರ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಜೆಜೆ ನಗರ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಲಾಗುತ್ತಿತ್ತು.  ಹಸುಗಳನ್ನು ರಕ್ಷಣೆ ಮಾಡುವಂತೆ‌ ಜೆಜೆ ನಗರ ಪೊಲೀಸ್ ಠಾಣೆಗೆ ದೂರು ಬಂದಿತ್ತು. ನಂದಿನಿ ಎಂಬುವವರಿಂದ ದೂರು ದಾಖಲಿಸಿದ್ದು ತಕ್ಷಣ ಪೊಲೀಸರು ಕಾರ್ಯನಿರತರಾಗಿದ್ದಾರೆ. ದೂರಿನ ಮೇರೆಗೆ ಗೋವುಗಳ ರಕ್ಷಣೆ ಮಾಡಲಾಗಿದೆ.  ನಂತರ ಗೋವುಗಳನ್ನ ರಕ್ಷಣೆ ಮಾಡಿ ಗೋಶಾಲೆಗೆ ಬಿಟ್ಟು ಬರಲಾಗಿದೆ. 

ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಕ್ರಮ ಕಸಾಯಿಖಾನೆ ಹಾಗೂ ಗೋ ಸಾಗಾಣಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದರು.

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಗೋಮಾತೆಗೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್‌ವೈ

ಮೂಕಪ್ರಾಣಿಗಳ ರಕ್ಷಣೆಯಾಗಬೇಕು. ಕಸಾಯಿಖಾನೆಗೆ ಹೋಗಬಾರದು ಎಂಬ ಸದುದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಗೋಹತ್ಯೆ ನಿಷೇಧಕ್ಕೆ ಪೊಲೀಸ್‌ ಇಲಾಖೆಯ ಸಹಕಾರ ಮುಖ್ಯವಾಗಿದೆ. ಬಕ್ರಿದ್‌ ಹಬ್ಬದ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ನೆರವಿನೊಂದಿಗೆ ರಾಜ್ಯದಲ್ಲಿ 7 ಸಾವಿರ ಗೋವುಗಳನ್ನು ರಕ್ಷಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಜಿಲ್ಲೆಗೊಂದು ಗೋಶಾಲೆ; ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವ ಹಿನ್ನೆಲೆ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ನಿರ್ಧರಿಸಿದೆ. ಈ ಎರ​ಡೂ ಜಿಲ್ಲೆಯಲ್ಲಿಯೂ 50 ರಿಂದ 100 ಎಕರೆ ವಿಶಾಲ ಪ್ರದೇಶದಲ್ಲಿ ಗೋಶಾಲೆ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದರು.

ಕಳೆದ ಫೆಬ್ರವರಿಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧ, ಕಾಗದ ಪತ್ರಗಳ ತೂರಾಟ, ಸಭಾಪತಿಗಳ ಮುಂದೆ ಘೋಷಣೆ, ಆಕ್ರೋಶಗಳ ಮಧ್ಯೆ ಗೋಹತ್ಯೆ ನಿಷೇಧಿಸುವ  ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ ಅನ್ನು ಮಂಡಿಸಿ ಧ್ವನಿಮತದಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಫಲವಾಗಿತ್ತು. 

Latest Videos
Follow Us:
Download App:
  • android
  • ios