ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಗೋಮಾತೆಗೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್‌ವೈ
ಬೆಂಗಳೂರು(ಫೆ.09): ಪ್ರತಿಪಕ್ಷಗಳ ತೀವ್ರ ವಿರೋಧ, ಕಾಗದ ಪತ್ರಗಳ ತೂರಾಟ, ಸಭಾಪತಿಗಳ ಮುಂದೆ ಘೋಷಣೆ, ಆಕ್ರೋಶಗಳ ಮಧ್ಯೆ ಗೋಹತ್ಯೆ ನಿಷೇಧಿಸುವ ವಿವಾದಾತ್ಮಕ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ ಅನ್ನು ಮಂಡಿಸಿ ಧ್ವನಿಮತದಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಫಲವಾಗಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ಇಂದು(ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೋ ಪೂಜೆ ನೆರವೇರಿಸಿದ್ದಾರೆ.
ಕಳೆದ ಚಳಿಗಾಲದ ಅಧಿವೇಶನದಲ್ಲೇ ಈ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿತ್ತು. ಈಗ ಮೇಲ್ಮನೆಯಲ್ಲೂ ಅಂಗೀಕಾರ ಪಡೆಯುವುದರೊಂದಿಗೆ ಕಾಯ್ದೆಯಾಗಿ ರೂಪುಗೊಂಡಿದೆ.
ವಿಧಾನ ಪರಿಷತ್‌ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದ ಸಿಎಂ ಯಡಿಯೂರಪ್ಪ
'ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ಕ್ಕೆ ಧ್ವನಿಮತದ ಮೂಲಕ ಅನುಮೋದನೆ
ಈ ಸಂದರ್ಭದಲ್ಲಿ ಪಶು ಸಂಗೋಪನ ಸಚಿವ ಪ್ರಭು ಚೌಹಾಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವರಾದ ಬೈರತಿ ಬಸವರಾಜ್, ಕೋಟಾ ಶ್ರೀನಿವಾಸ ಪೂಜಾರಿ ಉಪಸ್ಥಿತಿದ್ದರು.