Kolar : ಹಸುಗಳ ಸರಣಿ ಸಾವು - ರೈತರಲ್ಲಿ ಮೂಡಿದ ಆತಂಕ
- ಕೋಲಾರ ಜಿಲ್ಲೆಯಲ್ಲಿ ಸಾಲು ಸಾಲು ಸೀಮೆ ಹಸುಗಳು ಸಾವನ್ನಪ್ಪಿದ್ದು, ರೈತರಲ್ಲಿ ತೀವ್ರ ಆತಂಕ
- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೊಳತೂರು ಗ್ರಾಮದಲ್ಲಿ ಘಟನೆ
ಕೋಲಾರ (ನ.07): ಕೋಲಾರ (Kolar) ಜಿಲ್ಲೆಯಲ್ಲಿ ಸಾಲು ಸಾಲು ಸೀಮೆ ಹಸುಗಳು (Cow) ಸಾವನ್ನಪ್ಪಿದ್ದು, ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Shrinivasapura) ತಾಲೂಕಿನ ಕೊಳತೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಸರಣಿ ಸಾವಿಗೆ ಕಾರಣ ಮಾತ್ರ ತಿಳಿದು ಬಂದಿಲ್ಲ.
ಒಂದು ವಾರದಿಂದ ಗ್ರಾಮದಲ್ಲಿನ ಹತ್ತು ಸೀಮೆ ಹಸುಗಳು ಮರಣ ಹೊಂದಿದ್ದು, ಎಲ್ಲವೂ ಹಾಲು ಕೊಡುತ್ತಿದ್ದ ಹಸುಗಳಾಗಿವೆ. ಯಾವುದೇ ಅನಾರೋಗ್ಯ ಕಾಡದೇ ದಿಢೀರನೆ ಎಲ್ಲಾ ಹಸುಗಳು ಸಾವನ್ನಪ್ಪಿವೆ.
ಪ್ರಸ್ತುತ ಹತ್ತಕ್ಕೂ ಹೆಚ್ಚು ಸೀಮೆ ಹಸುಗಳ ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ. ಹೈನುಗಾರಿಕೆ ಅವಲಂಬಿಸಿದ್ದ ಕೊಳತೂರು ಗ್ರಾಮದ ರೈತರು ಹಸುಗಳ ಸರಣಿ ಸಾವಿನಿಂದ ಕಂಗಾಲಾಗಿದ್ದಾರೆ.
ಪ್ರತಿ ಹಸುವಿನ ಮೌಲ್ಯ ಐವತ್ತು ಸಾವಿರಕ್ಕೂ ಅಧಿಕ ಇದ್ದು, ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸುವಂತಾಗಿದೆ. ಹಸುಗಳ ಸಾವಿಗೆ (Death) ಕಾರಣ ತಿಳಿಯುತ್ತಿಲ್ಲ.
ಸದ್ಯ ಈ ಬಗ್ಗೆಪಶುಪಾಲನಾ ಇಲಾಖೆಗೆ ಮಾಹಿತಿ ನೀಡಿದ್ದು, ಕೊಳತೂರು ಗ್ರಾಮಕ್ಕೆ ಪಶುಪಾಲನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ದಾಳಿ ಆತಂಕ
ತಾಲೂಕಿನ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ(Leopard) ಹಾವಳಿ ಹೆಚ್ಚಾಗಿದೆ. ಜಾನುವಾರುಗಳ(Livestock) ಮೇಲೆ ನಿರಂತರ ದಾಳಿ ನಡೆಯುತ್ತಿರುವುದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ(Forest Department) ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.
ಬನವಾಸಿ ಅರಣ್ಯ ವ್ಯಾಪ್ತಿಯ ಬಿಸಲಕೊಪ್ಪ, ಎಕ್ಕಂಬಿ, ಶಿವಳ್ಳಿ ಭಾಗದಲ್ಲಿ ಸಮೃದ್ಧ ಅರಣ್ಯ ಪ್ರದೇಶ, ಸಾಗುವಾನಿ ನೆಡುತೋಪು ಹೆಚ್ಚಿದ್ದು ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದೆ. ಹದಿನೈದು ದಿನಗಳಲ್ಲಿ ಬೊಪ್ಪನಳ್ಳಿ, ದಾನಂದಿ ಭಾಗದಲ್ಲಿ ನಾಲ್ಕು ಹಸುಗಳನ್ನು(Cow) ಚಿರತೆ ಬಲಿ ಪಡೆದಿದೆ. ಈ ಪೈಕಿ ಎರಡು ಕರು ಮತ್ತು ಎರಡು ದೊಡ್ಡ ಆಕಳು ಸೇರಿವೆ. ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಯ್ದ ಜಾಗಗಳನ್ನು ಗುರುತಿಸಿ ಬೋನ್‌ಗಳನ್ನು ಇರಿಸಿದೆ. ಅರಣ್ಯ ರಕ್ಷಕರು ಗಸ್ತು ತಿರುಗಲು ಆರಂಭಿಸಿದ್ದಾರೆ.
ಚಳಿಗಾಲದ ಆರಂಭದ ಅವಧಿಯಲ್ಲಿ ಈ ಭಾಗದಲ್ಲಿ ಚಿರತೆ ಓಡಾಟ ಹೆಚ್ಚುತ್ತಿತ್ತು. ಈ ಬಾರಿ ಅವಧಿಗೆ ಮುನ್ನವೇ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜನರ ಆತಂಕ ದೂರ ಮಾಡಲು ಚಿರತೆ ಸೆರೆಗೆ ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಬನವಾಸಿ ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ.
ದಾನಂದಿ, ಶಿವಳ್ಳಿ, ಬೊಪ್ಪನಳ್ಳಿ, ಸಂಬಯ್ಯನಜಡ್ಡಿ, ಗೇರಮನೆ ಸುತ್ತಮುತ್ತ ಚಿರತೆ ಹದಿನೈದು ದಿನಗಳಿಂದ ನಿರಂತರವಾಗಿ ಓಡಾಡುತ್ತಿದೆ. ಈಚೆಗೆ ಮೂರು ಚಿರತೆಗಳು ಒಟ್ಟಿಗೆ ಇರುವುದನ್ನು ನೋಡಿದ್ದೇವೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ವಿದ್ಯಾರ್ಥಿಗಳು ಪ್ರತಿ ದಿನ ಬೆಟ್ಟ-ಗುಡ್ಡ ಹತ್ತಿ ಶಾಲೆಗೆ ಹೋಗುತ್ತಿದ್ದಾರೆ. ಅವರಿಗೂ ಆತಂಕ ಕಾಡುತ್ತಿದೆ. ದಸರಾ ರಜೆ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳ ಆತಂಕ ತಾತ್ಕಾಲಿಕ ದೂರವಾಗಿದೆ. ಆದರೆ, ಶಾಲೆ ಆರಂಭವಾಗುವ ಒಳಗೆ ಚಿರತೆಗಳನ್ನು ಹಿಡಿದು ಬೇರೆಡೆ ಬಿಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ. ಎಕ್ಕಂಬಿ, ಬಿಸಲಕೊಪ್ಪ ಭಾಗದಲ್ಲಿ ಚಿರತೆಗಳಿರಲ್ಲ. ಬೇರೆಡೆ ಹಿಡಿದ ಚಿರತೆಯನ್ನು ಇಲ್ಲಿ ತಂದು ಬಿಟ್ಟಿರಬಹುದಾದ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
- ಕೋಲಾರ ಜಿಲ್ಲೆಯಲ್ಲಿ ಸೀಮೆ ಹಸುಗಳ ಸರಣಿ ಸಾವು.
- ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ಘಟನೆ.
- ಒಂದು ವಾರದಿಂದ ಗ್ರಾಮದಲ್ಲಿನ ಹತ್ತು ಸೀಮೆಹಸುಗಳ ಮರಣ.
- ಹಾಲು ಕೊಡುತ್ತಿದ್ದ ಹತ್ತು ಸೀಮೆ ಹಸುಗಳು ದಿಢೀರನೆ ಸಾವು.
- ಪ್ರಸ್ತುತ ಹತ್ತನ್ನೆರಡು ಸೀಮೆಹಸುಗಳ ಆರೋಗ್ಯ ಗಂಭೀರ.
- ಹೈನುಗಾರಿಕೆ ಅವಲಂಬಿಸಿದ್ದ ಕೊಳತೂರು ಗ್ರಾಮದ ರೈತರು ಕಂಗಾಲು.