ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ಮತ್ತು ರೈತರ ಸಹಕಾರದ ಕೊರತೆಯೇ ಕಾರಣ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದ್ದಾರೆ. ಜಮೀನು ಮತ್ತು ಮರಗಳಿಗೆ ಹೆಚ್ಚಿನ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಯೋಜನೆಗೆ ಅಡ್ಡಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆ: ಸಾರ್ವಜನಿಕರು, ರೈತರ ಸಹಕಾರದ ಕೊರತೆಯಿಂದಾಗಿ ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು, ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೊಪಗೊಂಡರು. ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ಅನುಷ್ಠಾನಕ್ಕೆ ನಾಲ್ಕುಬಾರಿ ಸಭೆ ನಡೆಸಿದ್ದೇನೆ. ಆಗ ರೈತರು ಜಮೀನುಗಳಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ಜಮೀನುಗಳಲ್ಲಿ ಇರುವ ಗಿಡ-ಮರಗಳಿಗೆ ಪರಿಹಾರ ನೀಡುವಂತೆ ನ್ಯಾಯಾಲದಯ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ, ಆಲಮಟ್ಟಿ, ವಿಜಯಪುರದಿಂದ ಕಾಶಿಗೆ ನೇರ ರೈಲು ಸಂಪರ್ಕ; ಎಲ್ಲೆಲ್ಲಿ ನಿಲುಗಡೆ?
ಸಿಗದ ಸಹಕಾರ
ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲರ ಸಹಕಾರ ಅವಶ್ಯವಾಗಿರುತ್ತದೆ. ಸಕಾಲದಲ್ಲಿ ಸೂಕ್ತವಾದ ಸಹಕಾರ ದೊರೆತರೆ ಅಂದುಕೊಂಡಂತೆ ಕಾಮಗಾರಿಗಳು ನಡೆಯುತ್ತವೆ. ಸಹಕಾರ ವಿಲ್ಲದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದರು. ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಆಸಕ್ತಿ ವಹಿಸಿ ಕಾಮಗಾರಿಗಳು ನಡೆಸಲು ಸಹಕರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್‌ಗೆ ಡಿಮ್ಯಾಂಡ್


