ಜಪಾನಿನ ಸಂಸ್ಕೃತಿ, ಆಹಾರ ಪದ್ಧತಿ, ಸಂಪ್ರದಾಯವನ್ನು ಭಾರತೀಯ ವಿದ್ಯಾರ್ಥಿಗಳು ಕಲಿಯಲು ಅಗತ್ಯ ನೆರವು ನೀಡುವುದರ ಜೊತೆಗೆ ಸಂಸ್ಕೃತಿ ವಿನಿಮಯಕ್ಕೆ ಉತ್ಸುಕವಾಗಿದ್ದೇವೆ ಎಂದು ಜಪಾನಿನ ಸಿಸ್ಟಮ್ ಕನ್ಸಲ್ಟೆಂಟ್ ಕಂಪನಿ ಲಿಮಿಟೆಡ್ (ಕೆಎಸ್‌ಸಿ) ನಿರ್ದೇಶಕ ಕಮಿಯಮಜುನಿಚಿ ತಿಳಿಸಿದರು.

ತುಮಕೂರು : ಜಪಾನಿನ ಸಂಸ್ಕೃತಿ, ಆಹಾರ ಪದ್ಧತಿ, ಸಂಪ್ರದಾಯವನ್ನು ಭಾರತೀಯ ವಿದ್ಯಾರ್ಥಿಗಳು ಕಲಿಯಲು ಅಗತ್ಯ ನೆರವು ನೀಡುವುದರ ಜೊತೆಗೆ ಸಂಸ್ಕೃತಿ ವಿನಿಮಯಕ್ಕೆ ಉತ್ಸುಕವಾಗಿದ್ದೇವೆ ಎಂದು ಜಪಾನಿನ ಸಿಸ್ಟಮ್ ಕನ್ಸಲ್ಟೆಂಟ್ ಕಂಪನಿ ಲಿಮಿಟೆಡ್ (ಕೆಎಸ್‌ಸಿ) ನಿರ್ದೇಶಕ ಕಮಿಯಮಜುನಿಚಿ ತಿಳಿಸಿದರು.

ನಗರದ ಎಸ್‌ಎಸ್‌ಐಟಿ ಕಾಲೇಜಿನ ಪಿಜಿ ಸೆಮಿನಾರ್ ಶ್ರೀ ಸಿದ್ದಾರ್ಥ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ವತಿಯಿಂದ ಜಪಾನಿನ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಕ್ರಾಸ್‌ಕಲ್ಚರ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಎಸ್‌ಐಬಿಎಂನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರ ಜೊತೆಗೆ ಜಪಾನಿನ ವೈಶಿಷ್ಟತೆ ಹಾಗೂ ಕಾರ್ಯವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಜಪಾನಿನ ಸಂಸ್ಕೃತಿ, ಆಹಾರ ಪದ್ಧತಿ, ವಾತಾವರಣ ಹಾಗೂ ಅಲ್ಲಿನ ಸಂಪ್ರದಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ಹಂಚಿಕೊಂಡರು.

ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿರುವ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಚಟುವಟಿಕೆಯನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಐಬಿಎಂ ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರವಿವೇಕ್ ವೀರಯ್ಯ, ಎಸ್‌ಎಸ್‌ಐಟಿ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್, ಆಡಳಿತಾಧಿಕಾರಿ ಖಲಂದರ್ ಪಾಷ, ಪ್ರಾಂಶುಪಾಲರಾದ ಡಾ.ಮಮತಾ, ಜಪಾನಿನ ಕೆಎಸ್‌ಸಿ ಸಂಸ್ಥೆಯ ವ್ಯಸ್ಥಾಪಕ ಕುಬೇಕಿ ರೈಸುಕೆ ಸೇರಿದಂತೆಎಸ್‌ಎಸ್‌ಐಬಿಎಂನ ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಟ್ವೀಟರ್‌ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್‌ ಬೇಕಾಗಿತ್ತು

ಸ್ಯಾನ್‌ಫ್ರಾನ್ಸಿಸ್ಕೋ (ಸೆ.5): ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌ ಅನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಖರೀದಿಸುತ್ತಿದ್ದಂತೆ, ಆ ಕಂಪನಿಯ ಸಿಇಒ ಆಗಿದ್ದ ಭಾರತೀಯ ಮೂಲದ ಪರಾಗ್‌ ಅಗರ್‌ವಾಲ್‌ ಅವರನ್ನು ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ವಜಾಗೊಳಿಸಿದ್ದರು. ಆ ನಿರ್ಧಾರವನ್ನು ಕೈಗೊಂಡಿದ್ದು ಏಕೆ ಎಂಬುದರ ಬಗ್ಗೆ ಮಸ್ಕ್ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಆಸ್ತಿ ಒಂದೇ ವರ್ಷಕ್ಕೆ 1532 ಕೋಟಿ ಏರಿಕೆ, ಯಾವ ಪಕ್ಷ ಟಾಪ್‌ನಲ್ಲಿದೆ?

ಟ್ವೀಟರ್‌ ಖರೀದಿಸುವುದಕ್ಕೂ ಮುನ್ನ ಪರಾಗ್‌ ಅವರನ್ನು 2022ರಲ್ಲಿ ಔತಣಕೂಟದ ನೆಪದಲ್ಲಿ ಭೇಟಿಯಾಗಿದ್ದೆ. ಪರಾಗ್‌ ಅವರ ವ್ಯಕ್ತಿತ್ವ ನನ್ನನ್ನು ಪ್ರಭಾವಿಸಲಿಲ್ಲ. ಪರಾಗ್‌ ಒಳ್ಳೆಯ ವ್ಯಕ್ತಿಯೇ ಆಗಿದ್ದರು. ಆದರೆ ಸಿಇಒ ಆಗಲು ಅದು ಕಾರಣವಾಗುವುದಿಲ್ಲ. ಸಿಇಒ ಆಗಲು ಎಲ್ಲ ಜನರೂ ಮೆಚ್ಚಿಕೊಳ್ಳಬೇಕು ಎಂದೇನೂ ಇಲ್ಲ. ಟ್ವೀಟರ್‌ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್‌ ಬೇಕಾಗಿತ್ತು (ಆಕ್ರಮಣಶೀಲ ವ್ಯಕ್ತಿತ್ವದವರು). ಆದರೆ ಪರಾಗ್‌ ಅದಾಗಿರಲಿಲ್ಲ ಎಂದು ಮಸ್ಕ್ ತಿಳಿಸಿದ್ದಾರೆ.

ಮಸ್ಕ್ ಅವರ ಜೀವನಗಾಥೆ ಕುರಿತು ಲೇಖಕ ವಾಲ್ಟರ್‌ ಐಸಾಕ್ಸನ್‌ ಅವರು ಪುಸ್ತಕವೊಂದನ್ನು ಬರೆದಿದ್ದಾರೆ. ಸೆ.12ರಂದು ಬಿಡುಗಡೆಯಾಗುವ ಆ ಕೃತಿಯಲ್ಲಿ ಪರಾಗ್‌ ವಜಾ ಕುರಿತ ಈ ಅಂಶಗಳು ಇವೆ.

ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!

ಪರಾಗ್‌ ಒಬ್ಬರೇ ಅಲ್ಲ, ಟ್ವೀಟರ್‌ ಅನ್ನು ಖರೀದಿಸಿದ ಬಳಿಕ ಆ ಕಂಪನಿಯ ಉನ್ನತ ಸಿಬ್ಬಂದಿಯನ್ನು ಏಕಾಏಕಿ ಮಸ್ಕ್ ವಜಾಗೊಳಿಸಿದ್ದರು. ನಂತರ ಸಾವಿರಾರು ನೌಕರರು ಕೆಲಸ ಕಳೆದುಕೊಂಡಿದ್ದರು. ಬಳಿಕ ಟ್ವೀಟರ್‌ ಹೆಸರನ್ನು ‘ಎಕ್ಸ್‌’ ಎಂದು ಬದಲಿಸಿದರು.