ರಾಷ್ಟ್ರೀಯ ಪಕ್ಷಗಳ ಆಸ್ತಿ ಒಂದೇ ವರ್ಷಕ್ಕೆ 1532 ಕೋಟಿ ಏರಿಕೆ, ಯಾವ ಪಕ್ಷ ಟಾಪ್‌ನಲ್ಲಿದೆ?
ದೇಶದ 8 ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಘೋಷಿಸಿದ ಒಟ್ಟು ಆಸ್ತಿ ಮೊತ್ತ 8,829.16 ಕೋಟಿ ರು.ಗಳಾಗಿದೆ. ಅವುಗಳ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 1532 ಕೋಟಿ ರು.ನಷ್ಟು ಹೆಚ್ಚಳವಾಗಿದೆ. ಇದರಲ್ಲಿ ಬಿಜೆಪಿ ಆಸ್ತಿ 6,046.81 ಕೋಟಿ ರು. ಆಗಿದೆ.
ನವದೆಹಲಿ (ಸೆ.5): ದೇಶದ 8 ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಘೋಷಿಸಿದ ಒಟ್ಟು ಆಸ್ತಿ ಮೊತ್ತ 8,829.16 ಕೋಟಿ ರು.ಗಳಾಗಿದೆ. ಅವುಗಳ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 1532 ಕೋಟಿ ರು.ನಷ್ಟುಹೆಚ್ಚಳವಾಗಿದೆ. ಈ ಪಕ್ಷಗಳು 2020-21ರಲ್ಲಿ 7,297.62 ಕೋಟಿ ರು.ಗಳಷ್ಟುಆಸ್ತಿ ಹೊಂದಿದ್ದವು ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.
ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ, ತೃಣಮೂಲ ಕಾಂಗ್ರೆಸ್ ಮತ್ತು ಎನ್‌ಪಿಇಪಿ ಘೋಷಿಸಿದ ಆಸ್ತಿ ಮತ್ತು ಸಾಲಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!
ಆಸ್ತಿ ಹೆಚ್ಚಳದಲ್ಲಿ ಬಿಜೆಪಿ ನಂ.1:
2020-21ರ ಆರ್ಥಿಕ ವರ್ಷದಲ್ಲಿ, ಬಿಜೆಪಿಯು 4,990 ಕೋಟಿ ರು. ಮೌಲ್ಯದ ಆಸ್ತಿಯನ್ನು ಘೋಷಿಸಿತ್ತು. 2021-22 ರಲ್ಲಿ 6,046.81 ಕೋಟಿ ರು.ಗೆ (21.17 ರಷ್ಟು) ಹೆಚ್ಚಾಗಿದೆ.
2020-21ರಲ್ಲಿ, ಕಾಂಗ್ರೆಸ್‌ನ ಘೋಷಿತ ಆಸ್ತಿ 691.11 ಕೋಟಿ ರು.ಗಳಷ್ಟಿತ್ತು. ಇದು 2021-22ರಲ್ಲಿ ಶೇ.16.58 ರಷ್ಟುಏರಿಕೆಯಾಗಿ 805.68 ಕೋಟಿ ರು. ಆಗಿದೆ.
ಟಿಎಂಸಿಯ ಒಟ್ಟು ಆಸ್ತಿ 2020-21ರಲ್ಲಿನ 182 ಕೋಟಿ ರು.ನಿಂದ 458.10 ಕೋಟಿ ರು.ಗೆ ಏರಿಕೆಯಾಗಿದ್ದು, ಶೇ.151.70ರಷ್ಟುಹೆಚ್ಚಳವಾಗಿದೆ.
ಬಿಎಸ್ಪಿ ತನ್ನ ವಾರ್ಷಿಕ ಘೋಷಿತ ಆಸ್ತಿಯಲ್ಲಿ ಇಳಿಕೆಯನ್ನು ತೋರಿಸಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ ಎಂದು ಎಡಿಆರ್ ವರದಿ ಹೇಳಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ತುರ್ತು ಕಾಂಗ್ರೆಸ್ ಸಭೆ ಕರೆದ ಸೋನಿಯಾ ಗಾಂಧಿ!
2020-21 ಮತ್ತು 2021-22 ರ ನಡುವೆ ಬಿಎಸ್‌ಪಿ ಒಟ್ಟು ಆಸ್ತಿಯು ಶೇ.5.74ರಷ್ಟು(732.79 ಕೋಟಿ ರು.ನಿಂದ ರೂ 690.71 ಕೋಟಿ ರು.ಗೆ) ಇಳಿಕೆ ಆಗಿದೆ.
ರಾಷ್ಟ್ರೀಯ ಪಕ್ಷಗಳು ಘೋಷಿಸಿದ 2020-21ರ ಒಟ್ಟು ಸಾಲ 103.55 ಕೋಟಿ ರುಪಾಯಿ. ಸಾಲದಲ್ಲಿ ಕಾಂಗ್ರೆಸ್ ನಂ.1 ಪಕ್ಷವಾಗಿದ್ದು 71.58 ಕೋಟಿ ರು. ಸಾಲ ಘೋಷಿಸಿದೆ. ಸಿಪಿಎಂ 16.109 ಕೋಟಿ ರು. ಸಾಲದೊಂದಿಗೆ ನಂತರದ ಸ್ಥಾನದಲ್ಲಿದೆ.
ಇನ್ನು 2021-22ಕ್ಕೆ, ಕಾಂಗ್ರೆಸ್ ಮತ್ತೆ 41.95 ಕೋಟಿ ರು. ಸಾಲದೊಂದಿಗೆ ಅಗ್ರಸ್ಥಾನದಲ್ಲಿದೆ, ನಂತರದ ಸ್ಥಾನದಲ್ಲಿ ಸಿಪಿಐ ಮತ್ತು ಬಿಜೆಪಿ ಕ್ರಮವಾಗಿ 12.21 ಕೋಟಿ ರು. ಮತ್ತು 5.17 ಕೋಟಿ ರು. ಮೌಲ್ಯದ ಸಾಲ ಪ್ರಕಟಿಸಿವೆ.
ಪಕ್ಷ ಹಾಲಿ ಆಸ್ತಿ ಏರಿಕೆ/ಇಳಿಕೆ
ಬಿಜೆಪಿ 6047 ಕೋಟಿ
ಕಾಂಗ್ರೆಸ್ 805
ಸಿಪಿಎಂ 735
ಬಿಎಸ್ಪಿ 690
ಟಿಎಂಸಿ 458
ಎನ್‌ಸಿಪಿ 75
ಸಿಪಿಐ 16
ಎನ್‌ಪಿಇಪಿ 1.82