ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡೆಂಘೀ 216, ಚಿಕನ್‌ ಗುನ್ಯಾ 14 ಕೇಸ್‌, ಹೆಚ್ಚಿದ ಆತಂಕ

ಅತಿವೃಷ್ಟಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ:ಜ್ವರ, ಕೆಮ್ಮು, ನೆಗಡಿ ಜಾಸ್ತಿ

Increased Anxiety Due to 216 Dengue and 14 Chikungunya Cases in Chikkaballapur grg

ಚಿಕ್ಕಬಳ್ಳಾಪುರ(ಸೆ.09): ಜಿಲ್ಲೆಯಲ್ಲಿ ಅತಿವೃಷ್ಠಿಯ ಪರಿಣಾಮ ಜಿಲ್ಲಾದ್ಯಂತ ಡೆಂಘೀ ಹಾಗೂ ಚಿಕನ್‌ ಗ್ಯಾನ್‌ ಪ್ರಕರಣಗಳು ಸಾರ್ವಜನಿಕರನ್ನು ತೀವ್ರ ಹೈರಾಣಗಿಸಿದ್ದು ಕಳೆದ ಜನವರಿಯಿಂದ ಸೆಪ್ಪೆಂಬರ್‌ನ ಇಲ್ಲಿಯವರೆಗೂ ಜಿಲ್ಲೆಯಲ್ಲಿ 216 ಡೆಂಘೀ ಹಾಗೂ 14 ಚಿಕನ್‌ ಗ್ಯೂನ್‌ ಪ್ರಕರಣಗಳು ದಾಖಲಾಗಿವೆ.

ಮಳೆಗಾಲದಲ್ಲಿ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು ಅದರಲ್ಲೂ ಡೆಂಘೀ ಪ್ರಕರಣಗಳು 200 ರ ಗಡಿ ದಾಟಿರುವುದು ಆರೋಗ್ಯ ಇಲಾಖೆಯನ್ನು ತೀವ್ರ ಚಿಂತೆಗೀಡು ಮಾಡಿದೆ. 1874 ಮಂದಿ ರಕ್ತ ಪರೀಕ್ಷೆ ನಡೆಸಿದ್ದು ಆ ಪೈಕಿ 216 ಮಂದಿಗೆ ಡೆಂಘೀ ದೃಡಪಟ್ಟಿದೆ. ಇದರ ನಡುವೆ ಜಿಲ್ಲೆಯಲ್ಲಿ ಮಳೆಯ ಪರಿಣಾಮ ಜ್ವರ, ಕೆಮ್ಮು, ನೆಗಡಿ ಪ್ರಕರಣಗಳು ಹೆಚ್ಚಾಗಿದ್ದು ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ  391.57 ಕೋಟಿ ಹಾನಿ, ಮಳೆಗೆ ಒಟ್ಟು 6 ಮಂದಿ ಬಲಿ

ರೋಗ ಹರಡುವ ಸಾಧ್ಯತೆ:

ಮಳೆಗಾಲದಲ್ಲಿ ಸಹಜವಾಗಿಯೆ ಉಸಿರಾಟದ ತೊಂದರೆ, ಚರ್ಮ ಮತ್ತು ಕಣ್ಣು ಸೋಂಕು, ಸುಸ್ತು, ಮಾನಸಿಕ ಆಘಾತ, ಹೃದಯಾಘಾತ, ನೀರಿನಲ್ಲಿ ಮುಳುಗುವುದು, ಕೊಚ್ಚಿಹೋಗುವುದು, ಗಾಯಗಳು, ಕಾಣದಂತಹ ಗುಂಡಿ ಮತ್ತು ಹೊಂಡಗಳಿಗೆ ಬೀಳುವುದು, ಕಟ್ಟಡಗಳ ಕುಸಿತ, ಭೂ ಕುಸಿತ, ವಿದ್ಯುತ್‌ ಆಘಾತ, ವಾಂತಿ ಭೇದಿ ಪ್ರಕರಣಗಳು ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆ ಆಗುವ ಸಾಧ್ಯತೆಗಳು ಇವೆಯೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್‌ ಕುಮಾರ್‌ ತಿಳಿಸಿದರು.

Chikkaballapur Nandi Hill: ‌ಮಳೆಗೆ ಮತ್ತೆ ನಂದಿ ಬೆಟ್ಟದ 3 ಕಡೆ ಗುಡ್ಡ ಕುಸಿತ

ಊಟಕ್ಕೆ ಮೊದಲು ಶೌಚದ ನಂತರ ಕೈಗಳನ್ನು ಸೋಪಿನಿಂದ ತೊಳೆಯುವುದು. ಕುದಿಸಿ ಆರಿಸಿದ ಶುದ್ದವಾದ ನೀರನ್ನು ಅಥವಾ ಸ್ವಚ್ಚ ನೀರನ್ನು ಕುಡಿಯುವುದು. ಆಹಾರವನ್ನು ಬಿಸಿ ಬಿಸಿಯಾಗಿಯೇ ಸೇವಿಸುವುದು. ತಯಾರಿಸಿದ ಆಹಾರವನ್ನು ನೊಣ, ಜಿರಳೆ, ಇಲಿ, ಹೆಗ್ಗಣ ಮುಂತಾದವುಳು ಕೆಡಿಸದಂತೆ ಸಂರಕ್ಷಿಸುವುದು. ವಾಂತಿ-ಭೇದಿಯಾದ ತಕ್ಷಣ ಪುನರ್ಜಲೀಕರಣ ದ್ರಾವಣ ಕುಡಿಸುವುದು, ಆರೋಗ್ಯ ಕಾರ್ಯಕರ್ತೆಯರಿಂದ, ವೈದ್ಯರಿಂದ ಚಿಕಿತ್ಸೆ ಪಡೆಯುವುದು. ಮುಚ್ಚಿಟ್ಟಆಹಾರ ಪದಾರ್ಥಗಳನ್ನು ಬಳಸುವುದು ಸೂಕ್ತ ಎಂದರು.

ಕುಡಿಯುವ ನೀರಿನ ಸರಬರಾಜು ಪೈಪುಗಳು ಒಡೆದು ಕೊಳಕು ನೀರು ಸೇರದಂತೆ ಎಚ್ಚರವಹಿಸಬೇಕು. ಕುಡಿಯುವ ನೀರು ಕಲುಷಿತವಾದರೆ ಅನೇಕ ರೋಗಗಳು ಹರಡುತ್ತದೆ, ಅತಿಸಾರ, ಟೈಫಾಯಿಡ್‌, ಕಾಮಾಲೆ, ಪೋಲಿಯೋ, ಚರ್ಮರೋಗ, ಆಮಶಂಕೆ, ಜಂತುಹುಳು ಇತ್ಯಾದಿ. ಪ್ರಕೃತಿ ವಿಕೋಪದಿಂದ ಕಲುಷಿತಗೊಂಡಂತಹ ನೀರನ್ನು ಯಾವುದೇ ಸನ್ನಿವೇಶದಲ್ಲಿ ಯಾವುದಕ್ಕೂ ಉಪಯೋಗಿಸಬಾರದು ಅಥವಾ ಬಳಸಬಾರದೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್‌ ಕುಮಾರ್‌ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios