ಕುಂಭ ದ್ರೋಣ ಮಳೆಗೆ ಮತ್ತೆ ಬೆಚ್ಚಿಬಿದ್ದ ಜಿಲ್ಲೆಯ ಜನತೆ, ಭಾರೀ ಮಳೆಗೆ 2ನೇ ಬಾರಿಗೆ ನಂದಿಬೆಟ್ಟದಲ್ಲಿ ಗುಡ್ಡ ಕುಸಿತ, ಪ್ರವಾಸಿಗರಲ್ಲಿ ಹೆಚ್ಚಿದ ಆತಂಕ, ಮಳೆಯ ಅರ್ಭಟಕ್ಕೆ ಕೊತ್ತನೂರು ಗ್ರಾಮ ಮುಳಗಡೆ, ಅತಿವೃಷ್ಟಿಗೆ ಹೂವು ದ್ರಾಕ್ಷಿ, ರೇಷ್ಮೆ ಬೆಳೆಗಳು ಜಲಾವೃತ, ಬೆಳೆ ನಷ್ಟಕ್ಕೆ ರೈತರ ಕಣ್ಣೀರು...

ಚಿಕ್ಕಬಳ್ಳಾಪುರ (ಸೆ.07): ಕುಂಭ ದ್ರೋಣ ಮಳೆಗೆ ಮತ್ತೆ ಬೆಚ್ಚಿಬಿದ್ದ ಜಿಲ್ಲೆಯ ಜನತೆ, ಭಾರೀ ಮಳೆಗೆ 2ನೇ ಬಾರಿಗೆ ನಂದಿಬೆಟ್ಟದಲ್ಲಿ ಗುಡ್ಡ ಕುಸಿತ, ಪ್ರವಾಸಿಗರಲ್ಲಿ ಹೆಚ್ಚಿದ ಆತಂಕ, ಮಳೆಯ ಅರ್ಭಟಕ್ಕೆ ಕೊತ್ತನೂರು ಗ್ರಾಮ ಮುಳಗಡೆ, ಅತಿವೃಷ್ಟಿಗೆ ಹೂವು ದ್ರಾಕ್ಷಿ, ರೇಷ್ಮೆ ಬೆಳೆಗಳು ಜಲಾವೃತ, ಬೆಳೆ ನಷ್ಟಕ್ಕೆ ರೈತರ ಕಣ್ಣೀರು...

ಹೌದು, ಜಿಲ್ಲಾ ಕೇಂದ್ರದಲ್ಲಿ ಸೋಮವಾರ ರಾತ್ರಿ ಇಡೀ ಅರ್ಭಟಿಸಿದ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಕಂಡು ಬಂದ ದೃಶ್ಯಗಳು ಇವು. ಬರದೂರು ಇದೀಗ ಅಕ್ಷರಶಃ ಮಳೆನಾಡ ಆಗಿದ್ದು ಎಡ ಬಿಡದೆ ಮಳೆ ಸುರಿದ ಪರಿಣಾಮ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ತಾಕುಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾದರೆ ಅಲ್ಲಲ್ಲಿ ರಸ್ತೆಗಳು, ಚರಂಡಿಗಳು ಜಾಲವೃತ್ತಗೊಂಡು ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಸಾಕಷ್ಟುಅಸ್ತವ್ಯಸ್ಥವಾಗಿದೆ.

ಸಮುದಾಯಗಳ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ: ಶಾಸಕ ಸುಬ್ಬಾರೆಡ್ಡಿ

ನಂದಿಬೆಟ್ಟದಲ್ಲಿ 3 ಕಡೆ ಗುಡ್ಡ ಕುಸಿತ: ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಮಂಗಳವಾರ ಬೆಳಗ್ಗೆ ಭಾರೀ ಮಳೆಗೆ ಎರಡನೇ ಬಾರಿ ಗುಡ್ಡ ಕುಸಿದಿದ್ದು, ಪ್ರವಾಸಿಗರದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಇದೇ ರೀತಿ ಮಳೆಯ ಅರ್ಭಟಕ್ಕೆ ಸುಮಾರು 30, 40 ಅಡಿ ಮೇಲಿಂದ ಬೆಟ್ಟದ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಹಾಳಾಗಿತ್ತು. ಆದರೆ ಈ ಬಾರಿ ಗುಡ್ಡ ಕುಸಿದು ಅದರ ಮಣ್ಣು ರಸ್ತೆ ಮೇಲೆ ಬಿದ್ದಿದ್ದೆ. ಆದರೆ ಪ್ರವಾಸಿಗರು ತೆರಳುವ ರಸ್ತೆಗೆ ಯಾವುದೇ ರೀತಿಯ ಹಾನಿ ಆಗಿಲ್ಲ. ಆದರೂ ಬೆಟ್ಟದಲ್ಲಿ ಎರಡನೇ ಬಾರಿಗೆ ಗುಡ್ಡ ಕುಸಿದಿರುವ ಪರಿಣಾಮ ಪ್ರವಾಸಿಗರಲ್ಲಿ ಹೆಚ್ಚಿನ ಆತಂಕ ಉಂಟಾಗಿದೆ. ಅದರಲ್ಲೂ ಮೂರು ಕಡೆ ಬೆಟ್ಟದಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಂದಿದೆ.

ಗಿರಿಧಾಮದಲ್ಲಿ ಕಲ್ಯಾಣಿ ಭರ್ತಿ: ವ್ಯಾಪಕ ಮಳೆಯಿಂದ ಒಂದಡೆ ಬೆಟ್ಟದಲ್ಲಿ ಗುಡ್ಡ ಕುಸಿದಿದ್ದರೆ ಮತ್ತೊಂದಡೆ ಹಲವು ದಶಕಗಳ ಬಳಿಕ ನಂದಿಗಿರಿಧಾಮದಲ್ಲಿರಯವ ಕಲ್ಯಾಣಿ ತುಂಬಿ ಹರಿಯುತ್ತಿರುವುದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೊಳ್ಳವನಹಳ್ಳಿ ಗ್ರಾಮದಲ್ಲಿ ದ್ರಾಕ್ಷಿ ಹಾಗೂ ಹೂವು ತೋಟಗಳ ಪ್ರದೇಶಗಳು ಸಂಪೂರ್ಣ ಜಲಾವೃತ್ತಗೊಂಡಿವೆ. ಇನ್ನೂ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಹಳೇ ಯರ್ರಹಳ್ಳಿ ಗ್ರಾಮದ ರೈತ ವೆಂಕಟರೆಡ್ಡಿ ಅವರ ಕೋಳಿ ಫಾಮ್‌ರ್‍ ನಲ್ಲಿ ಮಳೆಯ ನೀರು ನುಗ್ಗಿ ಸುಮಾರು 600 ಕೋಳಿಗಳು ಸಾವನ್ನಪ್ಪಿವೆಯೆಂದು ಜಿಲ್ಲಾಡಳಿತ ಮಳೆಯ ಹಾನಿ ಕುರಿತು ಮಾಹಿತಿ ನೀಡಿದೆ.

ವಾಹನ ಸಂಚಾರ ಬಂದ್‌: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ನಂದಿ ಸಮೀಪ ಸುಲ್ತಾನಪೇಟೆ ಬಳಿ ರಸ್ತೆಗೆ ಗುಡ್ಡ ಕುಸಿದು ಕೆಲಕಾಲ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ನಡುವಿನ ರಸ್ತೆ ಸಂಚಾರ ಬಂದ್‌ ಆಗಿತ್ತು. ಬಳಿಕ ಜೆಸಿಬಿ ಯಂತ್ರಗಳ ಕಾರ್ಯಾಚರಣೆ ಮೂಲಕ ರಸ್ತೆಗೆ ಬಿದ್ದಿದ್ದ ಅಪಾರ ಪ್ರಮಾಣದ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Chikkaballapur: ಕಂಬಳಿ ಹುಳು ಕಾಟಕ್ಕೆ ಅನ್ನದಾತರ ಕಂಗಾಲು

ಕೊತ್ತನೂರು ಗ್ರಾಮ ಜಲಾವೃತ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಹೊರ ವಲಯದ ಎಸ್‌ಜೆಸಿಟಿ ಕಾಲೇಜು ಬಳಿ ಇರುವ ಕೊತ್ತನೂರು ಗ್ರಾಮ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಸಂಪೂರ್ಣ ಜಲಾವೃತಗೊಂಡಿದ್ದು ಗ್ರಾಮಸ್ಥರು ರಾತ್ರಿ ಇಡೀ ನಿದ್ದೆ ಇಲ್ಲದೇ ಜಾಗರಣೆ ಮಾಡಿದ್ದಾರೆ. ಮಳೆಯ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿಗೆ ನಷ್ಠ ಉಂಟು ಮಾಡಿದೆ. ಧವಸ ಧಾನ್ಯಗಳು, ಬಟ್ಟೆಗಳು, ಮಹತ್ವದ ದಾಖಲೆಗಳು ನೀರು ಪಾಲಾಗಿವೆ. ಕೊತ್ತನೂರು ಗ್ರಾಮದಲ್ಲಿ ದೇವಾಲಯ, ಶಾಲೆಗಳಿಗೂ ನೀರು ನುಗ್ಗಿ ಸಾಕಷ್ಟುಅವಾಂತಾರ ಸೃಷ್ಠಿಯಾಗಿದೆ. ವಿಷಯ ತಿಳಿದ ಕೂಡಲೇ ಗ್ರಾಮಕ್ಕೆ ಡೀಸಿ ನಾಗರಾಜ್‌, ತಹಶೀಲ್ದಾರ್‌ ಗಣಪತಿಶಾಸ್ತ್ರಿ ತೆರಳಿ ಜೆಸಿಬಿ ಯಂತ್ರಗಳ ಮೂಲಕ ಮಳೆ ನೀರು ತೆರವುಗೊಳಿಸಲಾಯಿತು.